‘ನನಗಾರು ಗತಿ ಇನ್ನು?’ ತೀರಿಹೋದ ವ್ಯಕ್ತಿಯ ಬಳಿ ಶೋಕಿಸುತ್ತ ಕುಳಿತ ಕೋತಿ

Love : ತನ್ನನ್ನು ಪೊರೆದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸುತ್ತಿದೆ ಈ ಕೋತಿ. ಅವನನ್ನು ಮುಟ್ಟಿ ನೋಡುತ್ತಿದೆ. ಮುಖಕ್ಕೆ ಮುತ್ತಿಕ್ಕುತ್ತಿದೆ. ಪಾಪ ತನ್ನ ನೋವನ್ನು ಇನ್ನದು ಹೇಗೆ ವ್ಯಕ್ತಪಡಿಸೀತು?

‘ನನಗಾರು ಗತಿ ಇನ್ನು?’ ತೀರಿಹೋದ ವ್ಯಕ್ತಿಯ ಬಳಿ ಶೋಕಿಸುತ್ತ ಕುಳಿತ ಕೋತಿ
Monkey attends funeral of man who used to feed him Video leaves netizens emotional
Edited By:

Updated on: Oct 22, 2022 | 12:38 PM

Viral Video : ನಿನ್ನೆಯಷ್ಟೇ ವೈರಲ್ ಆದ ಕೋತಿಯ ಸ್ಟೋರಿ ಓದಿದ್ದೀರಿ. ಪ್ರೀತಿಗೆ ಪ್ರೀತಿ, ದ್ವೇಷಕೆ ದ್ವೇಷ, ಹೌದು. ಪ್ರಾಣಿಗಳು ಇರುವುದೇ ಹಾಗೇ. ಅದರಲ್ಲೂ ಕೋತಿಯ ಸ್ವಭಾವ ಸಾಮಾನ್ಯವಾಗಿ ಹೀಗೇ. ಆದರೆ ಪ್ರಾಣಿ ಮತ್ತು ಮನುಷ್ಯರ ನಡುವಿನ ಬಾಂಧವ್ಯವನ್ನು ಸಾರುತ್ತದೆ ಇದೀಗ ವೈರಲ್ ಆದ ವಿಡಿಯೋ ಈ ವಿಡಿಯೋ. ದಿನವೂ ಇದಕ್ಕೆ ತಿಂಡಿತಿನಿಸು ಕೊಟ್ಟು ಪೋಷಿಸುತ್ತಿದ್ದ ವ್ಯಕ್ತಿ ಅನಾರೋಗ್ಯದಿಂದ ಮರಣವನ್ನಪ್ಪಿದ್ದಾರೆ. ಆದರೆ ಈ ಕೋತಿ ಮಾತ್ರ ಅವರ ಬಳಿ ಗಟ್ಟಿಯಾಗಿ ಕುಳಿತುಬಿಟ್ಟಿದೆ. ಮನುಷ್ಯರಿಗಿಂತ ಹೆಚ್ಚು ಸೂಕ್ಷ್ಮತೆ ಮತ್ತು ಪ್ರಜ್ಞೆ ಪ್ರಾಣಿಗಳಲ್ಲಿಯೇ ಇರುವುದು ಹೆಚ್ಚು ಎನ್ನುವುದು ಇದಕ್ಕೇ. ಮಾತು ಬರುವುದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅವುಗಳನ್ನು ಪ್ರಾಣಿ ಎಂದು ದೂರವಿಡಲಾಗದು. ಅವುಗಳಲ್ಲಿಯೂ ಮಾನವೀಯತೆ ಅಂತಃಕರಣ ಕೃತಜ್ಞತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಪೋಸ್ಟ್​.

ತನ್ನನ್ನು ಪೊರೆದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸುತ್ತಿದೆ ಈ ಕೋತಿ. ಅವನನ್ನು ಮುಟ್ಟಿ ನೋಡುತ್ತಿದೆ. ಮುಖಕ್ಕೆ ಮುತ್ತಿಕ್ಕುತ್ತಿದೆ. ಪಾಪ ತನ್ನ ನೋವನ್ನು ಇನ್ನದು ಹೇಗೆ ವ್ಯಕ್ತಪಡಿಸೀತು? ಈತನಕ ಸುಮಾರು 2,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ತೀರಿಹೋದ ವ್ಯಕ್ತಿ ಅದೆಂಥ ಕರುಣಾಮಯಿ ಇದ್ದರೋ, ಅದಕ್ಕೆ ಈ ಕೋತಿ ಹೀಗೆ ವರ್ತಿಸುತ್ತಿದೆ ಎಂದಿದ್ದಾರೆ ಒಬ್ಬರು.

ಏನೇ ಹೇಳಿ ಪ್ರಾಣಿ ಮತ್ತು ಮಾನವನ ಇಂಥ ಬಂಧ ಅಪರೂಪ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:32 pm, Sat, 22 October 22