Video Viral: ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ನೋಡಿ; ವಿಡಿಯೋ ವೈರಲ್​

|

Updated on: Aug 15, 2024 | 4:44 PM

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬಾಲಕಿ ಕೋತಿಯನ್ನು ಚುಡಾಯಿಸಲು ಗೂಡಿನ ಬಳಿ ಹೋಗಿರುವುದನ್ನು ಕಾಣಬಹುದು. ಆದರೆ ಕೋಪಗೊಂಡ ಕೋತಿ ಆಕೆಯ ಕೂದಳನ್ನು ಗಟ್ಟಿಯಾಗಿ ಹಿಡಿದೆಳೆದಿದೆ. ಕೋತಿ ಬಹಳ ಸಮಯದವರೆಗೆ ಆಕೆಯ ಕೂದಲನ್ನು ಎಳೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Video Viral: ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ನೋಡಿ; ವಿಡಿಯೋ ವೈರಲ್​
Follow us on

ಕೋತಿಯೊಂದು ಬಾಲಕಿಯ ಕೂದಲು ಹಿಡಿದು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಬಾಲಕಿ ಕೋತಿಗೆ ಹೊಡೆಯುವಂತೆ ಚೇಷ್ಟೆ ಮಾಡಿದ್ದು, ಬೋನಿನ ಒಳಗಿದ್ದ ಕೋತಿ ಕೂಡಲೇ ಜಿಗಿದು ಆಕೆಯ ತಲೆಯ ಕೂದಲನ್ನು ಎಳೆದಿದೆ.

ಆ ಕೋತಿಯಿಂದ ಬಿಡಿಸಿಕೊಳ್ಳಲು ಬಾಲಕಿ ಪ್ರಯತ್ನಿಸಿದರೂ ಕೂಡ ಬಾಲಕಿಯ ಕೂದಲನ್ನು ಬಿಡುವುದಿಲ್ಲ. ಹೀಗಾಗಿ ಅಲ್ಲಿನ ಜನರು ಬಾಲಕಿಯನ್ನು ಕೋತಿಯಿಂದ ಬಿಡಿಸಿದ್ದಾರೆ. ಅಲ್ಲಿಯವರೆಗೂ ಖುಷಿಯಾಗಿದ್ದ ಬಾಲಕಿ ಕೋತಿ ಕೂದಲೆಳೆದ ರಭಸಕ್ಕೆ ನೋವಿನಿಂದ ಅಳಲು ಪ್ರಾರಂಭಿಸಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬಾಲಕಿ ಕೋತಿಯನ್ನು ಚುಡಾಯಿಸಲು ಗೂಡಿನ ಬಳಿ ಹೋಗಿರುವುದನ್ನು ಕಾಣಬಹುದು. ಆದರೆ ಕೋಪಗೊಂಡ ಕೋತಿ ಆಕೆಯ ಕೂದಳನ್ನು ಗಟ್ಟಿಯಾಗಿ ಹಿಡಿದೆಳೆದಿದೆ. ಕೋತಿ ಬಹಳ ಸಮಯದವರೆಗೆ ಆಕೆಯ ಕೂದಲನ್ನು ಎಳೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್​

@najarsingh_1322 ಎಂಬ ಇನ್ಸ್ಟಾಗ್ರಾಮ್​​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ. ಆಗಸ್ಟ್​​​​ 03ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 55.4 ಮಿಲಿಯನ್​​ ಅಂದರೆ 5ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ