Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

ಮಂಗವೊಂದು ಸಲೂನ್​ಗೆ ಭೇಟಿ ನೀಡಿದ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಸಲೂನ್​ಗೆ ಭೇಟಿ ನೀಡಿದ ನಂತರ ಕೋತಿಯು ಸ್ಮಾರ್ಟ್ ಆಗಿ ಕಾಣಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ
ಸಲೂನ್​ನಲ್ಲಿ ಕೋತಿ
Edited By:

Updated on: Dec 03, 2021 | 9:00 AM

ಇಂದಿನ ಆಧುನಿಕ ಜಗತ್ತಿನಲ್ಲಿ ಸೌಂದರ್ಯಕ್ಕೆ ಹೆಚ್ಚು ಮಣೆ ಹಾಕಲಾಗುತ್ತದೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೆಚ್ಚು ಸೌಂದರ್ಯದ ಕಾಳಜಿ ಮಾಡುತ್ತಾರೆ. ಮಹಿಳೆಯರು ಬ್ಯೂಟಿಪಾರ್ಲರ್ ಮೊರೆ ಹೋದರೆ, ಪುರುಷರು ತಮ್ಮ ಅಂದ ಹೆಚ್ಚಿಸಿಕೊಳ್ಳಲು ಸಲೂನ್ (Barber shop) ಮೊರೆ ಹೋಗುತ್ತಾರೆ. ಆದರೆ ಇತ್ತೀಚೆಗಿನ ಬೆಳವಣಿಗೆ ಎಲ್ಲರನ್ನೂ ಆಕರ್ಷಿಸಿದೆ. ಪ್ರಾಣಿಗಳು ಕೂಡ ಸಲೂನ್​ಗೆ ದಾವಿಸುತ್ತಿವೆ. ಇದನ್ನು ನಂಬಲು ಸ್ವಲ್ಪ ಕಷ್ಟ ಆದರೂ ಇದೇ ನಿಜ. ಕೋತಿಯೊಂದು (Monkey) ಸಲೂನ್​ಗೆ ಬಂದಿದ್ದು, ತನ್ನ ಗಡ್ಡವನ್ನು ಟ್ರಿಮ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗವೊಂದು ಸಲೂನ್​ಗೆ ಭೇಟಿ ನೀಡಿದ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಸಲೂನ್​ಗೆ ಭೇಟಿ ನೀಡಿದ ನಂತರ ಕೋತಿಯು ಸ್ಮಾರ್ಟ್ ಆಗಿ ಕಾಣಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 1,000 ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.

ವಿಡಿಯೋದಲ್ಲಿ ಕೋತಿಯು ತನ್ನ ಕೇಶ ವಿನ್ಯಾಸಕ್ಕೆ ಕುರ್ಚಿಯ ಮೇಲೆ ಕುಳಿತಿದ್ದು, ಕ್ಷೌರಿಕ ಕೋತಿಯ ಮುಖದತ್ತ ಟ್ರಿಮ್ಮರ್‌ ತರುತ್ತಿದ್ದಂತೆ ಅದರ ಪ್ರತಿಕ್ರಿಯೆಗೆ ಸದ್ಯ ನೆಟ್ಟಿಗರು ಹಾಸ್ಯಲೋಕದಲ್ಲಿಯೇ ತೆಲುವಂತೆ ಮಾಡಿದೆ. ಕ್ಷೌರಿಕನ ಮಾತನ್ನು ಚಾಚು ತಪ್ಪದೆ ಕೇಳುತ್ತಿದ್ದ ಕೋತಿಯನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ ಮತ್ತು ವಿಡಿಯೋವನ್ನು ರಿಪೋಸ್ಟ್ ಮಾಡಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:

Viral Video: ರಾತ್ರಿ ಹೊತ್ತು ರಸ್ತೆಯಲ್ಲಿ ಕಾರು ನಿಲ್ಲಿಸಿದ ಮಹಿಳೆಯರು ಕದ್ದಿದ್ದೇನು ಗೊತ್ತಾ? ತಮಾಷೆಯ ವಿಡಿಯೊ ಫುಲ್​ ವೈರಲ್​

Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!