AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿದ್ದ ರೈಲಿನಿಂದ ಜಿಗಿದ ಇಬ್ಬರು ಮಹಿಳೆಯರು; ವೀರೋಚಿತ ರಕ್ಷಣೆ

ರೈಲ್ವೇ ಮಂಡಳಿ ಈ ಕುರಿತು ಟ್ವೀಟ್ ಮಾಡಿದ್ದು, ಸಂತ್ರಗಚಿ-ಆನಂದ್ ವಿಹಾರ್ ಎಕ್ಸ್‌ಪ್ರೆಸ್​ನಿಂದ ಇಬ್ಬರು ಮಹಿಳೆಯರು ಜಿಗಿದ ಸಿಸಿಟಿವಿ ಫೂಟೇಜ್‌ನ ವಿಡಿಯೋವನ್ನು ಪೋಸ್ಟ್ ಮಾಡಿದೆ.

Viral Video: ಚಲಿಸುತ್ತಿದ್ದ ರೈಲಿನಿಂದ ಜಿಗಿದ ಇಬ್ಬರು ಮಹಿಳೆಯರು; ವೀರೋಚಿತ ರಕ್ಷಣೆ
ರೈಲಿನಿಂದ ಕೆಳಗೆ ಬಿದ್ದ ದೃಶ್ಯ
TV9 Web
| Edited By: |

Updated on: Dec 03, 2021 | 12:47 PM

Share

ದೆಹಲಿ: ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯುವ ಯತ್ನದಲ್ಲಿ ಇಬ್ಬರು ಮಹಿಳೆಯರು ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾರಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ (Viral Video) ಆಗಿದ್ದು, ನೆಟ್ಟಿಗರು ವಿಡಿಯೋ ಕಂಡು ಒಮ್ಮೆಲೆಗೆ ಗಾಬರಿಗೊಂಡಿದ್ದಾರೆ. ರೈಲಿನಿಂದ ಒಮ್ಮೆಲೇ ಜಿಗಿದ ಇಬ್ಬರು ಮಹಿಳೆಯರು ರೈಲಿನ ಅಡಿಗೆ ಬೀಳದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋದಲ್ಲಿ ಬಂಗಾಳದ ಪುರುಲಿಯಾ ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಯೊಬ್ಬರು ಮಹಿಳೆಯನ್ನು ರೈಲಿಗೆ ಸಿಲುಕುವುದರಿಂದ ತಪ್ಪಿಸಿದ್ದಾರೆ.

ರೈಲ್ವೇ ಮಂಡಳಿ ಈ ಕುರಿತು ಟ್ವೀಟ್ ಮಾಡಿದ್ದು, ಸಂತ್ರಗಚಿ-ಆನಂದ್ ವಿಹಾರ್ ಎಕ್ಸ್‌ಪ್ರೆಸ್​ನಿಂದ ಇಬ್ಬರು ಮಹಿಳೆಯರು ಜಿಗಿದ ಸಿಸಿಟಿವಿ ಫೂಟೇಜ್‌ನ ವಿಡಿಯೋವನ್ನು ಪೋಸ್ಟ್ ಮಾಡಿದೆ. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಮೊದಲು ಒಬ್ಬ ಮಹಿಳೆ ಜಿಗಿದಿದ್ದು, ರೈಲಿನಿಂದ ಸ್ವಲ್ಪ ಅಂತರದಲ್ಲಿ ಬಿದ್ದಿದ್ದಾರೆ. ಈ ಮಹಿಳೆ ಬೆನ್ನಲ್ಲೆ ಮತ್ತೊಬ್ಬ ಮಹಿಳೆ ಜಿಗಿದಿದ್ದು, ರೈಲಿನ ಹತ್ತಿರದಲ್ಲೇ ಬಿದ್ದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದು, ಒಂದು ಕ್ಷಣ ಎಲ್ಲರಲ್ಲೂ ಭಯ ಹುಟ್ಟಿಸುವಂತಿದೆ ಈ ವಿಡಿಯೋ.

ಸಮಯಕ್ಕೆ ಸರಿಯಾಗಿ ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ಬಬ್ಲು ಕುಮಾರ್ ಓಡಿ ಬಂದು ಆಕೆಯನ್ನು ಪ್ಲಾಟ್‌ಫಾರ್ಮ್‌ ಕಡೆಗೆ ಎಳೆದಿದ್ದಾರೆ. ಮಹಿಳೆಯನ್ನು ರಕ್ಷಿಸಲು ಧುಮುಕಿದ ಮತ್ತೊಬ್ಬರು ಪ್ರಯಾಣಿಕರನ್ನು ಈ ವಿಡಿಯೋದಲ್ಲಿ ನೋಡಬಹುದು.

ಚಲಿಸುವ ರೈಲುಗಳನ್ನು ಹತ್ತುವುದು ಮತ್ತು ಇಳಿಯುವುದರ ವಿರುದ್ಧ ಅಧಿಕಾರಿಗಳು ಪದೇ ಪದೇ ಎಚ್ಚರಿಕೆ ಮತ್ತು ಮನವಿ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ, ಪ್ರಯಾಣಿಕರು ತಮ್ಮ ಜೀವವನ್ನು ಅಪಾಯಕ್ಕೆ ತಂದಿಡುತ್ತಿದ್ದಾರೆ. ಪ್ಲಾಟ್‌ಫಾರ್ಮ್‌ನಿಂದ ಒಬ್ಬ ಪ್ರಯಾಣಿಕ ರೈಲು ಹತ್ತುತ್ತಿರುವ ದೃಶ್ಯ ಕೂಡ ಈ ವಿಡಿಯೋದಲ್ಲಿ ಕಂಡು ಬಂದಿದೆ. ಒಟ್ಟಾರೆ ಈ ವಿಡಿಯೋ ಕಂಡ ಅನೇಕರು ಮಹಿಳೆಯರ ದುಸ್ಸಾಹಸಕ್ಕೆ ಬೆರಗಾಗಿದ್ದು, ಮತ್ತೆ ಹೀಗೆ ಯಾರು ಮಾಡಬೇಡಿ ಎಂಬ ಕೂಗು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Viral Video: ಸಲೂನ್​ಗೆ ಬಂದ ಕೋತಿ ಟ್ರಿಮ್ಮರ್​ಗೆ ಮುಖವೊಡ್ಡಿದ ವೈರಲ್​ ವಿಡಿಯೋ ನೋಡಿ

Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್