ಮಕ್ಕಳ ಪಾಲನೆ ಅಷ್ಟು ಸುಲಭದ ಕೆಲಸವಲ್ಲ. ಪೋಷಕರು ಈ ಬಗ್ಗೆ ಎಷ್ಟು ಕಾಳಜಿ ವಹಿಸಿದರು ಕಡಿಮೆಯೇ. ಅದರಲ್ಲೂ ಸದಾ ತುಂಟಾಟವಾಡುವ ಮಕ್ಕಳನ್ನು ಸಂತೈಸುವುದು ಒಂದು ದೊಡ್ಡ ಸವಾಲು. ಸದ್ಯ ಮಗುವನ್ನು ಸಂತೈಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಮಹಿಳೆಯೊಬ್ಬಳು ತನ್ನ ಕೋಪಗೊಂಡ ಮಗನನ್ನು ಗದರಿಸದೆ ಅಥವಾ ಮಗುವಿನ ಮೇಲೆ ತನ್ನ ಕೋಪವನ್ನು ತೋರಿಸದೆ ಸಮಾಧಾನ ಮಾಡಿದ್ದಾರೆ. ಇದು ನಿಜಕ್ಕೂ ಮಕ್ಕಳನ್ನು ಸಂತೈಸಲು ಪೋಷಕರಿಗೆ (Parents) ಒಂದು ಹೊಸ ಮಾರ್ಗವಾಗಿ ಪರಿಣಮಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಮ್ಮ ಎಂದರೆ ಹೀಗೆ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡೆಸ್ಟಿನಿ ಬೆನೆಟ್ ಅವರು ಇನ್ಸ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೋಪಗೊಂಡ ಮಗನ ಜೊತೆ ಮಾತನಾಡಲು ಮಂಡಿಯೂರಿ ತಾಯಿ ಕುಳಿತಿದ್ದಾಳೆ. ತನ್ನ ಧ್ವನಿಯನ್ನು ಹೆಚ್ಚಿಸುವ ಬದಲು ತಾಯಿ ತನ್ನ ಮಗನೊಂದಿಗೆ ನಯವಾಗಿ ಮಾತನಾಡಿದ್ದಾಳೆ.
ನನ್ನ 5 ವರ್ಷದ ಮಗ ದೊಡ್ಡಮಟ್ಟದ ಭಾವನೆಗಳೊಂದಿಗೆ ಹೋರಾಡುತ್ತಾನೆ. ಇಂದು ಬೆಳಿಗ್ಗೆ ಅವನು ತುಂಬಾ ಕೋಪದಿಂದ ವರ್ತಿಸಿದ ಮತ್ತು ಅವನ ನಡವಳಿಕೆಯಿಂದ ನಾನು ಪ್ರಚೋದನೆಗೊಳಗಾಗುತ್ತೇನೆ ಎಂದು ಭಾವಿಸಿದೆ. ಹೀಗಾಗಿ ನಾನು ಅವನೊಂದಿಗೆ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದೆ. ನಮ್ಮ ಮನೆಯ ಬಾಗಿಲ ಬಳಿಯ ಕ್ಯಾಮರಾ ಈ ದೃಶ್ಯವನ್ನು ಸೆರೆಹಿಡಿದಿದೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಬೆನೆಟ್ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬೆನೆಟ್ ತನ್ನ ಮಗನನ್ನು ಪ್ರಶ್ನಿಸಿದ್ದಾಳೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ನಿನಗೆ ತಿಳಿದಿದೆಯೇ ಎಂದು ಕೇಳಿದ್ದಾಳೆ. ನಿನ್ನ ಕೋಪವನ್ನು ನಾನು ಸಹಿಸುತ್ತೇನೆ. ಆದರೆ ನೀನು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದನ್ನು ನಾನು ನೋಡಲು ಇಷ್ಟ ಪಡುತ್ತೇನೆ ಎಂದು ಮಗನಿಗೆ ತಿಳಿ ಹೇಳಿದ್ದಾಳೆ.
ಕೆಲವೊಮ್ಮೆ ನಮಗೆ ಬೇಕಾದುದನ್ನು ಪಡೆಯುವುದು ಉತ್ತಮ. ಆದರೆ ಕೆಲವೊಮ್ಮೆ ನಾವು ಬಯಸಿದ ವಸ್ತುಗಳನ್ನು ಪಡೆಯಲು ಸಾಧ್ಯವಿಲ್ಲ. ಇದರಿಂದ ಕೋಪಗೊಳ್ಳುವುದು ಸಹಜ. ಆದರೆ ನಂತರ ನಾವು ಅದನ್ನು ಕೈಬಿಡಬೇಕು ಮತ್ತು ನಾವು ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಆಗ ನಾವು ಉತ್ತಮರಾಗುತ್ತೇವೆ. ನೀನು ನಿನ್ನನ್ನು ಪ್ರೀತಿಸಬೇಕು ಮತ್ತು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ತಾಯಿ ಈ ವಿಡಿಯೋದಲ್ಲಿ ತನ್ನ ಮಗನನ್ನು ಸಂತೈಸಿದ್ದಾಳೆ.
ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದು, ಎಲ್ಲಾ ಪೋಷಕರು ಈ ಮಾರ್ಗವನ್ನೇ ಅನುಸರಿಸಬೇಕು ಮತ್ತು ಮಕ್ಕಳ ಭಾವನೆಗಳಿಗೆ ಪೋಷಕರು ಬೆಲೆ ಕೊಡಬೇಕು ಎಂದು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್
Viral Video: ಸಲೂನ್ಗೆ ಬಂದ ಕೋತಿ ಟ್ರಿಮ್ಮರ್ಗೆ ಮುಖವೊಡ್ಡಿದ ವೈರಲ್ ವಿಡಿಯೋ ನೋಡಿ
Published On - 9:52 am, Fri, 10 December 21