Video: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ಕೊಂಡು ಹೋದ ತಾಯಿ

ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದನ್ನು ನೀವು ನೋಡಿರಬಹುದು. ಈ ವಿಡಿಯೋ ನಿಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುತ್ತದೆ. ಹೌದು, ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ತಾಯಿಯು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ಕೊಂಡು ಹೋದ ತಾಯಿ
ವೈರಲ್‌ ವಿಡಿಯೋ
Image Credit source: Twitter

Updated on: Jan 21, 2026 | 2:01 PM

ಮಕ್ಕಳು (children) ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸ್ತಾರೆ. ಇನ್ನು ಕೆಲವೊಮ್ಮೆ ಮಕ್ಕಳಿಗೆ ಹೆತ್ತವರ ಕೈಯಲ್ಲಿ ಹೊದೆ ಬೀಳೋದಿದೆ. ಈ ವಿಡಿಯೋ ನೋಡಿದ್ರೆ ನಿಮಗೆ ನಿಮ್ಮ ಬಾಲ್ಯವಂತು ಖಂಡಿತ ನೆನಪಾಗದೇ ಇರದು. ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಾಗ ನಿಮ್ಮ ಅಮ್ಮನೂ ಕೂಡ ಹೀಗೆಯೇ ಮಾಡಿರುತ್ತಾಳೆ. ಹೌದು ಪುಟ್ಟ ಬಾಲಕನು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದು, ಪುಟಾಣಿಯ ತಾಯಿ ಪಟ್ಟು ಹಿಡಿದು ಶಾಲೆಗೆ ಕರೆದುಕೊಂಡು ಹೋಗುವ ವಿಡಿಯೋ  ವೈರಲ್‌ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಬಾಲ್ಯ ನೆನಪಾಯ್ತು ಎಂದಿದ್ದಾರೆ.

ಮಾರಿಯಮ್ಮ ಎಂಬಿಡಿ (Mariyam_MBD) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋಗೆ ಒಬ್ಬ ತಾಯಿ ಅನಕ್ಷರಸ್ಥಳಾಗಿದ್ದರೂ, ಅವಳು ಯಾವಾಗಲೂ ತನ್ನ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುತ್ತಾಳೆ ಎಂಬ ಶೀರ್ಷಿಕೆ ಬರೆಯಲಾಗಿದೆ. ಈ ಕ್ಲಿಪ್‌ನಲ್ಲಿ ಪುಟ್ಟ ಬಾಲಕನು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದನ್ನು ಕಾಣಬಹುದು. ಈ ವೇಳೆ ತಾಯಿ ಒಂದು ಕೈಯಲ್ಲಿ ಚೀಲ ಹಾಗೂ ಕೋಲನ್ನು ಹಿಡಿದುಕೊಂಡು ಪುಟ್ಟ ಬಾಲಕನನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಈ ನಡುವೆ ಮತ್ತೆ ಮತ್ತೆ ಹಠ ಹಿಡಿಯಲು ಶುರು ಮಾಡಿದಾಗ ಕೋಲಿನಿಂದ ಜೋರಾಗಿ ಬಾರಿಸುತ್ತಾಳೆ. ಅಮ್ಮನ ಕೈಯಲ್ಲಿ ಹೊದೆ ತಿಂದು ಈ ಪುಟ್ಟ ಹುಡುಗನು ಅಳುತ್ತಿರುವುದನ್ನು ಕಾಣಬಹುದು. ಈ ವೇಳೆಯೂ ಅಲ್ಲೇ ಇದ್ದ ಮತ್ತೊಂದು ಪುಟಾಣಿಯೂ ಬಂದು ಅಮ್ಮನ ಕೈಯಲ್ಲಿದ್ದ ಬ್ಯಾಗ್ ತೆಗೆದು ಕೊಂಡು ಹೆಗಲಿಗೇರಿಸಿಕೊಂಡಿದೆ. ಇತ್ತ ಹಠ ಹಿಡಿದು ಅಳುತ್ತಾ ನಿಂತಿದ್ದ ತನ್ನ ಮಗನನ್ನು ತಾಯಿಯೂ ಎತ್ತು ಕೊಂಡು ಹೋಗುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ಇದನ್ನೂ ಓದಿ: ನನ್ನ ತಂಗಿ ಎಷ್ಟು ಮುದ್ದಾಗಿದ್ದಾಳೆ; ನವಜಾತ ಶಿಶುವನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಪುಟ್ಟ ಹುಡುಗ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ತಾಯಿಗೆ ನನ್ನದೊಂದು ನಮಸ್ಕಾರ ಎಂದಿದ್ದಾರೆ. ಮತ್ತೊಬ್ಬರು, ನಾವು ಬಾಲ್ಯದಲ್ಲಿ ಈ ರೀತಿಯೇ ಶಾಲೆಗೆ ಹೋಗುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ತಾಯಿಯೂ ಹೀಗೆಯೇ ಇದ್ದರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ