Viral Video : ತನ್ನ ಮರಿಯನ್ನು ಕಳೆದುಕೊಂಡ ತಾಯಿಆನೆಯೂ ಅಷ್ಟೇ ದುಃಖಪಟ್ಟಿರುತ್ತದೆ. ತಾಯಿಯಾನೆಯನ್ನು ಕಳೆದುಕೊಂಡ ಮರಿಯೂ ಅಷ್ಟೇ ಕಂಗಾಲಾಗಿರುತ್ತದೆ. ಅಂತೂ ತಾಯಿ-ಮರಿಯನ್ನು ಒಂದುಗೂಡಿಸುವಲ್ಲಿ ತಮಿಳುನಾಡು ಅರಣ್ಯಾಧಿಕಾರಿಗಳು ಸಫಲರಾಗಿದ್ದಾರೆ. ಇದರಿಂದ ಪ್ರಫುಲ್ಲಿತಗೊಂಡ ತಾಯಿಆನೆ ಅರಣ್ಯಾಧಿಕಾರಿಗಳಿಗೆ ಆಶೀರ್ವದಿಸುವ ಮೂಲಕ ಕೃತಜ್ಞತೆ ಅರ್ಪಿಸಿದೆ. ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
That blessings??
ಇದನ್ನೂ ಓದಿCalf was reunited with its mother by the Forest staff.
Mamma blesses them before leaving with the baby for its abode. Too cute to miss.
VC: TN Forest Department pic.twitter.com/tygEbc1aME— Susanta Nanda IFS (@susantananda3) September 22, 2022
ಆನೆಗಳು ಕೌಟುಂಬಿಕ ಜೀವಿಗಳು ಹಾಗಾಗಿ ಅವು ಹಿಂಡಿನಲ್ಲಿಯೇ ಚಲಿಸುವುದುಂಟು. ಆದರೂ ಕೆಲವೊಮ್ಮೆ ಹೀಗೆ ದಾರಿತಪ್ಪಿ ಮರಿಗಳು ಹಿಂದಿನಿಂದ ಬೇರ್ಪಡುವ ಸಂದರ್ಭ ಬರುತ್ತಿರುತ್ತದೆ. ಆಗ ಆನೆಗಳು ಜಾತ್ರೆಯಲ್ಲಿ ತಪ್ಪಿಸಿಕೊಂಡ ಪುಟ್ಟ ಮಕ್ಕಳಂತೆ.
ಈ ವಿಡಿಯೋ ನೋಡಿ ಮರಿಯೊಂದಿಗೆ ಬರುತ್ತಿರುವ ಆನೆ ತನ್ನ ಸೊಂಡಿಲನ್ನು ಎತ್ತಿ ಅರಣ್ಯಾಧಿಕಾರಿಗಳಿಗೆ ಆಶೀರ್ವಾದ ಮಾಡಿ ಕಾಡು ಸೇರುತ್ತದೆ. ಈ ವಿಡಿಯೋ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಈ ವಿಷಯವಾಗಿ ತಮಿಳುನಾಡಿನ ಅರಣ್ಯಾಧಿಕಾರಿಗಳನ್ನು ನೆಟ್ಟಿಗರು ಶ್ಲಾಘಿಸಿದ್ಧಾರೆ.
‘ಇದು ಬಹಳ ಸುಂದರವಾದ ದೃಶ್ಯ. ನಿಮ್ಮ ಕಾರ್ಯ ಸ್ತುತ್ಯಾರ್ಹ. ಆನೆಗಳು ಎಂದಿಗೂ ಅಮೂಲ್ಯ’ ಎಂದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು. ‘ಕಠಿಣ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿದ ಅರಣ್ಯ ಸಿಬ್ಬಂದಿಗೆ ಪ್ರಾಣಿಪ್ರಿಯರ ಪರವಾಗಿ ಹಾರೈಕೆಗಳು’ ಎಂದಿದ್ದಾರೆ ಮತ್ತೊಬ್ಬರು. ‘ಈ ಉದಾತ್ತ ಕೆಲಸವನ್ನು ಮಾಡಿದ ಅರಣ್ಯ ಸಿಬ್ಬಿಂದಿಗೆ ಒಳಿತಾಗಲಿ’ ಎಂದು ಹಾರೈಸಿದ್ದಾರೆ ಮತ್ತೊಬ್ಬರು.
ಕಳೆದ ತಿಂಗಳು ಹಿಂಡಿನಿಂದ ತಪ್ಪಿಸಿಕೊಂಡ ಆನೆಮರಿಯನ್ನು ಛತ್ತೀಸ್ಗಡ ಅಧಿಕಾರಿಗಳು ಹಿಂಡಿಗೆ ಸೇರಿಸಿದ ವಿಡಿಯೋ ವೈರಲ್ ಆಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
‘ಒಂದು ತಿಂಗಳ ಈ ಮರಿಯಾನೆ ಹಿಂಡಿನಿಂದ ಬೇರ್ಪಟ್ಟ ವಿಷಯ ನಮಗೆ ತಿಳಿಯಿತು. 15 ನಿಮಿಷಗಳಲ್ಲಿ ಮರಿ ಇದ್ದ ಸ್ಥಳಕ್ಕೆ ತಲುಪಿದೆವು. ಅದರ ಆರೋಗ್ಯ ತಪಾಸಣೆ ಮಾಡಿ ಮತ್ತೆ ಹಿಂಡಿನೊಂದಿಗೆ ಸೇರಿಸಿದೆವು’ ಎಂದಿದ್ದರು ಜಶ್ಪುರ್ ವಿಭಾಗೀಯ ಅರಣ್ಯಾಧಿಕಾರಿ ಜಿತೇಂದ್ರ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:20 am, Fri, 23 September 22