AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eyebrow Shape Personality Test : ನಿಮ್ಮ ಹುಬ್ಬುಗಳ ಆಕಾರ ಮತ್ತು ವ್ಯಕ್ತಿತ್ವ

Know Your Personality : ಹುಬ್ಬುಗಳ ಆಕಾರಕ್ಕೆ ತಕ್ಕಂತೆ ನಿಮ್ಮ ವ್ಯಕ್ತಿತ್ವ ರೂಪುಗೊಂಡಿರುತ್ತದೆ ಎನ್ನುವುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ನಿಮ್ಮ ಹುಬ್ಬುಗಳು ನಿಮ್ಮ ಬಗ್ಗೆ ಏನು ಹೇಳುತ್ತಿವೆ ತಿಳಿದುಕೊಳ್ಳಿ.

Eyebrow Shape Personality Test : ನಿಮ್ಮ ಹುಬ್ಬುಗಳ ಆಕಾರ ಮತ್ತು ವ್ಯಕ್ತಿತ್ವ
ಸೌಜನ್ಯ : ಅಂತರ್ಜಾಲ
TV9 Web
| Edited By: |

Updated on:Sep 23, 2022 | 2:25 PM

Share

Eyebrow Shape Personality Test : ಒಬ್ಬರ ಹುಬ್ಬಿನಂತೆ ಇನ್ನೊಬ್ಬರ ಹುಬ್ಬುಗಳು ಇರುವುದಿಲ್ಲ. ಆದರೆ ದಪ್ಪ, ತೆಳು, ನೇರ, ಕಮಾನು ಹೀಗೆ ಭಿನ್ನ ಆಕಾರಗಳಲ್ಲಿ ವಿಂಗಡಿಸಿ, ಆಯಾ ಆಕಾರಕ್ಕನುಸಾರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಮತ್ತು ಭಾವನಾತ್ಮಕ ಅಂಶ, ಬುದ್ಧಿವಂತಿಕೆಯ ಅಂಶಗಳ ಮಟ್ಟವನ್ನೂ ತಿಳಿದುಕೊಳ್ಳಬಹುದು. ಇದು ಅನೇಕ ಅಧ್ಯಯನಗಳ ಮೂಲಕ ದೃಢಪಟ್ಟಿದೆ. ಇಲ್ಲಿ ಕೊಟ್ಟಿರುವ ಹುಬ್ಬುಗಳ ಆಕಾರ ಮತ್ತು ಅವುಗಳು ಏನನ್ನು ಸೂಚಿಸುತ್ತವೆ ಎಂದು ಓದುತ್ತ ನೀವು ತಿಳಿದುಕೊಳ್ಳಬಹುದು. 

1. ದಪ್ಪ ಹುಬ್ಬು : ನೀವು ದಪ್ಪ ಹುಬ್ಬು ಹೊಂದಿದ್ದರೆ, ಸ್ವತಂತ್ರ ಮನೋಭಾವದವರು. ಪ್ರತಿಯೊಂದರಲ್ಲಿಯೂ ಸೌಂದರ್ಯವನ್ನು ಕಾಣುತ್ತೀರಿ. ಉತ್ತಮ ವಿಷಯಗಳನ್ನು ನೇರವಾಗಿ ಪ್ರಶಂಸಿಸುತ್ತೀರಿ. ಇತರರು ನಿಮ್ಮ ಬಗ್ಗೆ ಹೇಗೆ ಯೋಚಿಸುತ್ತಾರೆ, ಗ್ರಹಿಸುತ್ತಾರೆ ಎಂಬ ಬಗ್ಗೆ ನೀವು ಚಿಂತಿಸಲಾರಿರಿ. ಬದುಕಿನುದ್ದಕ್ಕೂ ಪರಿಪೂರ್ಣತೆಯೆಡೆಗಿನ ತುಡಿತ ನಿಮ್ಮದಾಗಿರುತ್ತದೆ. ನಿಮ್ಮ ಆದರ್ಶ, ಆಲೋಚನೆಗಳಿಗೆ ಅನುಗುಣವಾಗಿ ನಿಮ್ಮ ಬದುಕನ್ನು ಕಟ್ಟಿಕೊಳ್ಳುತ್ತೀರಿ. ಪ್ರತೀ ವಿಷಯಗಳ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸುತ್ತೀರಿ. ಹಾಗಾಗಿ ನಿಮ್ಮಲ್ಲಿ ನಿರ್ಧಾರ ಕೈಗೊಳ್ಳುವ ಗುಣ ಮತ್ತು ಆತ್ಮವಿಶ್ವಾಸ ಹೇರವಳವಾಗಿದೆ. ಅಲ್ಲದೆ, ನಿಮ್ಮದು ತಾರ್ಕಿಕ ವ್ಯಕ್ತಿತ್ವ. ಆದ್ದರಿಂದ ಭಾವನಾತ್ಕಕ ಏರಿಳಿತಗಳಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲಾರಿರಿ. ನಿಮ್ಮ ಗುರಿಗೆ ಅಡ್ಡಬರುವ ಸಂಗತಿಗಳನ್ನು ನಿರ್ಲಕ್ಷಿಸುತ್ತೀರಿ. 

2. ತೆಳು ಹುಬ್ಬು : ತೆಳ್ಳಗಿನ ಹುಬ್ಬುಗಳನ್ನು ಹೊಂದಿದ್ದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂದರ್ಥ. ಹಾಗಾಗಿ ನಿರ್ಧಾರ ಕೈಗೊಳ್ಳುವಾಗ ಹೊಯ್ದಾಟ ಉಂಟಾಗುತ್ತದೆ, ಆಗ ಇತರರ ಸಹಾಯ ಪಡೆಯಲು ಇಚ್ಛಿಸುತ್ತೀರಿ. ಧೈರ್ಯವೂ ಕಡಿಮೆ ಇರುವುದರಿಂದ, ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ತೆರೆದುಕೊಳ್ಳಲು ಕೂಡ ಬಹಳಷ್ಟು ಯೋಚಿಸುತ್ತೀರಿ. ಆದರೆ ಈ ಅತಿಯಾದ ಆಲೋಚನೆಯಿಂದಾಗಿಯೇ ನಿಮಗೆ ಒತ್ತಡ ಉಂಟಾಗುತ್ತಿರುತ್ತದೆ. ಆಗ  ಪ್ರತಿಯೊಂದಕ್ಕೂ ಇತರರ ಅಭಿಪ್ರಾಯಕ್ಕಾಗಿ ಅವಲಂಬಿಸುತ್ತೀರಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

3. ಕಮಾನು ಹುಬ್ಬು : ಕಮಾನಿನಾಕಾರದ ಹುಬ್ಬುಗಳು ನಿಮ್ಮವಾಗಿದ್ದಲ್ಲಿ, ಮಹತ್ವಾಕಾಂಕ್ಷೆ, ತಾಳ್ಮೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದ್ದೀರಿ ಎಂದರ್ಥ. ನೀವು ಯಾವ ವಿಷಯವನ್ನು ನೇರವಾಗಿ ತಿಳಿಸದೆ ಸಿಹಿಲೇಪಿಸಿ ಹೇಳಿಕೆಯ ಮೂಲಕ ಇತರರಿಗೆ ತಲುಪಿಸಲು ಇಷ್ಟಪಡುತ್ತೀರಿ. ನಿಮ್ಮ ಉಲ್ಲಸಿತ ಮನೋಭಾವದಿಂದ ನಿಮ್ಮ ಸುತ್ತಮುತ್ತಲಿನವರನ್ನು ಆಕರ್ಷಿಸುತ್ತೀರಿ ಜೊತೆಗೆ ಮಾತನಾಡುವ ಕೌಶಲ ಅವರನ್ನು ಸೆಳೆಯುತ್ತದೆಯಾದ್ದರಿಂದ ಅವರಾಗಿಯೇ ನಿಮ್ಮ ಬಳಿ ಬರುತ್ತಾರೆ. ಆದರೆ ಯಾರನ್ನಾದರೂ ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ನಿಮಗೆ ಸಾಕಷ್ಟು ಸಮಯ ಬೇಕು. ಅಲ್ಲದೆ, ನಿಮ್ಮ ಭಾವನಾತ್ಮಕ ಸ್ಪಂದನೆ ಸಶಕ್ತ ಮತ್ತು ಪ್ರಭಾವಶಾಲಿಯಾಗಿರುತ್ತದೆ.

4. ನೇರ ಹುಬ್ಬು :  ನೇರ ಹುಬ್ಬುಗಳು ನಿಮ್ಮವಾಗಿದ್ದರೆ ನೀವು ತಾರ್ಕಿಕದ ಕಡೆ ಹೆಚ್ಚು ಗಮನ ಕೊಡುವವರು. ಏಕೆಂದರೆ, ನಿಮ್ಮ ಹೃದಯವು ಭಾವನೆಗಳೆಡೆಗೆ ಜಾರುವುದು ನಿಮಗೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿರುತ್ತದೆ, ಅದನ್ನು ಮೀರಲೆಂದೇ ನೀವು ಎಚ್ಚರಿಕೆಯಿಂದ ಈ ನಡೆಯನ್ನು ರೂಢಿಸಿಕೊಂಡಿರುತ್ತೀರಿ. ಆದರೂ ನೀವು ಭಾವನೆಗಳಿಗೆ ಪ್ರಾಧಾನ್ಯ ಕೊಡುವಂಥ ಬೌದ್ಧಿಕ ಶಕ್ತಿಯುಳ್ಳ ವ್ಯಕ್ತಿ. ವೈಯಕ್ತಿಕ ಮತ್ತು ವೃತ್ತಿಜೀವನವನ್ನು ಪ್ರತ್ಯೇಕವಾಗಿ ಕಾಪಾಡಿಕೊಳ್ಳುವ ದಕ್ಷತೆ ನಿಮ್ಮಲ್ಲಿದೆ. ಆದ್ದರಿಂದಲೇ ವೃತ್ತಿ ವಿಷಯವಾಗಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವುದು ನೀವು ಕಡಿಮೆ. ಹಾಗೆಯೇ ನಿಮ್ಮಂತೆಯೇ ಭಾವನಾತ್ಮಕ ಸ್ಥಿರತೆಯುಳ್ಳ ವ್ಯಕ್ತಿಗಳಿಗೆ ಆದ್ಯತೆ ಕೊಡುತ್ತೀರಿ. ನಿಂತಕಾಲಮೇಲೆ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಸ್ವಭಾವ ಅಲ್ಲ. ನಿಮ್ಮನ್ನು ಕಾಪಾಡುವುದು ನಿಮ್ಮಲ್ಲಿರುವ ಹಠ, ನೇರವಂತಿಕೆ.

ಮೇಷ ರಾಶಿಯ ಮಹಿಳೆಯರಿಗೆ ಯಾವೆಲ್ಲ ರಾಶಿಯ ಪುರುಷರೊಂದಿಗೆ ಪ್ರೇಮಸಂಬಂಧದಲ್ಲಿ ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

5. ಕೂಡಿದ ಹುಬ್ಬು : ಕೂಡಿದ ಹುಬ್ಬುಗಳು ನಿಮ್ಮವಾಗಿದ್ದರೆ, ಜಗತ್ತು ನಿಮ್ಮನ್ನು ಹೇಗೆ ಗ್ರಹಿಸುತ್ತದೆ ಎನ್ನುವುದರ ಬಗ್ಗೆ ನೀವು ಹೆಚ್ಚು ಯೋಚಿಸಲಾರಿರಿ. ಆದರೆ, ನಿಮ್ಮ ಕಲ್ಪನೆ, ಸೃಜನಶೀಲತೆಯಿಂದಾಗಿ ಜನರು ನಿಮ್ಮೆಡೆ ಆಕರ್ಷಿತರಾಗುತ್ತಾರೆ. ನಿಮ್ಮ ಮುಕ್ತಸ್ವಭಾವದಿಂದಾಗಿ  ಮತ್ತು ಓತಪ್ರೇತವಾಗಿ ಹರಿಯುವ ಆಲೋಚನೆಗಳನ್ನು ಒಂದು ಆಕಾರಕ್ಕೆ ಹಿಡಿದಿಡುವಲ್ಲಿ ನಿಮಗೆ ಸಾಧ್ಯವಾಗಲಾರದು. ಪ್ರಕ್ಷುಬ್ಧ ಭಾವನೆ ಉಂಟುಮಾಡುವಂಥ ಕಾರ್ಯಾಲೋಚನೆಗಳನ್ನು ನೀವು ರೂಪಿಸುತ್ತೀರಿ. ನೀವು ಕರುಣಾಳು ಆದರೆ ಹಗಲುಗನಸು ಕಾಣುವವರು. ಇದರಿಂದಾಗಿ ನಿಮ್ಮ ಮನಸ್ಸು ಆಗಾಗ ನೊಂದುಕೊಳ್ಳುತ್ತಿರುತ್ತದೆ.

6. ಅಂತರದ ಹುಬ್ಬು : ನಿಮ್ಮ ಹುಬ್ಬುಗಳ ನಡುವೆ ಅಂತರ ಹೊಂದಿದ್ದರೆ, ನೀವು ಇತರರಿಗೆ ಬಲುಬೇಗ ಪ್ರಿಯವ್ಯಕ್ತಿಗಳಾಗಿಬಿಡುತ್ತೀರಿ. ಈ ಕಾರಣಕ್ಕಾಗಿ ನೀವು ಈ ವಿಷಯವಾಗಿ ಕೆಲವೊಮ್ಮೆ ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮದು ನೇರವಂತಿಕೆ ಸ್ವಭಾವವಾದರೂ ಬಾಹ್ಯಜಗತ್ತಿನಿಂದ ಸುಲಭವಾಗಿ ಪ್ರಭಾವಕ್ಕೆ ಒಳಗಾಗುತ್ತೀರಿ. ಇತರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಕೆಲವೊಮ್ಮೆ ನೀವು ಕೈಗೊಂಡ ನಿರ್ಧಾರಗಳು ತಪ್ಪು ಹಾದಿ ಹಿಡಿಯಬಹುದು. ಅದಕ್ಕೆ ಕಾರಣ, ನಿಮ್ಮಲ್ಲಿರುವ ಅತೀಭಾವುಕತನ.  ಮುಂದಾಲೋಚನೆ ಇಲ್ಲದೆ ವರ್ತಿಸುವ ಸ್ವಭಾವವೇ ನಿಮ್ಮ ಬದುಕಿನ ಚಲನೆಗೂ ಕಾರಣವಾಗುತ್ತದೆ. ನಿಮ್ಮಲ್ಲಿರುವ ಆಲಿಸುವಿಕೆಯ ಗುಣದಿಂದ ಜನರ ನಂಬಿಕೆಗೆ ಪಾತ್ರವಾಗುತ್ತೀರಿ.

ಮತ್ತಷ್ಟು ಇಂಥ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Fri, 23 September 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್