Personality Test: ನಿಮ್ಮ ಬೆರಳುಗಳ ಉದ್ದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಏನು ಸಂಬಂಧ

Finger Length Personality Test : ನಿಮ್ಮ ಕೈಬೆರಳುಗಳನ್ನು ನೋಡಿಕೊಳ್ಳುತ್ತಾ ಇಲ್ಲಿರುವುದನ್ನು ಓದುತ್ತಾ ಹೋಗಿ. ಕೈಬೆರಳುಗಳು ನಿಮ್ಮ ಬಗ್ಗೆ ಏನನ್ನು ಹೇಳುತ್ತವೆ ಎನ್ನುವುದನ್ನು ತಿಳಿದುಕೊಳ್ಳಿ.

Personality Test: ನಿಮ್ಮ ಬೆರಳುಗಳ ಉದ್ದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಏನು ಸಂಬಂಧ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 04, 2022 | 5:35 PM

Finger Length Personality Test : ಈಗಾಗಲೇ ಮೂಗಿನಾಕಾರ ಮತ್ತು ವ್ಯಕ್ತಿತ್ವ, ಕುಳಿತುಕೊಳ್ಳುವ ಭಂಗಿ ಮತ್ತು ವ್ಯಕ್ತಿತ್ವ, ರಕ್ತದ ಗುಂಪಿಗನುಗುಣವಾಗಿ ವ್ಯಕ್ತಿತ್ವ, ಆಯ್ಕೆಯ ಬಣ್ಣ ಮತ್ತು ವ್ಯಕ್ತಿತ್ವ, ಪಾದದಾಕಾರ ಮತ್ತು ವ್ಯಕ್ತಿತ್ವ ಹೀಗೆ ದೇಹದ ವಿವಿಧ ಅಂಗಗಳ ಆಕಾರಕ್ಕೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಓದುತ್ತ ಹೋದಂತೆ ಕುತೂಹಲ ಹೆಚ್ಚುತ್ತಿದೆಯಲ್ಲವೆ? ನಿಮ್ಮದಷ್ಟೇ ಅಲ್ಲ ನಿಮ್ಮ ಸ್ನೇಹಿತರ, ಮನೆಮಂದಿಯೊಂದಿಗೆ ಈ ವ್ಯಕ್ತಿತ್ವ ಪರೀಕ್ಷೆಯ ಪ್ರಯೋಗಗಳನ್ನು ನೀವು ಈಗಾಗಲೇ ಮಾಡುತ್ತಿರಬಹುದು. ಈ ಬಾರಿ ನಿಮ್ಮ ಬೆರಳುಗಳ ಉದ್ದಕ್ಕೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ಕೊಡಲಾಗಿದೆ. ಕೈಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳುಗಳ ಉದ್ದಕ್ಕೆ ಅನುಸರಿಸಿ ಇದನ್ನು ನಿರ್ಧರಿಸಲಾಗುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ.

1. ತೋರುಬೆರಳು ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ

ನಿಮ್ಮ ತೋರುಬೆರಳು ನಿಮ್ಮ ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ, ನೀವು ಯಾವುದೇ ಪರಿಸ್ಥಿತಿಯನ್ನು ತ್ವರಿತವಾಗಿ ನಿಭಾಯಿಸುವ ನಾಯಕತ್ವ ಗುಣವನ್ನು ಹೊಂದಿದ್ದೀರಿ ಎಂದರ್ಥ. ನಿಮ್ಮಲ್ಲಿರುವ ತಾರ್ಕಿಕ ಮತ್ತು ಸಲಹಾ ಚಾತುರ್ಯದಿಂದಾಗಿ ಸಾಕಷ್ಟು ಜನರನ್ನು ಸೆಳೆಯುತ್ತೀರಿ. ಸಮಚಿತ್ತ, ದೂರದೃಷ್ಟಿ ವಿಶ್ಲೇಷಣಾತ್ಮಕ ನೋಟ ನಿಮ್ಮದಾಗಿರುವುದರಿಂದ ಅವಸರದಲ್ಲಿ ನೀವು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾರಿರಿ. ಈ ಕಾರಣಕ್ಕೆ ನಿಮ್ಮ ಸುತ್ತಮುತ್ತಲಿನ ಜನಕ್ಕೆ ನಿಮ್ಮ ಮೇಲೆ ಅತೀವ ವಿಶ್ವಾಸ. ನಿಮ್ಮನ್ನು ಅನುಸರಿಸುವವರ ಮೇಲೆ ನಿಮ್ಮ ತೀರ್ಮಾನಗಳು ಪರಿಣಾಮ ಬೀರುತ್ತವೆ ಎನ್ನುವ ಪ್ರಜ್ಞೆ ಇರುವುದರಿಂದ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳುತ್ತೀರಿ.

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಇದನ್ನೂ ಓದಿ : Personality Test: ಈ 10 ಗುಣಲಕ್ಷಣಗಳಿದ್ದರೆ ನಿಮ್ಮದು ಸೃಜನಶೀಲ ವ್ಯಕ್ತಿತ್ವ

2. ತೋರುಬೆರಳು, ಉಂಗುರದ ಬೆರಳಿನ ಉದ್ದ ಸಮವಾಗಿದ್ದರೆ

ತೋರುಬೆರಳು ಮತ್ತು ಉಂಗುರದ ಬೆರಳು ಸಮಸಮವಾಗಿದ್ದರೆ, ನೀವು ಸಮತೋಲಿತ ಜೀವನವನ್ನು ನಡೆಸುವ ವ್ಯಕ್ತಿ. ಹಾಗೆಯೇ ಸಹಾನುಭೂತಿಯುಳ್ಳವರು. ಇತರರ ಸಮಸ್ಯೆಗಳನ್ನು ಆಲಿಸುವ, ಸಹಾಯ ಮಾಡುವ ತಾಳ್ಮೆ ಹೊಂದಿರುವ ನೀವು, ನಿಮ್ಮೊಂದಿಗೆ ಮಾತನಾಡುವ ವ್ಯಕ್ತಿಗೆ ಆಪ್ತ, ಬೆಚ್ಚಗಿನ ಭಾವವನ್ನು ಕೊಡುತ್ತೀರಿ. ನಿಮ್ಮೊಂದಿಗಿರುವಾಗ ಅವರು ಆರಾಮ, ಭದ್ರಭಾವವನ್ನು ಅನುಭವಿಸುತ್ತಾರೆ. ಶಾಂತಿಯುತ ಮನಸ್ಸಿನವರಾದ ನಿಮ್ಮೆಡೆ ಸಹಜವಾಗಿ ಜನರು ಆಕರ್ಷಿತರಾಗುತ್ತಾರೆ. ತಮ್ಮ ಬದುಕಿನ ರಹಸ್ಯಗಳನ್ನು ವಿಶ್ವಾಸದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ : Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?

3. ಉಂಗುರಬೆರಳು ತೋರುಬೆರಳಿಗಿಂತ ಉದ್ದವಾಗಿದ್ದರೆ… 

ಉಂಗುರ ಬೆರಳು ತೋರುಬೆರಳಿಗಿಂತ ಉದ್ದವಾಗಿದ್ದರೆ ನೀವು ಅತೀ ಆತ್ಮವಿಶ್ವಾಸವನ್ನು ಹೊಂದಿರುವವರು ಎಂದರ್ಥ. ವ್ಯಾವಹಾರಿಕ ಮತ್ತು ತರ್ಕಬದ್ಧ ಆಲೋಚನೆಯುಳ್ಳ ನೀವು ಕಾರ್ಯತಂತ್ರವನ್ನು ರೂಪಿಸುವಲ್ಲಿ ಸಿದ್ದಹಸ್ತರು. ಸಮಸ್ಯೆಗಳಿಗೆ ಅಷ್ಟಾಗಿ ಸಿಲುಕಿಕೊಳ್ಳುವವರು ನೀವಲ್ಲ. ಅಕಸ್ಮಾತ್ ಸಿಲುಕಿಕೊಂಡರೂ ಪರ್ಯಾಯ ಪರಿಹಾರವನ್ನು ಶೀಘ್ರವೇ ಕಂಡುಕೊಳ್ಳುತ್ತೀರಿ. ನಿಮ್ಮ ವಿರುದ್ಧಲಿಂಗಿಗಳು ನಿಮ್ಮೊಂದಿಗೆ ಬಲುಬೇಗ ಆಕರ್ಷಿತರಾಗುತ್ತಾರೆ. ನಿಮ್ಮ ವಾಕ್​​ಚಾತುರ್ಯವೇ ಇದಕ್ಕೆ ಕಾರಣ.

ಇದನ್ನು ಓದುತ್ತ ನೀವು ನಿಮ್ಮ ಬೆರಳುಗಳ ಉದ್ದ ಮತ್ತು ವ್ಯಕ್ತಿತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಿರುತ್ತೀರಿ. ಹೇಗನ್ನಿಸಿತು?

Published On - 5:33 pm, Mon, 4 July 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ