Vajrasana Benefits : ವಜ್ರಾಸನವನ್ನು ಏಕೆ ಮಾಡಬೇಕು?

Yoga : ಊಟ ಮಾಡಿದ ನಂತರ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಎನ್ನುವುದು ಗೊತ್ತಿರುವ ವಿಷಯ. ಇದಲ್ಲದೆ ಇನ್ನೂ ಏನು ಪ್ರಯೋಜನಗಳಿವೆ?

Vajrasana Benefits : ವಜ್ರಾಸನವನ್ನು ಏಕೆ ಮಾಡಬೇಕು?
ವಜ್ರಾಸನ ಭಂಗಿ. ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 05, 2022 | 11:08 AM

Vajrasana: ವಜ್ರಾಸನವು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ನಿಮ್ಮ ಪೋಷಕರು ಅಥವಾ ಅಜ್ಜ ಅಜ್ಜಿ ಹೇಳಿರುವುದನ್ನು ಕೇಳಿರುತ್ತೀರಿ. ಆ ಪ್ರಕಾರ ಚಿಕ್ಕಂದಿನಲ್ಲಿ ಊಟ ಮಾಡಿದ ನಂತರ ಆ ಭಂಗಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿರುತ್ತೀರಿ. ಆದರೆ ಕ್ರಮೇಣ ಆ ಅಭ್ಯಾಸಗಳೆಲ್ಲ ಕಳೆದುಹೋಗಿರುತ್ತವೆ. ಈಗ ಹಳೆಯದೆಲ್ಲ ಹೊಸದಾಗಿ ಚಿಗುರುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ಚಿಕ್ಕಂದಿನ ಅಭ್ಯಾಸಗಳನ್ನು ಈಗ ಮತ್ತೆ ರೂಢಿಸಿಕೊಳ್ಳುತ್ತ ಮನಸ್ಸನ್ನು ದೇಹವನ್ನು ಸದೃಢವಾಗಿರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯೋಗಾಸನ ಸುಲಭಸಾಧ್ಯವಾದ ವಿಧಾನ. ನಿತ್ಯವೂ ವಜ್ರಾಸನವನ್ನು ಅಭ್ಯಾಸ ಮಾಡಿದರೆ ಅನೇಕ ಪ್ರಯೋಜನಗಳು ಇವೆ. ಆದ್ದರಿಂದ ಈ ಆಸನವನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ವಜ್ರಾಸನವು ಒಂದು ರೀತಿಯ ಧ್ಯಾನ ವಿಧಾನ. ಏಕಾಕಿನ್ ವಜ್ರಾಸನ, ಗುಲ್ಫ ವಜ್ರಾಸನ, ಪೂರ್ಣ ವಜ್ರಾಸನ, ಸುಪ್ತ ವಜ್ರಾಸನ ಮತ್ತು ಸುಪ್ತ ಪೂರ್ಣ ವಜ್ರಾಸನಗಳೆಂಬ ವಿಧಗಳಿವೆ. ಮೊದಲು ನೆಲದ ಮೇಲೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. ಆನಂತರ ಎರಡೂ ಕಾಲುಗಳನ್ನು ಮಂಡಿಯ ಬಳ್ಳಿ ಬಾಗಿಸಿ ಕುಳಿತುಕೊಳ್ಳಬೇಕು. ಅಂದರೆ ಹಾಗೆ ಕುಳಿತಾಗ ಮಂಡಿಗಳು ಪರಸ್ಪರ ತಾಕಿಕೊಂಡಿರಬೇಕು, ಎರಡೂ ಹಿಮ್ಮಡಿಗಳೂ ತಾಕಿಕೊಂಡಿರಬೇಕು. ಇಡೀ ಶರೀರದ ಭಾರ ಎರಡು ಹಿಮ್ಮಡಿಗಳ ಮೇಲಿರಬೇಕು. ಆನಂತರ ಎದೆಯನ್ನು ನೇರಮಾಡಿ ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಹೆಚ್ಚು ಹೊತ್ತು ಕುಳಿತಷ್ಟೂ ದೇಹ ವಜ್ರದ ಹಾಗೆ ಗಟ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Health: ಯಾರು ಹೋಗ್ತಾರೆ ದಿನಾ ಬೆಳಗ್ಗೆದ್ದು ಜಿಮ್​ಗೆ

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ಆಸನದ ಪ್ರಯೋಜನಗಳು

ವಜ್ರಾಸನದ ಅಭ್ಯಾಸದಿಂದ ಮೂಳೆನೋವು ಕಾಲುನೋವು, ಹಿಮ್ಮಡಿನೋವು ಗುಣವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹೆಚ್ಚು ಹೊತ್ತು ನಿಂತು ಕೆಲಸ ಮಾಡುವವರಿಗೆ ಈ ಆಸನ ಸಹಾಯಕಾರಿ. ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇನ್ಸುಲಿನ್ ಉತ್ಪಾದಿಸುವಲ್ಲಿ ಇದು ಸಹಕಾರಿ. ನಿರಂತರವಾಗಿ ಕೆಲಸ ಮಾಡಿದಾಗ ಉಂಟಾಗುವ ಮಾನಸಿಕ ಒತ್ತಡವನ್ನು ಇದು ಕಡಿಮೆಗೊಳಿಸುತ್ತದೆ. ​ಏಕೆಂದರೆ ಈ ಭಂಗಿಯಲ್ಲಿ ಕುಳಿತಾಗ ರಕ್ತದ ಹರಿವು ಸಮರ್ಪಕವಾಗಿರುತ್ತದೆ.

ಇದನ್ನೂ ಓದಿ : International Yoga Day 2022: ಮಕ್ಕಳಿಗಾಗಿ ಈ 5 ಯೋಗಾಸನಗಳು

ಕೆಲ ಆಫೀಸುಗಳಲ್ಲಿ ಪ್ರತ್ಯೇಕ ಸ್ಥಳವನ್ನು ಯೋಗ, ವ್ಯಾಯಾಮಕ್ಕೆಂದೇ ಮೀಸಲಿಡಲಾಗುತ್ತಿದೆ. ಕೆಲಸದ ಮಧ್ಯೆ ಹತ್ತು ಹದಿನೈದು ನಿಮಿಷಗಳ ಕಾಲ ಇಂಥ ಆಸನಗಳನ್ನು ಮಾಡುವುದರಿಂದ ಹೆಚ್ಚು ಶ್ರಮವೆನ್ನಿಸಲಾರದು. ಬದಲಾಗಿ ಮನಸ್ಸು ಶಾಂತವಾಗಿ, ದೇಹವೂ ಲವಲವಿಕೆಯಿಂದ ಕೂಡಿರುತ್ತದೆ. ಆದರೆ ಯಾವುದೇ ಆಸನಗಳನ್ನು ರೂಢಿಸಿಕೊಳ್ಳುವ ಮೊದಲು ತರಬೇತುದಾರರ, ವೈದ್ಯರನ್ನು ಸಂಪರ್ಕಿಸುವುದು ಒಳಿತು.

Published On - 11:05 am, Tue, 5 July 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್