ಮಕ್ಕಳ ಒಂದು ವರ್ಷ ವಯಸ್ಸಿನ ನಂತರ ಮಕ್ಕಳಿಗೆ ನೀಡಬೇಕಾದ ಲಸಿಕೆಗಳು ಇಲ್ಲಿವೆ: ಇದನ್ನು ಪೋಷಕರು ತಿಳಿದಿರಬೇಕು 

ರೋಗ ನಿರೋಧಕ ಲಸಿಕೆ  ಮಕ್ಕಳಿಗೆ ಹಾಗೂ ವಯಸ್ಕರಿಗೆ ಬಹಳ ಮುಖ್ಯವಾಗಿದೆ.  ಅದರಲ್ಲೂ ಮಕ್ಕಳಿಗೆ ಲಸಿಕೆಗಳು ಅತ್ಯಾವಶ್ಯಕ. 

ಮಕ್ಕಳ ಒಂದು ವರ್ಷ ವಯಸ್ಸಿನ ನಂತರ ಮಕ್ಕಳಿಗೆ ನೀಡಬೇಕಾದ ಲಸಿಕೆಗಳು ಇಲ್ಲಿವೆ: ಇದನ್ನು ಪೋಷಕರು ತಿಳಿದಿರಬೇಕು 
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 04, 2022 | 10:32 PM

ರೋಗ ನಿರೋಧಕ ಲಸಿಕೆ  ಮಕ್ಕಳಿಗೆ (Children)  ಹಾಗೂ ವಯಸ್ಕರಿಗೆ ಬಹಳ ಮುಖ್ಯವಾಗಿದೆ.  ಅದರಲ್ಲೂ ಮಕ್ಕಳಿಗೆ ಲಸಿಕೆಗಳು (Vaccine) ಅತ್ಯಾವಶ್ಯಕ. ಏಕೆಂದರೆ ಹಲವು ರೋಗಗಳಿಂದ (Disease) ನಿಮ್ಮ ಮಗುವಿಗೆ ರಕ್ಷಣೆ ನೀಡಲು ಇದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಲಸಿಕೆಗಳು ಮಕ್ಕಳಿಗೆ ಅವರು ಜನ್ಮ ತಳೆದಾಗಿನಿಂದ ಆರಂಭವಾಗಿ ಕೆಲವು ವರ್ಷಗಳವರೆಗೆ ಮುಂದುವರೆಯುತ್ತದೆ. ಈ  ಲಸಿಕೆ ಸಿಡುಬು, ಹೆಪಟೈಟಿಸಿ, ದಡಾರ, ಪೋಲಿಯೋ ಮುಂತಾದ ರೋಗಗಳಿಂದ ಮಕ್ಕಳನ್ನು ರಕ್ಷಣೆ ಮಾಡುತ್ತದೆ.

ವಿಶ್ವ ಲಸಿಕಾ ದಿನ ಸಪ್ತಾಹವನ್ನು ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ (ಏಪ್ರಿಲ್ 24-30) ಆಚರಿಸಲಾಗುತ್ತದೆ. ವಿಶ್ವ ರೋಗ ನಿರೋಧಕ ಸಪ್ತಾಹದ ಉದ್ದೇಶ ಎಲ್ಲ ವಯೋಮಾನದವರನ್ನು ಹಲವು ರೋಗಗಳಿಂದ ರಕ್ಷಿಸುವುದಾಗಿದೆ. ಈ ವರ್ಷದ ವಿಷಯ “ಎಲ್ಲರಿಗೂ ದೀರ್ಘ ಜೀವನ”.

ಮಕ್ಕಳನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ರೋಗ ನಿರೋಧಕ ಲಸಿಕೆಯ ಪಾತ್ರ ತುಂಬಾ ದೊಡ್ಡದು. ಅದರಲ್ಲೂ ವಿಶೇಷವಾಗಿ ಮಕ್ಕಳ ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಲಸಿಕೆಗಳ ಬಗ್ಗೆ ತಂದೆತಾಯಿಗೆ ಅರಿವಿರಬೇಕು.

ಒಮ್ಮೆ ಮಗುವಿಗೆ ಒಂದು ವರ್ಷ ತುಂಬಿದಾಗ ಹೆಪಟೈಟಿಸ್ ಎ ಇಂದ ಎಂಎಂಆರ್​​ವರೆಗೆ ಹಲವು ಲಸಿಕೆಗಳನ್ನು ಮುಂದಿನ ಕೆಲ ವರ್ಷಗಳ ಕಾಲ ನಿಗದಿತ ಅವಧಿಯಲ್ಲಿ ನೀಡಲು ಸೂಚಿಸಲಾಗುತ್ತದೆ. ಮೊದಲು ತಪ್ಪಿ ಹೋಗಿದ್ದ ಲಸಿಕೆಯನ್ನು ಸಹ ಮಗುವಿಗೆ ನೀಡಬಹುದಾಗಿದೆ.

ಮುಂಬೈನ ಜೋಷಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಅರ್ಚನಾ ಜೋಷಿ ಅವರ ಪ್ರಕಾರ 15 ತಿಂಗಳ ನಂತರ ನಾವು ಎಂಎಂಆರ್​ಲಸಿಕೆ, ಚಿಕನ್ ಪಾಕ್ಸ್ ಮತ್ತು ನಿಮೋನಿಯಾದಂತಹ ಲಸಿಕೆಗಳನ್ನು ನೀಡುತ್ತೇವೆ. 18 ತಿಂಗಳ ನಂತರ ಡಿಪಿಟಿ ಬೂಸ್ಟರ್ ಡೋಸ್, ಎಚ್ಐವಿ, ಮತ್ತು ಚುಚ್ಚು ಮದ್ದಿನ ಪೋಲಿಯೋ ಲಿಸಿಕೆ ಮತ್ತು ಹೆಪಟೈಟಿಸ್ ಎ ಎರಡನೇ ಡೋಸ್ ನೀಡಲಾಗುವುದು. 

ಇದನ್ನು ಓದಿ: ಮಹಿಳೆಯರಿಗೆ ಪ್ರಮುಖ ಲಸಿಕೆ : ನವಜಾತ ಶಿಶುಗಳ ರಕ್ಷಣೆಯೂ ಸಾಧ್ಯ

ಎರಡು ವರ್ಷಗಳ ಬಳಿಕ ಟೈಫಾಯಿಡ್ ಲಸಿಕೆ ಕೊಡಲಾಗುತ್ತದೆ. ಮಗುವಿನ ಮೂರನೇ ಹಾಗೂ ನಾಲ್ಕನೇ ವರ್ಷಗಳಲ್ಲಿ ಪ್ರತಿ ವರ್ಷ ಇನ್​​ಫ್ಲುಯೆನ್ ಝಾ ಲಸಿಕೆಯನ್ನು ನೀಡಲು ಶಿಫಾರಸು ಮಾಡಲಾಗುತ್ತದೆ. ಇನ್​​​ಫ್ಲುಯೆನ್ ಝಾ ಲಸಿಕೆಯನ್ನು 7 ಮತ್ತು 8ನೇ ತಿಂಗಳಿನಿಂದ ಆರಂಭಿಸಲಾಗುತ್ತದೆ. 1.5 ವರ್ಷ, 2.5 ವರ್ಷ ಹಾಗೂ 3.5 ವರ್ಷ ಪೂರ್ಣಗೊಂಡಾಗ ಇನ್ ಪ್ಲೊಯೆನ್ ಝಾ ಲಸಿಕೆ ಕೊಡಲಾಗುತ್ತದೆ. 4.5 ವರ್ಷ ಪೂರ್ಣಗೊಂಡಾಗ ಡಿಪಿಟಿ ಎರಡನೇ ಬೂಸ್ಟರ್ ಮತ್ತು ಪೋಲಿಯೋ ಲಸಿಕೆ ಹಾಗೂ ಎಂಎಂಆರ್ ಲಸಿಕೆ ನೀಡುತ್ತೇವೆ ಎಂದು.

ಐದು ವರ್ಷಗಳ ಬಳಿಕ ಇನ್​​ಫ್ಲುಯೆನ್ ಝಾ ಲಸಿಕೆ ಆಯ್ಕೆಯಾಗಿದ್ದು, ಪೋಷಕರು ಅಗತ್ಯವಿದ್ದರೆ ಮಕ್ಕಳಿಗೆ ಹಾಕಿಸಬಹುದು. ಹತ್ತು ವರ್ಷವಾದಾಗ, ಮಕ್ಕಳಿಗೆ ಡಿಪಿಟಿ ಲಸಿಕೆಯ ಎರಡನೇ ಬೂಸ್ಟರ್ ಡೋಸ್ ಕೊಡಲಾಗುತ್ತದೆ. ಯಾವುದೇ ಲಸಿಕೆ ಅದರ ನಿಗದಿತ ಅವಧಿಯಲ್ಲಿ ತಪ್ಪಿ ಹೋದಲ್ಲಿ, ರೋಟಾ ವೈರಸ್ ಹೊರತುಪಡಿಸಿ ಉಳಿದವುಗಳನ್ನು ಮತ್ತೆ ನೀಡಬಹುದು.

“ಹುಟ್ಟಿದ ವೇಳೆ ಮಕ್ಕಳಿಗೆ ಬಿಜಿಸಿ, ಓರಲ್ ಪೋಲಿಯೋ ಮತ್ತು ಹೈಪಟೈಟಿಸ್ ಬಿ ಲಸಿಕೆ ನೀಡಲಾಗುತ್ತದೆ. ಬಿಸಿಜಿ ಎಡತೋಳಿನಲ್ಲೂ ಮತ್ತು ಹೈಪಟೈಟಿಸ್ ಬಿ ಅನ್ನು ಕಾಲಿನಲ್ಲೂ ನೀಡಲಾಗುತ್ತದೆ. ತಾಯಿಯ ಎದೆಹಾಲು ಮಕ್ಕಳನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. 1.5 ತಿಂಗಳಾದಾಗ ಎಂಟು ಲಸಿಕೆ ನೀಡಲಾಗುತ್ತದೆ – 3 ಡಿಪಿಟಿ, ಪೋಲಿಯೋ ಲಸಿಕೆ ಚುಚ್ಚುಮದ್ದು, ಎಚ್ಐವಿ ಲಸಿಕೆ, ಹೈಪಟೈಟಿಸ್ ಬಿ ಲಸಿಕೆ, ನಿಮೋನಿಯಾ ಹಾಗೂ ರೋಟಾ ವೈರಸ್ ಲಸಿಕೆ. 6ನೇ ತಿಂಗಳಿನಲ್ಲಿ, ಇನ್ ಪ್ಲೊಯೆನ್ ಝಾ ಮತ್ತು ಟೈಫಾಯಿಡ್ ಲಸಿಕೆ ನೀಡಲಾಗುತ್ತದೆ. ಒಂಭತ್ತು ತಿಂಗಳ ತರುವಾಯ ಎಂಎಂಆರ್ ಲಸಿಕೆ ಕೊಡಿಸಲು ಸಲಹೆ ನೀಡಲಾಗುತ್ತದೆ” ಎನ್ನುತ್ತಾರೆ ಡಾ. ಜೋಷಿ.

ಡಾ. ಜೋಷಿ ಹೇಳುತ್ತಾರೆ, ಪೋಷಕರು ಲಸಿಕೆಯ ಕಾರ್ಡನ್ನು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕು ಎಂದು, ಲಸಿಕೆ ಕಾರ್ಡ್ ಉಚಿತವಾಗಿ ದೊರೆಯಲಿದ್ದು, ಅದರಲ್ಲಿ ವಿವಿಧ ಲಸಿಕೆಗಳನ್ನು ಪಡೆದುಕೊಳುವ ದಿನಾಂಕಗಳ ವಿವರ ಇರುತ್ತದೆ. ಈ ದಿನಗಳಲ್ಲಿ ಆಸ್ಪತ್ರೆಗಳು ಪ್ರತಿ ಲಸಿಕೆ ಕಾರ್ಡ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುತ್ತವೆ. ಆದರೆ ಈ ಕಾರ್ಡನ್ನು ಸುರಕ್ಷಿತವಾಗಿ ಮನೆಯಲ್ಲೆ ಇರಿಸಿಕೊಳ್ಳುವುದು ಉತ್ತಮ.

ಗುರುಗ್ರಾಮ್ ನ ಪೋರ್ಟಿಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ವಿನೀತ್ ಪರ್ಮಾರ್ ಪ್ರಕಾರ, ನಿಮೋನಿಯಾ ಹಾಗೂ ಇನ್ ಪ್ಲೊಯೆನ್ ಝಾ ಲಸಿಕೆಗಳು ಶ್ವಾಸಕೋಶಕ್ಕೆ ಪ್ರತಿ ರಕ್ಷಣೆ ಒದಗಿಸುತ್ತವೆ. ಆದ್ದರಿಂದ ಅವು ಮಕ್ಕಳಿಗೆ ಮುಖ್ಯ ಇನ್ ಪ್ಲೊಯೆನ್ ಚಾ ಒಂದು ಸಾಮಾನ್ಯ ನೆಗಡಿಯಲ್ಲ ಮತ್ತು ಇನ್ ಪ್ಲೊಯೆನ್ ಜಾದಿಂದ ಹೆಚ್ಚಿನ ಸಮಸ್ಯೆಗಳು ತಲೆದೊರಬಹುದು.

‘ಈ ದಿನಗಳಲ್ಲಿ, ಇನ್ ಪ್ಲೊಯೆನ್ ಝಾ ಲಸಿಕೆ ಇನ್ ಪ್ಲೊಯೆನ್ ಝಾ ಮತ್ತು ಸ್ಪೈನ್ ಪ್ಲೂದಿಂದ ರಕ್ಷಣೆ ಒದಗಿಸುತ್ತದೆ. ಇನ್ ಪ್ಲೊಯೆನ್ ಝಾ ಸಾಂಕ್ರಾಮಿಕ ರೋಗವಾಗಿದ್ದು, ಮಳೆಗಾಲದಲ್ಲಿ ಹರಡುತ್ತದೆ. ಇನ್ ಪ್ಲೊಯೆನ್ ಝಾ ಉಸಿರಾಟದ ತೊಂದರೆ ಹಾಗೂ ಹೃದಯರೋಗಕ್ಕೆ ಕಾರಣವಾಗಬಹುದು. ಆರಂಭದಲ್ಲಿ ಎರಡು ಡೋಸ್ ಗಳ ನಡುವೆ ನಾಲ್ಕು ತಿಂಗಳ ಅಂತರವಿರುತ್ತದೆ. ಬೂಸ್ಟರ್ ಡೋಸನ್ನು ಪ್ರತಿ ವರ್ಷ ನೀಡಬಹುದು. ಉಸಿರಾಟದ ತೊಂದರೆಯಿರುವ ಮಕ್ಕಳು ಇದನ್ನು ಪ್ರತಿ ವರ್ಷ ಪಡೆಯುವಂತೆ ಸಲಹೆ ನೀಡಲಾಗುತ್ತದೆ’ ಎನ್ನುತ್ತಾರೆ ಡಾ. ಪರ್ಮಾರ್.

ಈ ಎಲ್ಲ ಲಸಿಕೆಗಳ ಹೊರತಾಗಿ, ಮೆನಿಗೊಕೋಕಲ್ ಲಸಿಕೆ ಪಡೆಯುವುದು ಮುಖ್ಯ. ಇದರಿಂದ ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸಬಹುದು.

ಡಾ. ತರಮಾರ್ ಹೇಳುತ್ತಾರೆ, ‘ಮೆದುಳು ಜ್ವರ ಪತ್ತೆ ಹಚ್ಚಲು ಎರಡರಿಂದ ಮೂರು ದಿನ ತಗುಲುತ್ತದೆ. ಅದು ಹಲವು ಗಂಭೀರ ತೊಂದರೆಗಳನ್ನು ಉಂಟು ಮಾಡಬಹುದು ಅಥವಾ ಸಾವನ್ನು ತರಬಹುದು. ಅದನ್ನು ಎರಡು ವರ್ಷಕ್ಕೂ ಮೊದಲೇ ಪಡೆದರು. ಎರಡು ಡೋಸ್ ಮತ್ತು ಎರಡು ವರ್ಷದ ನಂತರವಾದರೆ ಒಂದೇ ಡೋಸ್ ಯುನೈಟೆಡ್ ಸ್ಟೇಟ್ಸ್ ನಲ್ಲಿ 14ರಿಂದ 16 ವರ್ಷದ ವಯೋಮಾನದರಲ್ಲಿ ಇದು ಕಡ್ಡಾಯ. ಈ ದಿನಗಳಲ್ಲಿ ಮಕ್ಕಳಿಗೆ ಕಾಂಬಿನೇಷನ್ ಲಸಿಕೆ ನೀಡಲಾಗುತ್ತದೆ. ಒಂದೇ ಲಸಿಕೆಯಲ್ಲಿ ಹಲವು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ’ ಎಂದು.

ಹಕ್ಕು ನಿರಾಕರಣೆ (ಡಿಸ್ ಕ್ಲೈಮರ್ )

ಗ್ಲಾಕ್ಸೋಸ್ಮಿತ್ ಕ್ಲಿನ್ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್ ಮುಂಬೈನ (400030) ವೊರ್ಲಿಮ ಡಾ.ಅನಿಬೆಸೆಂಟ್ ರಸ್ತೆಯಲ್ಲಿ ಕೈಗೊಂಡ ಸಾರ್ವಜನಿಕ ಅರಿವು ಕಾರ್ಯಕ್ರಮ.

ಲೈವ್ ಚಾಟ್ ವಿಡಿಯೋದಲ್ಲಿ ಈ ಮಾಹಿತಿಯನ್ನು ಸಾಮಾನ್ಯ ಜಾಗೃತಿಗಾಗಿ ಮಾತ್ರ ಹಂಚಿಕೊಳ್ಳಲಾಗಿದೆ. ಮತ್ತು ಇಲ್ಲಿ ವ್ಯಕ್ತಪಟ್ಟ ಅಭಿಪ್ರಾಯಗಳು ಹಾಗೂ ದೃಷ್ಟಿಕೋನಗಳು ವಿಡಿಯೋದಲ್ಲಿ ಕಾಣುವ ಆರೋಗ್ಯ ರಕ್ಷಣೆ ವ್ಯಕ್ತಿಯವರದ್ದಾಗಿದ್ದು, ಜಿಎಸ್ ಕೆ ಮದ್ದಲ್ಲ.

ಈಸೈಟ್ ನಲ್ಲಿ ವಿಡಿಯೋ ಕಾಣಿಸಿಕೊಂಡ ಮಾತ್ರಕ್ಕೆ ಅದನ್ನು ಜಿಎಸ್ ಕೆ ಅಥವಾ ಅದರ ಸಂಬಂಧಿತವುಗಳು ಅದನ್ನು ಪುಷ್ಠಿಕರಿಸುತ್ತದೆ ಎಂದಾಗಲಿ ಅಲ್ಲ.

ನಿಮ್ಮ ಸ್ಥಿತಿಗೆ ಸಂಬಂಧಿಸಿದಂತೆ ದಯವಿಟ್ಟು ನಿಮಗೆ ಇರುವ ಯಾವುದೇ ಪ್ರಶ್ನೆಗಳು ಅಥವಾ ವಿಚಾರಗಳ ಕುರಿತು ನಮ್ಮ ಪಿಜಿಶಿಯನ್ ಸಂಪರ್ಕಿಸಿ.

ಜಿಎಸ್ ಕೆ ಈ ಮೂಲಕ ಈ ವಿಡಿಯೋವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಳಸಿಕೊಳ್ಳವುದರಿಂದ ಉದ್ಬವಿಸಬಹುದಾದ ನಷ್ಟಗಳ ಹಕ್ಕು ನಿರಾಕರಣೆ ಮಾಡುತ್ತದೆ. ಇದನ್ನು ಯಥಾಸ್ಥಿತಿಯಲ್ಲಿ ಯಾವುದೇ ಖಾತರಿ ನೀಡದೆ ಒದಗಿಸಲಾಗಿದೆ.

Published On - 10:31 pm, Mon, 4 July 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್