
ತಾಯಿಯ (mother) ಪ್ರೀತಿಯೇ ಹಾಗೆ, ಎಷ್ಟು ಮುದ್ದಿಸುತ್ತಾಳೋ ತಪ್ಪು ಮಾಡಿದಾಗ, ಹೇಳಿದ ಮಾತನ್ನು ಕೇಳದೆ ಇದ್ದಾಗ ದಂಡಿಸುತ್ತಾಳೆ. ಹೀಗಾಗಿ ಅಮ್ಮನ ಅಂದ್ರೆ ಹೆಚ್ಚು ಇಷ್ಟವೋ ಅಷ್ಟೇ ಭಯ ಮಕ್ಕಳಿಗೆ ಇರುತ್ತದೆ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಈ ದೃಶ್ಯವು ತಾಯಿ ಮೇಲೆ ಈ ಮರಿ ಹಿಪ್ಪೋಗೆ ಎಷ್ಟು ಭಯವಿದೆ ಎನ್ನುವುದಕ್ಕೆ ಸಾಕ್ಷಿ. ಹೌದು ಕೊಳದಿಂದ ಹೊರಬರಲು ಇಷ್ಟ ಪಡದ ಈ ಮರಿ ಹಿಪ್ಪೋ (baby hippo) ತಾಯಿಯ ಒಂದೇ ಒಂದು ನೋಟಕ್ಕೆ ಓಡೋಡಿ ಬಂದಿದೆ. ಈ ವಿಡಿಯೋ ಕನ್ಸಾಸ್ ನ ಟ್ಯಾಂಗನಿಕಾ ವನ್ಯಜೀವಿ ಉದ್ಯಾನವನದ್ದು ಎನ್ನಲಾಗಿದೆ. ಎಕ್ಸ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಈ ಮರಿಗೆ ತಾಯಿಯ ಮೇಲೆ ಭಯವಿರುವುದು ಸ್ಪಷ್ಟವಾಗಿ ತೋರುತ್ತದೆ. ಇದನ್ನು ನೋಡಿ ಬಳಕೆದಾರರು ಬಿದ್ದು ಬಿದ್ದು ನಕ್ಕಿದ್ದಾರೆ.
@AMAZINGNATURE ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಅಮ್ಮನ ನೋಟ, ಎಲ್ಲಾ ಜೀವಿಗಳಲ್ಲಿಯೂ ಸಾರ್ವತ್ರಿಕವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಟೇಕ್ ಕೇರ್ ಹಿಪ್ಪೋ ಮರಿಯನ್ನು ನೀರಿನ ಕೊಳದಿಂದ ತಾಯಿಯತ್ತ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮರಿ ಹಿಪ್ಪೋ ಮಾತ್ರ ಇದನ್ನು ನಿರಾಕರಿಸಿ ಕೊಳದತ್ತ ತಪ್ಪಿಸಿಕೊಂಡು ಓಡುತ್ತಿದೆ. ಆದರೆ ತಾಯಿ ಹಿಪ್ಪೋ ದಿಟ್ಟಿಸಿ ನೋಡಿದ್ದೆ ತಡ, ಕೊಳದಲ್ಲಿದ್ದ ಈ ಮರಿ ಹಿಪ್ಪೋ ತನ್ನ ತಾಯಿಯತ್ತ ಓಡೋಡಿ ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.
The “mom stare” is universal in every species 😆 pic.twitter.com/pHJqbs0vUl
— Nature is Amazing ☘️ (@AMAZlNGNATURE) August 1, 2025
ಇದನ್ನೂ ಓದಿ:Video: ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು
ಆಗಸ್ಟ್ 2 ರಂದು ಶೇರ್ ಮಾಡಲಾದ ಈ ವಿಡಿಯೋ 5.8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಮುದ್ದಾದ ವಿಡಿಯೋ ಕಂಡು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ ತಾಯಿಯ ಒಂದೇ ಒಂದು ನೋಟಕ್ಕೆ ಅಷ್ಟು ಶಕ್ತಿಯಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ನಿನ್ನನ್ನು ಹೊಸ ಲೋಕಕ್ಕೆ ತಂದಿದ್ದೇನೆ. ನಾನು ನಿನ್ನನ್ನು ಹೊರಗೆ ಕರೆದ್ಯೋಯ್ಯಬಲ್ಲೆ ಎಂದು ಹೇಳುವ ನೋಟವದು. ಇದು ಪ್ರಾಣಿ ಸಾಮ್ರಾಜ್ಯದಲ್ಲೂ ಇರುತ್ತವೆ ಎಂದಿದ್ದಾರೆ. ತಾಯಿಯ ಪ್ರೀತಿ ಅತ್ಯಂತ ಬಲಿಷ್ಠವಾದದ್ದು, ಆ ಪ್ರೀತಿ ಹಾಗೂ ಕಾಳಜಿಯನ್ನು ಯಾರಿಂದಲು ನೀಡಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗುವ ಇಮೋಜಿ ಕಳುಹಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ