Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ಸಿಂಹಿಣಿ

ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ, ತಾಯಿ ಪ್ರೀತಿ ಯಾವತ್ತೂ ಬದಲಾಗಲ್ಲ. ಈ ಪ್ರಾಣಿಗಳು ತಮ್ಮ ಕಂದಮ್ಮವನ್ನು ಮುದ್ದಿಸುವ ಕಾಳಜಿವಹಿಸುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಆದರೆ ತಾಯಿ ಸಿಂಹವೊಂದು ನೀರಿಗೆ ಬಿದ್ದ ಮರಿಯನ್ನು ರಕ್ಷಿಸಿದ ಹೃದಯ ಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ. ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ಸಿಂಹಿಣಿ
ವೈರಲ್‌ ವಿಡಿಯೋ
Image Credit source: Instagram

Updated on: Apr 13, 2026 | 5:51 PM

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳನ್ನು ಪ್ರೀತಿಸುತ್ತವೆ, ಕಾಳಜಿ ವಹಿಸುತ್ತವೆ. ತಪ್ಪು ಮಾಡಿದರೆ ದಂಡಿಸುತ್ತವೆ. ಇದೀಗ ಸಿಂಹಿಣಿಯೊಂದು ನೀರಿಗೆ ಬಿದ್ದ ತನ್ನ ಕಂದನನ್ನು ರಕ್ಷಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

gulnara.de ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೃಗಾಲಯದ ದೃಶ್ಯವನ್ನು ಕಾಣಬಹುದು. ಕೆರೆಗೆ ಬಿದ್ದ ಮರಿಯನ್ನು ಹೆಣ್ಣು ಸಿಂಹವೊಂದು ರಕ್ಷಣೆ ಮಾಡಿದೆ. ಇದೇ ವೇಳೆ ಗಂಡು ಸಿಂಹವೂ ಅಡ್ಡಿ ಪಡಿಸಿದೆ.  ಆದರೆ ಗಂಡು ಸಿಂಹದೊಂದಿಗೆ ಜಗಳಕ್ಕಿಳಿದ ಸಿಂಹಿಣಿಯೊಂದು ಕೊನೆಗೂ ತನ್ನ ಮರಿಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ಈ ವಿಡಿಯೋ 3.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯಿಗಿಂತ ನಮ್ಮನ್ನು ಸದಾ ಕಾಪಾಡುವ ಜೀವ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಂಗೆ ಒಂದು ಕ್ಷಣ ಗಾಬರಿಯಾಯ್ತು, ಒಳ್ಳೆಯ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲಾ ಗಂಡಸರು ಒಂದೇ ರೀತಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:45 pm, Mon, 13 April 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us