Viral: ತಾಯಿ ಮಗನ ಈ ಹಾಡಿನ ಮೋಡಿಗೆ ಫಿದಾ ಆಗದವರೇ ಇಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2025 | 12:48 PM

ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ, ಆದರೆ ಅವುಗಳಲ್ಲಿ ಕೆಲವು ದೃಶ್ಯಗಳು ಮಾತ್ರ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆಯುತ್ತವೆ. ಇದೀಗ ತಾಯಿ-ಮಗ ಜೋಡಿಯ ವೀಡಿಯೊವೊಂದು ಹೆಚ್ಚು ವೈರಲ್ ಆಗುತ್ತಿದ್ದು, ಅವರು ತಮ್ಮದೇ ಶೈಲಿಯಲ್ಲಿ ಬಾಲಿವುಡ್‌ನ ಕ್ಲಾಸಿಕ್‌ ಹಾಡುಗಳಲ್ಲಿ ಒಂದಾದ ಓ ರಂಗೀಲೆ ಗೀತೆಯನ್ನು ಹಾಡಿದ್ದಾರೆ. ತಾಯಿ ಮಗನ ಈ ಮಧುರ ಕಂಠಸಿರಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Viral: ತಾಯಿ ಮಗನ ಈ ಹಾಡಿನ ಮೋಡಿಗೆ ಫಿದಾ ಆಗದವರೇ ಇಲ್ಲ
ಸಾಂದರ್ಭಿಕ ಚಿತ್ರ
Follow us on

ಸೋಷಿಯಲ್‌ ಮೀಡಿಯಾ (Social Media) ಪ್ರತಿಭೆಯನ್ನು(talent) ಪ್ರದರ್ಶಿಸಲಿರುವ ಒಂದು ಉತ್ತಮ ವೇದಿಕೆಯಾಗಿದೆ. ಈ ಒಂದು ವೇದಿಕೆಯನ್ನು ಸದುಯೋಗಪಡಿಸಿಕೊಂಡು ಫೇಮಸ್‌ ಆದವರು, ಜನರ ಮನ ಗೆದ್ದವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಂದು ತಾಯಿ-ಮಗನ ಜೋಡಿ (mother son duo) ತಮ್ಮ ಮಧುರ ಕಂಠ ಸಿರಿ ಮೂಲಕವೇ ಎಲ್ಲರ ಮನ ಗೆದ್ದಿದ್ದಾರೆ. ಅವರು ತಮ್ಮದೇ ಶೈಲಿಯಲ್ಲಿ ಬಾಲಿವುಡ್‌ನ ಕ್ಲಾಸಿಕ್‌ ಹಾಡುಗಳಲ್ಲಿ ಒಂದಾದ ಓ ರಂಗೀಲೆ ಗೀತೆಯನ್ನು ಹಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ತಾಯಿ-ಮಗನ ಸಂಗೀತ ಜುಗಲ್ಬಂದಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಬಂಗಾಳದ ಈ ತಾಯಿ-ಮಗ ಜೋಡಿ ಬಾಲಿವುಡ್‌ನ ಕ್ಲಾಸಿಕ್ ಹಾಡುಗಳಲ್ಲಿ ಒಂದಾದ ತೂನೇ ಓ ರಂಗೀಲೆ ಗೀತೆಯನ್ನು ತಮ್ಮದೇ ಆದ ಶೈಲಿಯಲ್ಲಿ ಹಾಡುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಮಗ ಬೀಟ್‌ ಬಾಕ್ಸಿಂಗ್‌ ಮಾಡುತ್ತಿದ್ದರೆ, ತಮ್ಮ ಸುಮಧುರ ಕಂಠದಲ್ಲಿ ಹಾಡನ್ನು ಹಾಡಿದ್ದಾರೆ. ಹಲವರು ತಾಯಿಯ ಧ್ವನಿಯನ್ನು ಲತಾ ಮಂಗೇಶ್ಕರ್‌ಗೆ ಹೋಲಿಸಿದ್ದಾರೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವಿಕ್ಕಿ ದಾಸ್‌ (vickydas_17) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಗ ಬೀಟ್‌ ಬಾಕ್ಸಿಂಗ್‌ ಮಾಡುತ್ತಿದ್ದರೆ, ತಾಯಿ ತಮ್ಮ ಸುಮಧುರ ಕಂಠದಲ್ಲಿ ಹಾಡನ್ನು ಹಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 2 ತಿಂಗಳು ಡಿಜಿಟಲ್‌ ಅರೆಸ್ಟ್‌; ಸೈಬರ್‌ ವಂಚನೆಗೆ ಬಲಿಯಾಗಿ ಬರೋಬ್ಬರಿ 20 ಕೋಟಿ ರೂ. ಕಳೆದುಕೊಂಡ 86ರ ವೃದ್ಧೆ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ತಾಯಿಯ ಧ್ವನಿ ಲತಾ ಮಂಗೇಶ್ಕರ್‌ ಅವರಂತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಾವ್ಹ್‌ ಎಂತಹ ಸುಂದರ ಗಾಯನʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಟ್ಯಾಲೆಂಟ್‌ ಅಂದ್ರೆ ಇದಪ್ಪಾʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ