Viral: ಬೈಕ್ ಸವಾರನಿಗೆ ಗುದ್ದಿದ ಟ್ಯಾಂಕರ್; ಇಲ್ಲಿ ತಪ್ಪು ಯಾರದ್ದು?
ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿ ಕೇಳಿ ಬರುತ್ತಿರುತ್ತವೆ. ವಾಹನ ಸವಾರರ ಸಂಚಾರ ನಿಯಮ ಪಾಲನೆಯ ಉದಾಸಿನತೆಯಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇಲ್ಲೊಂದು ಅಂತಹದ್ದೇ ಭೀಕರ ಅಪಘಾತ ಸಂಭವಿಸಿದ್ದು, ಸೀದಾ ಬಂದಂತಹ ಟ್ಯಾಂಕರ್ ಬೈಕ್ ಸವಾರನಿಗೆ ಗುದ್ದಿದೆ. ಈ ಭೀಕರ ಆಕ್ಸಿಡೆಂಟ್ ದೃಶ್ಯ ವೈರಲ್ ಆಗುತ್ತಿದ್ದು, ಇಲ್ಲಿ ತಪ್ಪು ಯಾರದ್ದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ (Road Accident) ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರತಿವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಸಂಚಾರ ನಿಯಮ (Traffic rules) ಉಲ್ಲಂಘನೆಯಿಂದ, ಅಜಾಗರೂಕತೆಯಿಂದ ವಾಹನ ಓಡಿಸುವುದರಿಂದ ಹೆಚ್ಚಿನ ಅಪಘಾತಗಳು (accidents) ಸಂಭವಿಸುತ್ತವೆ. ಇದೀಗ ಇಲ್ಲೊಂದು ಅಪಘಾತದ ದೃಶ್ಯ ವೈರಲ್ ಆಗುತ್ತಿದ್ದು, ಸೀದಾ ಬಂದಂತಹ ಟ್ಯಾಂಕರ್ (tanker) ಬೈಕ್ (bike) ಸವಾರನಿಗೆ ಗುದ್ದಿದೆ. ಸೋಷಿಯಲ್ ಮೀಡಿಯಾಲ್ಲಿ ಇಲ್ಲಿ ತಪ್ಪು ಯಾರದ್ದು ಎಂಬ ಚರ್ಚೆ ಜೋರಾಗಿದ್ದು, ಹೆಚ್ಚಿನವರು ಟ್ಯಾಂಕರ್ ಮುಂಭಾಗದಲ್ಲಿದ್ದ ಟ್ಯಾಕ್ಸಿಯವನಿಂದಲೇ ಈ ಅಪಘಾತ ಸಂಭವಿಸಿದ್ದು ಎಂದು ಹೇಳಿದ್ದಾರೆ.
ಈ ಭೀಕರ ಅಪಘಾತ ಕೇರಳದಲ್ಲಿ ನಡೆದಿದ್ದು, ರಸ್ತೆ ತಿರುವಿನಲ್ಲಿ ಬೈಕ್ ಸವಾರ ತನ್ನ ಪಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮುಂಬದಿಯಿಂದ ಬಂದಂತಹ ಟ್ಯಾಂಕರ್ ಸವಾರನಿಗೆ ಗುದ್ದಿದೆ. ಈ ಭೀಕರ ಅಪಘಾತದ ಸಿಸಿ ಟಿವಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Why should we be defensive on Indian Roads? Because everyone looks at where they want to go but not what’s happening around – minimal situational awareness. pic.twitter.com/Udfck4VmAL
— DriveSmart🛡️ (@DriveSmart_IN) March 21, 2025
DriveSmart_IN ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಭಾರತದಲ್ಲಿ ರಸ್ತೆ ಸಂಚಾರದ ವೇಲೆ ನಾವೇಕೆ ಜೋಪಾನವಾಗಿರಬೇಕು? ಏಕೆಂದರೆ ಪ್ರತಿಯೊಬ್ಬರಿಗೆ ಅವರಿಗೆ ಎಲ್ಲಿ ಹೋಗಬೇಕೆಂದು ಗೊತ್ತಿದೆ, ಆದ್ರೆ ದಾರಿ ಮಧ್ಯೆ ಏನಾಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಟ್ಯಾಕ್ಸಿ ಡ್ರೈವರ್ ಕ್ರಾಸ್ ಆಗುವ ಸಲುವಾಗಿ ವಾಹನವನ್ನು ಸ್ಲೋ ಮಾಡಿದಾಗ ಓವರ್‌ಟೇಕ್ ಮಾಡಲು ಬಂದ ಟ್ಯಾಂಕರ್ ಸೀದಾ ಹೋಗಿ ಬೈಕ್ ಸವಾರನಿಗೆ ಗುದ್ದುವಂತಹ ಭೀಕರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮಿಮ್ಸ್ ಮೆಡಿಕಲ್ ಕಾಲೇಜು ಆವರಣದೊಳಗೆ ಬಂದ ಬುಸ್ ಬುಸ್ ನಾಗಪ್ಪ
ಮಾರ್ಚ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಮುಂಬದಿಯಲ್ಲಿದ್ದ ಟ್ಯಾಕ್ಸಿಯವನದ್ದೇ ತಪ್ಪುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಿರುವ ರಸ್ತೆಯಲ್ಲಿ ವಾಹನಗಳ ವೇಗ ಮಿತಿಯಲ್ಲಿರಲಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಕಡೆಗಳಲ್ಲಿ ಸ್ಪೀಡ್ ಬ್ರೇಕರ್ ಹಾಕುವ ಮೂಲಕ ಅಪಘಾತಗಳನ್ನು ತಪ್ಪಿಸಬಹುದಲ್ಲವೇʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ