Viral Video: ಮಿಸ್ ಯು ಅಮ್ಮ ಎಂದು ಹೂವಿನ ಜತೆ ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಅಮ್ಮ; ಅಚ್ಚರಿಗೊಂಡ ನೆಟ್ಟಿಗರು!

ಈ ವಿಡಿಯೋ 130 ಮಿಲಿಯನ್ ವ್ಯೂವ್ಸ್ ಪಡೆದಿದ್ದು, 5.9 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಸ್ಟಿಲ್ ಫಾಲಿಂಗ್ ಫಾರ್ ಯೂ ಹಾಡಿನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅನ್ವರ್ ಎಂಬ ವ್ಯಕ್ತಿ ವಿಮಾನ ನಿಲ್ದಾಣದ ಮುಖ್ಯದ್ವಾರದ ಗೇಟ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

Viral Video: ಮಿಸ್ ಯು ಅಮ್ಮ ಎಂದು ಹೂವಿನ ಜತೆ ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಅಮ್ಮ; ಅಚ್ಚರಿಗೊಂಡ ನೆಟ್ಟಿಗರು!
ಚಪ್ಪಲಿ ತೆಗೆದು ಮಗನಿಗೆ ಥಳಿಸಿದ ತಾಯಿ
Updated By: preethi shettigar

Updated on: Dec 03, 2021 | 3:43 PM

ವಿಮಾನ ನಿಲ್ದಾಣದಲ್ಲಿ ತನ್ನ ತಾಯಿಯನ್ನು ಬರಮಾಡಿಕೊಳ್ಳಲು ಮಗ ಹೂವಿನ ಗುಚ್ಛ ಮತ್ತು ಮಿಸ್ ಯು ಅಮ್ಮ ಎಂದು ಬರೆದಿರುವ ಬೋರ್ಡ್ ಹಿಡಿದು ಕಾಯುತ್ತಿದ್ದ. ಆದರೆ ಇದನ್ನು ನೋಡಿದ ತಾಯಿ (Mother) ಮಗನನ್ನು ತಬ್ಬಿ ಮುದ್ದಾಡುವ ಬದಲು ಚಪ್ಪಲಿ ತೆಗೆದು ಅಲ್ಲಿಯೇ ಹೊಡೆದಿದ್ದಾರೆ. ಸದ್ಯ ಮಗನನ್ನು ತಾಯಿ ಚಪ್ಪಲಿಯಿಂದ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (video viral) ಆಗಿದೆ. ಅನ್ವರ್ ಜಿಬಾವಿ ಎಂಬ ವ್ಯಕ್ತಿ ನನ್ನ ತಾಯಿ ವಾಪಾಸ್ ಆಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ 130 ಮಿಲಿಯನ್ ವ್ಯೂವ್ಸ್ ಪಡೆದಿದ್ದು, 5.9 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಸ್ಟಿಲ್ ಫಾಲಿಂಗ್ ಫಾರ್ ಯೂ ಹಾಡಿನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅನ್ವರ್ ಎಂಬ ವ್ಯಕ್ತಿ ವಿಮಾನ ನಿಲ್ದಾಣದ ಮುಖ್ಯದ್ವಾರದ ಗೇಟ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಮಿಸ್ ಯು ಅಮ್ಮ ಎಂಬ ಬೋರ್ಡ್ ಮತ್ತು ಹೂವಿನ ಗುಚ್ಛವನ್ನು ಹಿಡಿದಿರುವುದನ್ನು ಸಹ ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಅನ್ವರ್‌ನ ತಾಯಿ ವಿಮಾನ ನಿಲ್ದಾಣದ ನಿರ್ಗಮನದ ಬಾಗಿಲಿನಿಂದ ಬಂದ ತಕ್ಷಣ ಚಪ್ಪಲಿ ತೆಗೆದು ಮಗನಿಗೆ ಥಳಿಸಿದ್ದಾರೆ. ಅಮ್ಮ ಪ್ರೀತಿಯಿಂದ ಹೊಡೆಯುವಾಗ ಮಗ ಜೊರಾಗಿ ನಗುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ನೆಟ್ಟಿಗರು ಈ ವಿಡಿಯೋ ಕಂಡು ಉನ್ಮಾದಗೊಂಡಿದ್ದಾರೆ. ಅಲ್ಲದೇ ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ ಮಾಡಿದ್ದಾರೆ. ಅಮ್ಮನ ಪ್ರೀತಿ ವ್ಯಕ್ತಪಡಿಸಲು ಪರಿಪೂರ್ಣವಾದ ಮಾರ್ಗ ಇದೇ ಎಂದು ಒಬ್ಬರು ಕಮೆಂಟ್ ಮಾಡಿದರೆ. ಮತ್ತೊಬ್ಬರು ಹೀಗೆ ನೋಡಲು ಖುಷಿಯಾಗುತ್ತದೆ ಮಗನೆ ಎಂದು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ಕಮೆಂಟ್​ಗಳ ಮಹಾಪುರವೇ ಈ ವಿಡಿಯೋಗೆ ಹರಿದು ಬಂದಿದೆ.

ಇದನ್ನೂ ಓದಿ:
Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

Viral Video: ಕೆಟ್ಟು ನಿಂತ ವಿಮಾನವನ್ನು ರನ್​ವೇಯತ್ತ ತಳ್ಳಿದ ಪ್ರಯಾಣಿಕರು; ವಿಡಿಯೋ ನೋಡಿ