Mumbai: ಮುಂಬೈ ಎಂಬ ಮಹಾನಗರಿಯಲ್ಲಿ ದಿನಕ್ಕೊಂದು ವಿಸ್ಮಯ ನಡೆಯುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಟೋಚಾಲಕನೊಬ್ಬ ಅಂಧೇರಿ ಸಿಗ್ನಲ್ (Andheri Signal) ಅನ್ನು ಕರೋಕೆ ಸ್ಪಾಟ್ನಂತೆ ಪರಿವರ್ತಿಸಿದ್ದಾನೆ. ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಕರೋಕೆಯೊಂದಿಗೆ ಹಾಡಿ ಅಲ್ಲಿದ್ದವರ ಗಮನ ಸೆಳೆದಿದ್ದಾನೆ. ಸಮಯ್ ರೈನಾ ಎನ್ನುವವರು, ‘ಐಸಾ ಲಗಾ ಹೀ ನಹೀಂ ಕೀ ಅಂಧೇರಿ ಸಿಗ್ನಲ್ ಪೇ ಫಸಾ ಹೂಂ… ಎಂತಹ ಸುಂದರ ಈ ಮನುಷ್ಯ! ಎಂದು Xನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral: ‘ತುಂಬಾ ಮುದ್ದಾಗಿದ್ದೀರಿ’ ನಾಗಾಲ್ಯಾಂಡ್ ಸಚಿವರಿಗೆ ಇಂಡಿಗೋ ಗಗನಸಖಿಯಿಂದ ಚೀಟಿ, ಮುಂದೆ?
ಆಟೋ ಡ್ರೈವರ್ಗೆ ಗಾಯನ ಹವ್ಯಾಸವೆಂದು ತೋರುತ್ತದೆ. ಏಕೆಂದರೆ ತನ್ನ ಆಟೋಗೆ ಮೈಕ್ ಮತ್ತು ಸ್ಪೀಕರ್ ಜೋಡಿಸಿದ್ದಾನೆ. ಅವನು ಜನರನ್ನು ರಂಜಿಸಲು ಆಗಾಗ ಹಾಡುತ್ತಾನೆಂದು ತೋರುತ್ತದೆ. ಅಕ್ಟೋಬರ್ 31 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ ಸುಮಾರು 62,000 ಜನರು ನೋಡಿದ್ದಾರೆ. 2,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು ಅನೇಕರು ಪ್ರತಿಕ್ರಿಯಿಸಿದ್ದಾರೆ.
Aisa laga hi nahi ki Andheri Signal pe fasa hu. What a lovely guy! Watch till end 😂 pic.twitter.com/ajFpj9Sa1W
— Samay Raina (@ReheSamay) October 31, 2023
ನಿಜಕ್ಕೂ ಇದು ತುಂಬಾ ಚೆಂದದ ವಿಡಿಯೋ ಎಂದಿದ್ದಾರೆ ಅನೇಕರು. ಬೆಂಗಳೂರು ಆಟೋದವರು ಹೀಗೆ ಕೂಲ್ ಆಗಿ ಇರಲು ಎಂದೂ ಸಾಧ್ಯವಿಲ್ಲ ಎಂದಿದ್ದಾರೆ ಒಬ್ಬರು. ಎಂಥ ಪಾಸಿಟಿವ್ ವೈಬ್ ಎಂದಿದ್ದಾರೆ ಇನ್ನೊಬ್ಬರು. ಪ್ರತೀ ಮನುಷ್ಯನಿಗೆ ಅವನ ಹವ್ಯಾಸವೇ ಗೆಳೆಯ. ಅದನ್ನು ಮರೆಯದೇ ರೂಢಿಸಿಕೊಂಡರೆ ತನಗೂ ಹಿತ ತನ್ನ ಸುತ್ತಮುತ್ತಲಿನವರಿಗೂ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ಹ್ಯಾಲ್ಯೋವೀನ್; ಹ್ಯಾರಿಪಾಟರ್ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್ಬರ್ಗ್ ಕುಟುಂಬ
ನಿಜಕ್ಕೂ ಈ ವಿಡಿಯೋ ನೋಡಿ ನನಗೆ ಬಹಳ ಖುಷಿಯಾಗುತ್ತಿದೆ. ಪ್ರತೀ ಊರಿನಲ್ಲಿಯೂ ಇಂಥ ಆಟೋದವರಿದ್ದರೆ ಟ್ರಾಫಿಕ್ನಿಂದ ತಲೆನೋವು ಬರುವುದಿಲ್ಲ ಎಂದಿದ್ದಾರೆ ಒಬ್ಬರು. ಹಾಡು ಎನ್ನುವುದು ತನ್ನ ಖುಷಿಗೆ ನಂತರ ಉಳಿದವರ ಖುಷಿಗೆ ಎನ್ನುವುದನ್ನು ಈತ ಹೀಗೆ ಸಾಬೀತುಪಡಿಸಿದ್ದಾನೆ, ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಇಂಥ ಒಳ್ಳೆಯ ಸಂಗತಿಯನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ ಅನೇಕ ನೆಟ್ಟಿಗರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ