Viral: ಡೇಟಿಂಗ್ ನೈಟ್ ಕ್ಲಬ್ ಜತೆ ಸೇರಿ ಅಮಾಯಕ ಪುರುಷರನ್ನು ವಂಚಿಸುತ್ತಾರೆ ಈ ಯುವತಿಯರು
ಕೆಲ ಯುವತಿಯರು ಹಣದಾಸೆಗೆ ಬಿದ್ದು,ಅಥವಾ ಕೆಲ ವಂಚಕರು ಯುವತಿಯರ ಸೋಗಿನಲ್ಲಿ ಅಮಾಯಕ ಪುರುಷರನ್ನು ಬಲೆಗೆ ಬೀಳಿಸಿಕೊಂಡು ಅವರಿಂದ ಲಕ್ಷಾಂತರ ಹಣ ದೋಚಿ ಮೋಸ ಮಾಡಿರುವಂತಹ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತವೆ. ಇದೀಗ ಅಂತಹದ್ದೇ ಹೊಸ ಬಗೆಯ ಸ್ಕ್ಯಾಮ್ ಒಂದರ ಸುದ್ದಿ ಹರಿದಾಡುತ್ತಿದ್ದು, ಯುವತಿಯರು ನೈಟ್ ಕ್ಲಬ್ ಜೊತೆ ಸೇರಿಕೊಂಡು ಅಮಾಯಕ ಪುರುಷರನ್ನು ಡೇಟಿಂಗ್ ಕರೆದುಕೊಂಡು ಹೋಗುವ ನೆಪದಲ್ಲಿ, ನೈಟ್ ಕ್ಲಬ್ಗೆ ಹೋಗಿ ಸಾವಿರಾರು ರೂಪಾಯಿ ಹಣವನ್ನು ಪೀಕುತ್ತಿದ್ದಾರೆ. ಈ ಹಗರಣ ಇದೀಗ ಬಟಾ ಬಯಲಾಗಿದೆ.
ಮಹಿಳೆಯರು ಮಾತ್ರವಲ್ಲ ಪುರುಷರೂ ಕೂಡಾ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಿದೆ. ಹೆಚ್ಚಾಗಿ ಈ ಅಮಾಯಕ ಪುರುಷರು ಆನ್ ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಮಂಡ್ಯದಲ್ಲಿ ಇಂಥಹದ್ದೇ ಪ್ರಕರಣವೊಂದು ನಡೆದಿದ್ದು, ಸ್ಕ್ಯಾಮರ್ಸ್ ಯುವತಿಯ ಸೋಗಿನಲ್ಲಿ ಅರ್ಚಕರೊಬ್ಬರಿಗೆ ಫೇಸ್ಬುಕ್ ನಲ್ಲಿ ಮೆಸೇಜ್ ಮಾಡಿ ಅವರಿಂದ ಸುಮಾರು ಒಂದು ಲಕ್ಷದವರೆಗೂ ಹಣ ಪೀಕಿದ್ದರು. ಇದೀಗ ಇಲ್ಲೊಂದು ಇಂತಹದ್ದೇ ಬೆಚ್ಚಿ ಬೀಳಿಸುವ ಪ್ರಕರಣ ಬೆಳಕಿಗೆ ಬಂದಿದ್ದು, ಯುವತಿಯರು ನೈಟ್ ಕ್ಲಬ್ಗಳ ಜೊತೆ ಸೇರಿಕೊಂಡು ಅಮಾಯಕ ಪುರುಷರನ್ನು ಡೇಟಿಂಗ್ ಕರೆದುಕೊಂಡು ಹೋಗುವ ನೆಪದಲ್ಲಿ, ನೈಟ್ ಕ್ಲಬ್ಗೆ ಹೋಗಿ ಬಿಲ್ ಕೊಡುವ ನೆಪದಲ್ಲಿ ಸಾವಿರಾರು ರೂಪಾಯಿ ಹಣವನ್ನು ಪೀಕುತ್ತಿದ್ದಾರೆ. ಈ ಹಗರಣ ಸಖತ್ ವೈರಲ್ ಆಗುತ್ತಿದೆ.
ಮುಂಬೈನ ಅಂಧೇರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಒಂದಷ್ಟು ಯುವತಿಯರು ಇಲ್ಲಿನ ಗಾಡ್‌ಫಾದರ್ ಕ್ಲಬ್ & ಲಾಂಜ್ ನ ಜೊತೆ ಸೇರಿ ಅಮಾಯಕ ಪುರುಷರಿಂದ ದುಡ್ಡು ದೋಚುವ ಕೆಲಸ ಮಾಡುತ್ತಿದ್ದಾರೆ.
ವಂಚನೆ ಹೇಗೆ ನಡೆಯುತ್ತಿದೆ?
ಒಂದಷ್ಟು ನೈಟ್ ಕ್ಲಬ್ ಗಳ ಜೊತೆ ಸೇರಿ ಕೆಲ ಯುವತಿಯರು ಟಿಂಡರ್, ಬಂಬಲ್ ನಂತಹ ಡೇಟಿಂಗ್ ಆಪ್ ಅಲ್ಲಿ ಯುವಕರು ಅಥವಾ ಪುರುಷರನ್ನು ಬಲೆಗೆ ಬೀಳಿಸಿಕೊಂಡು, ನೈಟ್ ಕ್ಲಬ್ ಗೆ ಡೇಟಿಂಗ್ ಹೋಗುವ ನೆಪದಲ್ಲಿ ವಂಚನೆ ಮಾಡುತ್ತಿದ್ದಾರೆ. ಹೌದು ತಾವು ಡೀಲ್ ಮಾಡಿಕೊಂಡಿರುವ ಕ್ಲಬ್ ಗಳಿಗೆ ಹೋಗಿ, ಅಲ್ಲಿ ರೆಡ್ ಬುಲ್, ಕಾಕ್ಟೆಲ್ ಸೇರಿದಂತೆ ಇತರೆ ಒಂದೊಂದು ಜ್ಯೂಸ್ ಹಾಗೂ 100 ರಿಂದ 200 ರೂ ಒಳಗೆ ಸಿಗುವ ಇತ್ಯಾದಿ ಪಾನೀಯಗಳಿಗೆ 1 ರಿಂದ 2 ಸಾವಿರ ಬಿಲ್ ಹಾಕಿ ಯುವತಿಯಾರೊಂದಿಗೆ ಡೇಟ್ ಗೆ ಹೋದ ಅಮಾಯಕ ಪುರುಷರಿಂದ ಒಟ್ಟಾಗಿ 40 ರಿಂದ 50 ಸಾವಿರ ಹಣವನ್ನು ಪೀಕುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಮೋಸಡಾಟ ಬಟಾ ಬಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
🚨 MUMBAI DATING SCAM EXPOSE 🚨
THE GODFATHER CLUB ANDHERI WEST
◾BRAZEN SCAMMING EVERYDAY ◾12 victims in touch ◾Trap laid through Tinder, Bumble ◾Bill amounts 23K- 61K ◾3 men trapped by same girl@MumbaiPolice @CPMumbaiPolice @mymalishka @CMOMaharashtra@zomato pic.twitter.com/qGOacFCE9f
— Deepika Narayan Bhardwaj (@DeepikaBhardwaj) August 23, 2024
ಈ ಕುರಿತ ಪೋಸ್ಟ್ ಒಂದನ್ನು ದೀಪಿಕಾ ನಾರಾಯಣ ಭಾರದ್ವಾಜ್ (DeepikaBhardwaj) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಯಲಾಯಿತು ಮುಂಬೈನ ದಿ ಗಾಡ್‌ಫಾದರ್ ಕ್ಲಬ್ ನ ಡೇಟಿಂಗ್ ಹಗರಣ ಬಹಿರಂಗ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಫೋಟೋದಲ್ಲಿ ಗಾಡ್‌ಫಾದರ್ ಕ್ಲಬ್ ನಲ್ಲಿ ಕಮ್ಮಿಗೆ ಸಿಗುವ ಆಹಾರ ಪಾನೀಯಗಳಿಗೂ ಸಾವಿರಾರು ಬಿಲ್ ಬಿಲ್ ಹಾಕಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬಿಟ್ಟಿ ಹಣ ಸಿಕ್ರೆ ಕೈ ಚಾಚೋ ಜನಗಳ ಮಧ್ಯೆ ಈ ಅಜ್ಜಿ ಎಷ್ಟು ಸ್ವಾಭಿಮಾನಿ ನೋಡಿ….
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇಲ್ಲಿ ನನ್ನ ಸ್ನೇಹಿತನೂ ಕೂಡಾ ಮೋಸ ಹೋಗಿದ್ದಾನೆ. ಈ ರೆಸ್ಟೋರೆಂಟ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ರಾಜಕಾರಣಿಗಳು ಮತ್ತು ಪೋಲೀಸರ ಬೆಂಬಲವಿಲ್ಲದೆ ಇಂತಹ ದೊಡ್ಡ ಹಗರಣ ನೆಡೆಯಲು ಸಾಧ್ಯವಿಲ್ಲ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ನಾಗರಿಕ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಮತ್ತು ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆಯೂ ಹೆಚ್ಚುತ್ತಿದೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Fri, 23 August 24