Viral Video: ರೈಲ್ವೇ ಹಳಿಗೆ ಬಿದ್ದ ಮಗು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು; ಸಿಬ್ಬಂದಿಗೆ ರೈಲ್ವೇ ಇಲಾಖೆ ಪ್ರಶಂಸೆ

| Updated By: ganapathi bhat

Updated on: Apr 19, 2021 | 7:31 PM

ರೈಲ್ವೆ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸುವಂತಹ ಮನಕಲಕುವ ದೃಶ್ಯ; ನೀವೂ ನೋಡಿ ಒಂದು ಬಾರಿ ಆತನ ಧೈರ್ಯವನ್ನು..

Viral Video: ರೈಲ್ವೇ ಹಳಿಗೆ ಬಿದ್ದ ಮಗು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು; ಸಿಬ್ಬಂದಿಗೆ ರೈಲ್ವೇ ಇಲಾಖೆ ಪ್ರಶಂಸೆ
ರೈಲ್ವೇ ಹಳಿಯಲ್ಲಿ ನಡೆದ ಘಟನೆ
Follow us on

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಹಳಿಗೆ ಸಿಕ್ಕಿ ಬೀಳುತ್ತಿದ್ದ ಮಗುವೊಂದನ್ನು ರೈಲ್ವೇ ಸಿಬ್ಬಂದಿ ದೂರದಿಂದ ಓಡಿ ಬಂದು ಕೂದಲೆಳೆಯ ಅಂತರದಲ್ಲಿ ಬದುಕಿಸಿದ ವಿಡಿಯೋ ಇದೀಗ​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವನ್ನು ಕಾಪಾಡಿದ ವ್ಯಕ್ತಿಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. 

ಓರ್ವ ಮಹಿಳೆ ಮತ್ತು ಮಗು ರೈಲ್ವೇ ನಿಲ್ದಾಣದ ಅಂಚಿನಲ್ಲಿ ನಡೆದು ಸಾಗುತ್ತಿರುತ್ತಾರೆ. ಅಚಾನಕ್ ಆಗಿ ಮಗು ನಿಲ್ದಾಣದಿಂದ ಹಳಿಗೆ ಬಿದ್ದು ಬಿಡುತ್ತದೆ. ಮಹಿಳೆ ನಿಲ್ದಾಣದ ಅಂಚಿನಲ್ಲಿ ಕೈ ಜೋಡಿಸಿ ಮಗುವನ್ನೇ ಕರೆಯುತ್ತಿರುತ್ತಾಳೆ. ಅಲ್ಲೆಲ್ಲೋ ದೂರದಿಂದ ಗಮನಿಸಿದ ಆ ವ್ಯಕ್ತಿ ಓಡೋಡಿ ಬಂದು ಮಗುವನ್ನು ಮೇಲೆತ್ತಿ ಹಾಕಿ ತಾನೂ ಹಳಿಯಿಂದ ಮೇಲೇರುತ್ತಾನೆ. ಕೂದಲೆಳೆಯ ಅಂತರದಲ್ಲಿ ರೈಲು ಹಳಿಯಲ್ಲಿ ಸಾಗುತ್ತದೆ. ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ರೈಲ್ವೇ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲ್ವೇ ಸಚಿವಾಲಯವು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವನ್ನು ಕಾಪಾಡಿದ ಪಾಯಂಟ್ಸ್​ಮ್ಯಾನ್ ಮಯೂರ ಶೆಲ್ಕೆ ಅವರ ಕರ್ತವ್ಯ ಪಾಲನೆಗೆ ಗೌರವ ಸೂಚಿಸಿದೆ. ಪುಟ್ಟ ಮಗುವನ್ನು ಕಾಪಾಡಿದ ಮಯೂರ ಶೆಲ್ಕೆ ಧೈರ್ಯ ಮತ್ತು ಆತನ ಕರ್ತವ್ಯವನ್ನು ಮೆಚ್ಚಲೇಬೇಕು ಎಂದು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: IPL 2021: ಮನೀಶ್​ ಪಾಂಡೆ ಔಟ್ ಆದಾಗ ಕವಿಯಾ ಮಾರನ್ ರಿಯಾಕ್ಟ್ ಮಾಡಿದ್ದು ಹೀಗೆ; ವಿಡಿಯೋ ವೈರಲ್​

Published On - 7:28 pm, Mon, 19 April 21