Viral Video: ಭಾವೈಕ್ಯತೆಯ ಸಂಗಮ; ದೇವಾಲಯಕ್ಕೆ ತೆರಳುವ ಭಕ್ತರಿಗಾಗಿ ಮುಸ್ಲಿಂ ವ್ಯಕ್ತಿಯ ಮಾನವೀಯ ಕಾರ್ಯ

| Updated By: ಅಕ್ಷತಾ ವರ್ಕಾಡಿ

Updated on: Apr 07, 2024 | 5:43 PM

ಇತ್ತೀಚಿನ ದಿನಗಳಲ್ಲಿನ ತಾಪಮಾನವನ್ನು ನೋಡಿದ್ರೆ ಮನೆಯಿಂದ ಹೊರಗೆ ಕಾಲಿಡಲು ಕಷ್ಟಕರ ಎನ್ನುವಂತಿದೆ. ಹೀಗಿರುವಾಗ ತಮಿಳುನಾಡಿನ ದೇವಾಲಯವೊಂದರ ಹಬ್ಬದ ಸಂದರ್ಭದಲ್ಲಿ ಭಕ್ತರು ಕಲಶ ಹೊತ್ತು ಬರಿಗಾಲಿನಲ್ಲಿ ನಡೆಯುವುದನ್ನು ಕಂಡು, ಮುಸ್ಲಿಂ ವ್ಯಕ್ತಿಗಳಿಬ್ಬರು, ಭಕ್ತರ ಕಾಲಿಗೆ ಬಿಸಿಯ ಶಾಖ ತಾಕಬಾರದೆಂದು ರಸ್ತೆಗೆ ಪೈಪ್ ನಲ್ಲಿ ನೀರು ಚಿಮ್ಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Viral Video: ಭಾವೈಕ್ಯತೆಯ ಸಂಗಮ; ದೇವಾಲಯಕ್ಕೆ ತೆರಳುವ ಭಕ್ತರಿಗಾಗಿ ಮುಸ್ಲಿಂ ವ್ಯಕ್ತಿಯ  ಮಾನವೀಯ ಕಾರ್ಯ
Follow us on

ಮನಸುಗಳ ನಡುವೆ ಕೊಳ್ಳಿ ಇಟ್ಟು ಜಾತಿ ಧರ್ಮ ಮೀರಿದ ಸೌಹಾರ್ದ ಪರಂಪರಗೆ ಕೊಡಲಿ ಪೆಟ್ಟು ಹಾಕೋರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನದಲ್ಲಿ ಬಿಸಿಲ ತಾಪಕ್ಕೆ ಮನೆಯಿಂದ ಕಾಲು ಹೊರಗಿಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉರಿ ಬಿಸಿಲಿನ ನಡುವೆಯು ಇಲ್ಲೊಂದು ಭಕ್ತರ ಗುಂಪು ಕಲಶವನ್ನು ಹೊತ್ತು ಬರಿಗಾಲಿನಲ್ಲಿ ದೇವರ ದರ್ಶನಕ್ಕೆಂದು ಹೊರಟಿದ್ದು, ಬಿಸಿಯ ಶಾಖ ಭಕ್ತರ ಕಾಲಿಗೆ ತಾಕಬಾರದೆಂದು ಮುಸ್ಲಿಂ ವ್ಯಕ್ತಿಗಳಿಬ್ಬರು ರಸ್ತೆಗೆ ಪೈಪ್ ನಲ್ಲಿ ನೀರು ಚಿಮ್ಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ದೇವಾಲಯವೊಂದರ ಹಬ್ಬದ ಸಂದರ್ಭದಲ್ಲಿ ಭಕ್ತರು ಕಲಶವನ್ನು ತಲೆಯ ಮೇಲೆ ಹೊತ್ತುಕೊಂಡು ಬರಿಗಾಲಿನಲ್ಲಿ ದೇವಾಲಯಕ್ಕೆ ಹೋಗುವ ಪದ್ಧತಿ ಇದೆ. ಹೀಗೆ ಭಕ್ತರು ಸುಡು ಬಿಸಲಿನಲ್ಲೂ ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಮುಸ್ಲಿಂ ವ್ಯಕ್ತಿಗಳಿಬ್ಬರೂ ರಸ್ತೆಗೆ ನೀರು ಚಿಮ್ಮಿಸುವ ಮೂಲಕ ಭಕ್ತರ ಕಾಲಿಗೆ ಬಿಸಿಯ ಶಾಖ ತಾಕದ ಹಾಗೆ ನೋಡಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು

@ridewithprkash ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಸೀದಿಯ ಪಕ್ಕದ ರಸ್ತೆಯಲ್ಲಿ ಭಕ್ತರು ಬರಿಗಾಲಿನಲ್ಲಿ ಕಲಶ ಹೊತ್ತು ಸಾಗುವ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಗಳಿಬ್ಬರು ಭಕ್ತರ ಕಾಲಿಗೆ ಬಿಸಿಯ ಶಾಖ ತಾಕದಿರಲಿ ಎಂದು ರಸ್ತೆಯ ಮೇಲೆ ಹಾಗೂ ಭಕ್ತರ ಕಾಲಿಗೆ ಚಿಮುಕಿಸುವ ದೃಶ್ಯವನ್ನು ಕಾಣಬಹುದು.
ಮಾರ್ಚ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮುಸ್ಲಿಂ ವ್ಯಕ್ತಿಗಳಿಬ್ಬರ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ