Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!

|

Updated on: Jul 03, 2023 | 1:48 PM

Delhi: ಬೀದಿಬದಿಯಲ್ಲಿ ಇದನ್ನು ತಿಂದವರು ಕೊಲೆಸ್ಟ್ರಾಲ್​ ಚೆಕ್ ಮಾಡಿಸ್ಕೊಳ್ಳಿ ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಾರೆ ಭಾರತೀಯ ಖಾದ್ಯಗಳನ್ನೆಲ್ಲಾ ತಮಾಷೆಯ ವಸ್ತುಗಳನ್ನಾಗಿ ಮಾಡಿದ್ದಾರೆ ಈ ಫುಡ್ ವ್ಲಾಗರ್​​​ಗಳು ಎಂದು ಬೈಯ್ಯುತ್ತಿದ್ದಾರೆ ಅವರು.

Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!
ದೆಹಲಿಯ ಬೀದಿಬದಿಯಲ್ಲಿ ​ ಮ್ಯಾಗಿ
Follow us on

Maggie: ಉತ್ತರಭಾರತದ ಲೇಹ್ ಲಡಾಕ್​ನ ಗೂಡಂಗಡಿಗಳಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ಈ ಚೀನಿ ಖಾದ್ಯ ಎಲ್ಲೆಡೆಯೂ ಲಭ್ಯ. ಮುಪ್ಪಾನುಮುದುಕರಿಂದ ಹಿಡಿದು ಎಳೆಕೂಸುಗಳ ತನಕವೂ ಇದು ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಮ್ಯಾಗಿಪ್ರಿಯರಾದ  ನೀವು ನೋಡಲೇಬೇಕು. ಏಕೆಂದರೆ ನಿಮ್ಮ ಮ್ಯಾಗಿಯನ್ನು ಮತ್ತೊಮ್ಮೆ ಕೊಲೆ ಮಾಡಲಾಗಿದೆ. ಈ ಬಾರಿ ದೆಹಲಿಯ ರಸ್ತೆಬದಿ ವ್ಯಾಪಾರಿಯೊಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರತೀ ಬಾರಿಯ ಸುಪಾರಿಗೆ ಕೊಡಬೇಕಾದ ಹಣ ಕೇವಲ ರೂ. 600. ಹೌದು ಶೀರ್ಷಿಕೆಯಲ್ಲಿ ಖಂಡಿತ ಒಂದು ಸೊನ್ನೆ ಜಾಸ್ತಿ ಸೇರಿಸಲಾಗಿಲ್ಲ ಮತ್ತೆ!

ಪರಾಠಾ ಮ್ಯಾಗೀ, ಪಿಝಾ ಮ್ಯಾಗೀ, ವಿಸ್ಕೀ ಮ್ಯಾಗೀಯ ನಂತರ ಇದೀಗ ಮಟನ್​ ಮ್ಯಾಗೀ ಪ್ರವೇಶ. @dilsefoodie ಎಂಬ ಫುಡ್​ವ್ಲಾಗರ್​ (Food Vlogger) ಪುಟದಲ್ಲಿ “Maggi Apple 15 Pro Max 600 GB” ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿದೆ. ಈ ಖಾದ್ಯವನ್ನು ತಯಾರಿಸುತ್ತಿರುವವರ ಹೆಸರು ಬಂಟಿ ಮೀಟ್​ವಾಲಾ. ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿ ಬೀದಿಬದಿ ವ್ಯಾಪಾರಿ. ಈ ವಿಚಿತ್ರ ಪಾಕಪ್ರಯೋಗ ನೋಡಿದ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಅಣಾ ನೀನೆಷ್ಟಾರಾ ಕಣ್ಕಟ್ಟು ಬಯಲು ಮಾಡ್ಕೋ ನಾವ್ ಮಾತ್ರ ಆ ಹುಡುಗೀನೇ ನೋಡೋದು!​; ಸಮೂಹ ಸನ್ನಿಗೊಳಗಾದ ನೆಟ್ಟಿಗರು

ಈ ವಿಡಿಯೋ ಅನ್ನು ಶ್ರೀಮಂತರಿಗೆ ಹಂಚಿ ಎಂದು ಇದರಲ್ಲಿ ನೋಟ್​ ಬರೆಯಲಾಗಿದೆ. ಈತನಕ ಸುಮಾರು 15,000ಕ್ಕೂ ಹೆಚ್ಚು ಮಂದಿ ಈ ವಿಡಿಯೋ ನೋಡಿದ್ದಾರೆ. ಇದರಲ್ಲಿ ಮ್ಯಾಗಿ ಎಲ್ಲಿದೆಯಣ್ಣ? ಮಟನ್​ ಅನ್ನು ಮಟನ್​ನಂತೆ ತಿನ್ನಿ, ಮ್ಯಾಗಿಯನ್ನು ಮ್ಯಾಗಿಯಂತೆ ತಿನ್ನಿ. ಎರಡನ್ನೂ ಮಿಕ್ಸ್​ ಮಾಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಜಪಾನಿನ ಸುಶಿ; ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು

ಬೀದಿಬದಿಯ ಈ ವಿಚಿತ್ರ ಖಾದ್ಯಕ್ಕೆ ಇಷ್ಟೊಂದು ಹಣ ಕೊಟ್ಟು ಹೈಟೆಕ್​ ಆಸ್ಪತ್ರೆಗೆ ಹೋಗು ಅಂತೀರೇನು? ಎಂದಿದ್ದಾರೆ ಮತ್ತೊಬ್ಬರು. ಮ್ಯಾಗಿ ಬದಲಾಗಿ ಇದು ಅನ್ನದೊಂದಿಗೆ ರುಚಿಯಾಗಿರುತ್ತದೆ. ಹೀಗೆಲ್ಲ ಖಾದ್ಯಗಳ ಪರಿಮಳ ರುಚಿಯನ್ನು ಕುಲಗೆಡಿಬೇಡಿರೋ ಎಂದಿದ್ದಾರೆ ಅನೇಕರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Mon, 3 July 23