ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು

| Updated By: Pavitra Bhat Jigalemane

Updated on: Mar 13, 2022 | 3:27 PM

ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ.

ಜೌಗು ಪ್ರದೇಶದಲ್ಲಿ ಕಂಡುಬಂದ ವಿಲಕ್ಷಣ ಗ್ರೀನ್​​ ಪ್ಯೂರಿ ಹಾವು: ದಂಗಾದ ಸ್ಥಳೀಯರು
ವಿಲಕ್ಷಣ ಹಾವು
Follow us on

ನೀರಿನ ಆಳ ಸದಾ ಕುತೂಹಲಗಳ ಆಗರ. ಅದೆಷ್ಟೋ ಅಪರೂಪದ ಜೀವಿಗಳು ಹುದುಗಿಕೊಂಡಿರುತ್ತವೆ. ಇದೀಗ ಥೈಲ್ಯಾಂಡ್​ನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೀನ್​ ಪ್ಯೂರಿ ಎನ್ನುವ ವಿಲಕ್ಷಣ ಹಾವು  ಜೌಗು ಪ್ರೇದೇಶದಲ್ಲಿ ಕಂಡುಬಂದಿದೆ. ಥೈಲ್ಯಾಂಡ್​ನ ಸಖೋನ್​ ನಖೋನ್​ ಎನ್ನುವಲ್ಲಿ ಈ ಜೀವಿ ಕಂಡು ಬಂದಿದ್ದು, ಜನರು ತಬ್ಬಿಬ್ಬುಗೊಂಡಿದ್ದಾರೆ. ಕೆಲವು ಸ್ಥಳೀಯರು ಈ ಹಾವನ್ನು ಪಪ್​ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ.

ಎರಡು ಅಡಿ ಉದ್ದದ ಜೀವಿ ಹಡಗಿನೊಳಗೆ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವಿನ ತುಪ್ಪಳವು ಅಂಕಡೊಂಕಾಗಿ ಚಲಿಸುವುದನ್ನು ಕಾಣಬಹುದು. ಥಾಯ್ಲೆಂಡ್​ ಸ್ಥಳೀಯರರೊಬ್ಬರು ಹಾವನ್ನು ಗುರುತಿಸಿದ್ದು, ಈ ರೀತಿಯ ಹಾವನ್ನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ ಎಂದು ಟೈಮ್ಸ್​​ ನೌ ವರದಿ ತಿಳಿಸಿದೆ. ಸದ್ಯ ಜೀವಿಯನ್ನು ಹಿಡಿದು ಸ್ಥಳೀಯರೊಬ್ಬರ ಮನೆಯಲ್ಲಿ ಇಡಲಾಗಿದೆ. ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್​ನಿಂದ ಮಾಡಲ್ಪಟ್ಟಿದೆ ಎಂದು  ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ.

ಈ ರೀತಿಯ ಹಾವುಗಳು ಆಗ್ನೇಯ ಏಷ್ಯಾದ ಉಷ್ಣವಲಯದ ಪ್ರದೇಶಗಳಲ್ಲಿ  ಕಂಡುಬರುವ ಹೊಮಾಲೊಪ್ಸಿಡೆ ಕುಟುಂಬಕ್ಕೆ ಸೇರಿದ ವಿಷಕಾರಿ ಹಾವಿನ ಸಂತತಿಯಾಗಿದೆ. ಉತ್ತರ ಸುಮಾತ್ರಾದಿಂದ ಸಲಾಂಗಾ ದ್ವೀಪ, ಇಂಡೋನೇಷಿಯಾ ಮತ್ತು ಬೊರ್ನಿಯಯೊದವರೆಗೆ ಈ ಪ್ರಬೇಧಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ:

ಮುಂದುವರೆದ ರಷ್ಯಾ-ಉಕ್ರೇನ್​ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ​ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ

Published On - 1:23 pm, Sun, 13 March 22