Viral Video: ಈ ಸಮಯ ಶೃಂಗಾರಮಯ, ನಾಗರಹಾವಿನ ಈ ಜೋಡಿಗೆ…

| Updated By: ಶ್ರೀದೇವಿ ಕಳಸದ

Updated on: Aug 16, 2022 | 4:43 PM

Snake Making Love: ಏನ್ರಿ ನೀವು ಮನುಷ್ಯರು, ನಮ್ಮ ಏಕಾಂತವನ್ನೂ ಕದೀತೀರಲ್ಲ. ಇರಲಿ, ಈ ಜನ್ಮದಲ್ಲಿ ನೀವು ನಮ್ಮ ಹಾಗೆಯೇ ಪ್ರೀತಿಯನ್ನು ಅನುಭವಿಸಿ ಎಂದು ವರ ನೀಡಲಾಗುವುದು!

Viral Video: ಈ ಸಮಯ ಶೃಂಗಾರಮಯ, ನಾಗರಹಾವಿನ ಈ ಜೋಡಿಗೆ...
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ
Follow us on

Snake Viral Video: ಪ್ರೇಮಿಸುವುದು ಸಕಲ ಜೀವಿಗಳ ಜನ್ಮಸಿದ್ಧ ಹಕ್ಕು. ಆದರೆ ಪ್ರೇಮಿಸಲು ಏಕಾಂತ ಬೇಕೇ ಬೇಕಲ್ಲವೆ? ಕಟ್ಟಡಗಳಿಂದ ತುಂಬಿ ತುಳುಕುತ್ತಿರುವ ಈ ದಿನಮಾನಗಳಲ್ಲಿ ಯಾವ ಜೀವಿಗೂ ನಿಶ್ಯಬ್ದ, ನಿರಾಳ ಪರಿಸರದಲ್ಲಿ ಕಾಲ ಕಳೆಯಬೇಕೆಂಬ ಹಂಬಲ ಉಂಟಾಗದೇ ಇರದು. ಇಲ್ಲಿರುವ ಈ ಹಾವುಗಳು ಯಾವುದೋ ತೋಟದಲ್ಲಿ ಏಕಾಂತ ಕಂಡುಕೊಂಡು ಉತ್ಕಟತೆಯಿಂದ ಕಳೆದುಹೋಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ಹತ್ತು ಅಡಿ ಉದ್ದದ ನಾಗರ ಹಾವುಗಳು ಪರಸ್ಪರ ಮುರಿಗೆ ಹೊಡೆದುಕೊಂಡು ಹೀಗೆ ಹೆಡೆಯೆತ್ತಿ ಆಡುತ್ತಿರುವುದನ್ನು ನೆಟ್ಟಿಗರು ಪದೇಪದೆ ನೋಡುತ್ತಲೇ ಇದ್ದಾರೆ. ಹಾವುಗಳು ಸಾಮಾನ್ಯವಾಗಿ ಪ್ರೇಮದಲ್ಲಿ ಮುಳುಗಿರುವಾಗ ಹೀಗೆ ಹೆಡೆ ಎತ್ತಿ ಆಡಿಸುವುದು ಮತ್ತು ಒಂದಕ್ಕೊಂದು ಹೆಣೆದುಕೊಂಡು ನೆಲದ ಮೇಲೆ ಆಡುವುದು ಸಹಜ. ಆದರೆ ಈ ದೃಶ್ಯ ನೋಡಲು ಸಿಗುವುದು ಮಾತ್ರ ತೀರಾ ಅಪರೂಪ. ಸಾವಿರಾರು ನೆಟ್ಟಿಗರು ಈ ದೃಶ್ಯಕ್ಕೆ ಮರುಳಾಗಿದ್ದಾರೆ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್​ ಅನ್ನು ಈ ಪೋಸ್ಟ್ ಹೊಂದಿದೆ.

ವಿಡಿಯೋ ನೋಡಿ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 

ಸಕಲ ಪ್ರಾಣಿಪಕ್ಷಿಗಳು ಹೀಗೆ ಪ್ರೇಮದಲ್ಲಿ ಮೀಯುತ್ತಲೇ ಇರಲಿ. ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಕಲಾಟದಲ್ಲಿ, ಅನಗತ್ಯ ಜಂಜಡದಲ್ಲಿ ಪ್ರೇಮಿಸುವುದನ್ನೇ ಮರೆಯುತ್ತಿರುವ ಮಾನವಜೀವಿಗೆ ಈ ದೃಶ್ಯ ಸ್ಫೂರ್ತಿಯಾಗಲಿ. ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ