Viral Post: ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದುದಕ್ಕೆ ಮರದ ಪ್ಲೇ ಬಟನ್ ಗಿಫ್ಟ್​

YouTube Play Button : ನಿಮ್ಮ ಯಶಸ್ಸಿಗೆ ನಿಮ್ಮ ಸ್ನೇಹಿತರೂ ಖುಷಿಪಡುತ್ತಾರೆ ಎಂದರೆ ಅವರೇ ನಿಜವಾದ ಸ್ನೇಹಿತರು. ಎಂದಾದರೂ ಇಂಥ ಮುದ್ದಾದ ಗಿಫ್ಟ್​ ಕೊಡುವ ಆಲೋಚನೆ ನಿಮಗೆ ಬಂದಿದ್ದಿದೆಯಾ?

Viral Post: ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದುದಕ್ಕೆ ಮರದ ಪ್ಲೇ ಬಟನ್ ಗಿಫ್ಟ್​
ಕಟ್ಟಿಗೆಯ ಪ್ಲೇ ಬಟನ್!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 16, 2022 | 3:58 PM

Wooden Play Button : ಗಿಫ್ಟ್​! ನಿಮ್ಮ ಆಪ್ತರು ನಿಮಗೆ ಏನೇ ಗಿಫ್ಟ್​ ಕೊಡಲಿ ಆ ಕ್ಷಣಕ್ಕೆ ಪುಳಕ, ಉತ್ಸಾಹವನ್ನಂತೂ ಅದು ತುಳುಕಿಸದೇ ಇರದು. ಈ ಮೂಲಕ ನಿಮ್ಮೊಳಗಿನ ಬಾಂಧವ್ಯವನ್ನೂ ಒಂದು ಹೆಜ್ಜೆ ಗಟ್ಟಿಗೊಳಿಸುತ್ತದೆ. ಆದರೆ, ನಿಮ್ಮ ಯಶಸ್ಸಿಗೆ ನಿಮ್ಮ ಸ್ನೇಹಿತರೂ ಖುಷಿಪಡುತ್ತಾರೆ ಎಂದರೆ ಅವರೇ ನಿಜವಾದ ನಿಮ್ಮ ಸ್ನೇಹಿತರು. ಯೂಟ್ಯೂಬ್​ನಲ್ಲಿ 100 ಚಂದಾದಾರರನ್ನು ಪಡೆದ ಒಬ್ಬ ಹುಡುಗನಿಗೆ ಅವನ ಸ್ನೇಹಿತ ಅಚ್ಚರಿಯಾದ ಈ ಗಿಫ್ಟ್​ ನೀಡಿದ್ದಾನೆ. ಏನಿರಬಹುದು? ಬಹಳ ಮುದ್ದಾದ ಗಿಫ್ಟ್​ ಅದು. ಮೇಲೆ ಆ ಚಿತ್ರವನ್ನು ನೀವು ಈಗಾಗಲೇ ನೋಡಿದ್ದೀರಿ; ಮರದ ಪ್ಲೇ ಬಟನ್​ವುಳ್ಳ ಗಿಫ್ಟ್​. ಮಟ್ ಕೋವಲ್ (Matt Koval) ಎಂಬ ಟ್ವಿಟರ್ ಖಾತೆದಾರರು ತಮ್ಮ ಮಗನಿಗೆ ಅವನ ಸ್ನೇಹಿತ ಕೊಟ್ಟ ಈ ಗಿಫ್ಟ್​ನ ಪೋಸ್ಟ್​ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯೂಟ್ಯೂಬ್​ ಕಂಟೆಂಟ್​ ಕ್ರಿಯೇಟರ್​ಗಳು 1 ಲಕ್ಷ, 1 ಕೋಟಿ, 10 ಕೋಟಿ ಚಂದಾದಾರರನ್ನು ಪಡೆದ ಮೇಲೆ ಯೂಟ್ಯೂಬ್​ ಬೆಳ್ಳಿ, ಚಿನ್ನ, ವಜ್ರ ಮತ್ತು ಕೆಂಪು ಡೈಮಂಡ್​ ಪ್ಲೇ ಬಟನ್​ ಅನ್ನು ಉಡುಗೊರೆಯಾಗಿ ನೀಡುತ್ತದೆ. ಇದನ್ನು ಗಮನಿಸಿದ ಈ ಹುಡುಗ ತನ್ನ ಸ್ನೇಹಿತನಿಗೆ ಹೀಗೆ ತಾನೇ ಗಿಫ್ಟ್​ ಕೈಯ್ಯಾರೆ ಮಾಡಿಕೊಟ್ಟು ಸಂತೋಷ ವ್ಯಕ್ತಪಡಿಸಿದ್ದಾನೆ. 68,000 ಕ್ಕೂ ಹೆಚ್ಚು ಲೈಕ್ಸ್​ ಈ ಪೋಸ್ಟ್​ ಪಡೆದಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ಪ್ರತಿಕ್ರಿಯೆಗಳಿಂದ ಸಂತಸ ವ್ಯಕ್ತಪಡಿಸಿದ್ಧಾರೆ.

ಖರೀದಿಸಿ ಯಾರೂ ಗಿಫ್ಟ್​ ಕೊಡಬಹುದು. ಆದರೆ ಸ್ವತಃ ತಯಾರಿಸಿ? ಇದೇ ಸ್ನೇಹದ ಕೊಂಡಿಯನ್ನು ಹಿಡಿದಿಡುವ ಪ್ರೀತಿ, ಶ್ರದ್ಧೆ ಮತ್ತು ಕಟ್ಟಲಾಗದ ಬೆಲೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Tue, 16 August 22