
ನಮ್ಮ ಬಾಲ್ಯದ ದಿನಗಳೇ (Childhood days) ಚೆನ್ನಾಗಿದ್ದವು. ಆ ಕಾಲದಲ್ಲಿ ಈಗಿನ ಕಾಲದ ಮಕ್ಕಳ ಹಾಗೆ ನಾವೆಲ್ಲರೂ ಓದಿಗೆ ಅಷ್ಟೇ ಸೀಮಿತವಾಗಿರಲಿಲ್ಲ. ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಟವನ್ನು ಆಡುತ್ತಿದ್ದ ಕಾಲವೊಂದಿತ್ತು. ಶಾಲೆಯಲ್ಲಿ ಬಿಡುವಿನ ಸಮಯ, ಪಿಟಿ ಪಿರಿಯಡ್‌ನಲ್ಲಿಯೂ ಸೊಪ್ಪಾಟ, ಚೊಂಕಾಟ, ಕೆರೆದಡ ಹಾಗೂ ಹುಲಿದನ ಹೀಗೆ ನಾನಾ ರೀತಿಯ ಆಟವಾಡಿ ಖುಷಿ ಪಡುತ್ತಿದ್ದೆವು. ಆದರೆ ಇದೀಗ ಸರ್ಕಾರಿ ಶಾಲೆಯ ಮಕ್ಕಳು ಬಿಡುವಿನ ಸಮಯದಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ(Nagarahole National Park) ಹುಲಿದನ ಆಟ ಆಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಬಾಲ್ಯವನ್ನು ನೆನಪಿಸುವಂತಿದೆ ಎಂದಿದ್ದಾರೆ.
raghuprabhakarraghu ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಬಿಡುವಿನ ಸಮಯದಲ್ಲಿ ಪಾಠದ ಜೊತೆಗೆ ಆಟವನ್ನು ಆಡುತ್ತಾ ನಮ್ಮನ್ನು ಸಹ 90 ರ ದಶಕದ ಹಿಂದಕ್ಕೆ ಕರೆದುಕೊಂಡು ಹೋದರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಕೃತಿಯ ಮಡಿಲಿನಲ್ಲಿ ಸರ್ಕಾರಿಯ ಶಾಲೆಯ ಮಕ್ಕಳು ಹುಲಿದನ ಆಟವಾಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ:Video: ಪುಟ್ಟ ಹುಡುಗಿಯ ಹೃದಯ ಸ್ಪರ್ಶಿ ಉಡುಗೊರೆ ನೋಡಿ ಖುಷಿಪಟ್ಟ ಶಿಕ್ಷಕಿ
ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು ನಿಜವಾಗ್ಲೂ ಅದ್ಭುತ ದಿನಗಳು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಬಾಲ್ಯದ ನೆನಪು ಬಾಲ್ಯದಲ್ಲೇ ಮಾರಾಯ್ತು. ಈಗ ನೆನಪುಗಳು ಅಷ್ಟೇ ಎಂದು ಹೇಳಿದ್ದಾರೆ. ಮರುಕಳಿಸಿದ ಸವಿನೆನಪು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ