24 ಗಂಟೆಗಳಲ್ಲಿ 10 ಸಾವಿರ ದೋಸೆ ತಯಾರಿಸಿ ದಾಖಲೆ ಬರೆದ ಬಾಣಸಿಗ ವಿಷ್ಣು ಮನೋಹರ್

ಸೆಲೆಬ್ರಿಟಿ ಶೆಫ್ ಎಂದೇ ಖ್ಯಾತಿ ಪಡೆದಿರುವ ಬಾಣಸಿಗ ವಿಷ್ಣು ಮನೋಹರ್ ಈ ವರೆಗೆ 25 ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ 24 ಗಂಟೆಗಳಲ್ಲಿ ನಿರಂತರವಾಗಿ ಸರಿಸುಮಾರು 10 ಸಾವಿರ ದೋಸೆ ತಯಾರಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

24 ಗಂಟೆಗಳಲ್ಲಿ 10 ಸಾವಿರ ದೋಸೆ ತಯಾರಿಸಿ ದಾಖಲೆ ಬರೆದ ಬಾಣಸಿಗ ವಿಷ್ಣು ಮನೋಹರ್
Chef Vishnu manohar

Updated on: Oct 28, 2024 | 5:48 PM

ಈ ಹಿಂದೆ ಅಯೋಧ್ಯೆಯಲ್ಲಿ 7000 ಕೆಜಿ ‘ರಾಮ್ ಹಲ್ವಾ’ ತಯಾರಿಸಿ ದಾಖಲೆ ಬರೆದಿದ್ದ ಬಾಣಸಿಗ ವಿಷ್ಣು ಮನೋಹರ್ ಇದೀಗ ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. 24 ಗಂಟೆಗಳಲ್ಲಿ ನಿರಂತರವಾಗಿ ಸರಿಸುಮಾರು 10 ಸಾವಿರ ದೋಸೆ ತಯಾರಿಸಿದ್ದಾರೆ ವಿಷ್ಣು ಮನೋಹರ್. ಸೆಲೆಬ್ರಿಟಿ ಶೆಫ್ ಎಂದೇ ಖ್ಯಾತಿ ಪಡೆದಿರುವ ಇವರು ಈ ವರೆಗೆ 25 ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸದ್ಯ ಹೊಸ ದಾಖಲೆಯ ಕುರಿತಾದ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಮಹಾರಾಷ್ಟ್ರದ ಬಜಾಜ್ ನಗರದಲ್ಲಿ ಅಕ್ಟೋಬರ್ 27 ರಂದು ‘ದೋಸಾ ಮ್ಯಾರಥಾನ್’ ಅನ್ನು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸಲಾಗಿತ್ತು. ಸತತ 24 ಗಂಟೆಗಳಲ್ಲಿ ನಿರಂತರವಾಗಿ 10 ಸಾವಿರ ದೋಸೆ ತಯಾರಿಸಿದ್ದಾರೆ. 9 ಗಂಟೆಗಳಲ್ಲಿ 6750 ದೋಸೆಗಳನ್ನು ತಯಾರಿಸಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ನಾನು ಹಣ ನೀಡಲ್ಲ ಅಷ್ಟೆ… ಬಸ್‌ ಟಿಕೆಟ್‌ ದರ ಪಾವತಿಸಲು ನಿರಾಕರಿಸಿದ ಮಹಿಳಾ ಪೊಲೀಸ್

ಜೊತೆಗೆ ಇಲ್ಲಿ ತಯಾರಿಸಿದ ದೋಸೆಗಳನ್ನು ಜನರಿಗೆ ಉಚಿತವಾಗಿ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜನರು ದೋಸೆಯೊಂದಿಗೆ ಆನಂದಿಸಲು ಈ ಸಂದರ್ಭದಲ್ಲಿ 24 ಗಂಟೆಗಳ ಕಾಲ ತಡೆರಹಿತ ಮನರಂಜನೆಗಾಗಿ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಿಂದಿ ಮತ್ತು ಮರಾಠಿ ಹಾಡುಗಳು ಪ್ಲೇ ಹಾಗೂ ಗಜಲ್, ಭಜನೆ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿ ಏರ್ಪಡಿಸಲಾಗಿತ್ತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ