Stripes On Road: ರಸ್ತೆ ಮೇಲೆ ಕಂಡುಬರುವ ವಿವಿಧ ಬಣ್ಣದ ಗೆರೆಗಳ ಅರ್ಥವೇನು?
ರಸ್ತೆ ಮೇಲೆ ಬಿಳಿ ಬಣ್ಣದ, ಹಳದಿ ಬಣ್ಣದ ಗೆರೆಗಳನ್ನು ನೀವು ಗಮನಿಸಿರಬಹುದು. ಈ ರೀತಿ ಗರೆಗಳನ್ನು ಹಾಕಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ಈ ರೀತಿಯ ಗೆರೆಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ರಸ್ತೆ ಮೇಲೆ ಬಿಳಿ ಬಣ್ಣದ, ಹಳದಿ ಬಣ್ಣದ ಗೆರೆಗಳನ್ನು ನೀವು ಗಮನಿಸಿರಬಹುದು. ಕೆಲವೊಂದು ಭಾಗಗಳಲ್ಲಿ ಉದ್ದನೆಯ ಗೆರೆಗಳಿದ್ದರೆ, ಕೆಲವು ಭಾಗಗಳಲ್ಲಿ ಚಿಕ್ಕ ಚಿಕ್ಕ ಅಥವಾ ಎರಡೆರಡು ಗೆರೆಗಳನ್ನು ನೀವು ನೋಡಿರುತ್ತೀರಿ. ಈ ರೀತಿ ಗರೆಗಳನ್ನು ಹಾಕಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ ಈ ರೀತೀಯ ಗೆರೆಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮಧ್ಯಭಾಗದಲ್ಲಿ ಸಣ್ಣಗೆರೆ:
ಮೊದಲನೆಯದಾಗಿ, ರಸ್ತೆಯಲ್ಲಿ ಕಂಡುಬರುವ ಈ ಸಣ್ಣ ರೇಖೆಗಳು, ಏನು ಸೂಚಿಸುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ. ವಾಸ್ತವವಾಗಿ, ಈ ರೇಖೆಗಳು ಎಡದಲ್ಲಿ ಹೋಗುವ ವಾಹನ ಸವಾರರು ಬಲಭಾಗದಿಂದ ಮುಂದಿರುವ ವಾಹನಗಳನ್ನು ಎಚ್ಚರಿಕೆಯಿಂದ ಹಿಂದಿಕ್ಕಬಹುದು ಎಂಬ ಅರ್ಥವನ್ನು ಸೂಚಿಸುತ್ತದೆ.
ಬಿಳಿಬಣ್ಣದ ಉದ್ದನೆಯ ಗೆರೆಗಳು:
ರಸ್ತೆಯ ಮಧ್ಯದಲ್ಲಿ ಕಂಡುಬರುವ ಉದ್ದನೆಯ ರೇಖೆ ಅಂದರೆ ನಡುವೆ ಅಂತರವಿಲ್ಲದೇ ನೇರವಾಗಿದ್ದರೆ ಅದು ಏನು ಸೂಚಿಸುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ. ವಾಸ್ತವವಾಗಿ, ರಸ್ತೆಯ ಮಧ್ಯದಲ್ಲಿ ಅಂತರವಿಲ್ಲದೆ ಉದ್ದವಾದ ಬಿಳಿ ಗೆರೆ ಇದ್ದರೆ, ಮುಂದಿನ ವಾಹನವನ್ನು ಓವರ್ ಟೇಕ್ ಮಾಡಬಾರದು, ನಿಧಾನವಾಗಿ ಚಲಿಸಿ ಎಂಬ ಅರ್ಥವನ್ನು ನೀಡುತ್ತದೆ.
ಇದನ್ನೂ ಓದಿ: ಹಸು ಸಾಕಲು ಕಾರ್ ಶೆಡ್ಡನ್ನು ಕೌ ಶೆಡ್ ಆಗಿ ಪರಿವರ್ತಿಸಿದ ಮೈಸೂರಿನ ಕುಟುಂಬ; ಇಲ್ಲಿದೆ ನೋಡಿ ವಿಡಿಯೋ
ಉದ್ದನೆಯ ಎರಡು ಗೆರೆಗಳು:
ರಸ್ತೆಯ ನಡುವೆ ಯಾವುದೇ ಅಂತರವಿರದೇ ಉದ್ದನೆಯ ಎರಡು ಗೆರೆಗಳಿದ್ದರೆ ಯು-ಟರ್ನ್ ಅಥವಾ ಲೇನ್ ಬದಲಾವಣೆ ಮಾಡುವಂತಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ. ಇದಲ್ಲದೇ ಓವರ್ ಟೇಕ್ ಮಾಡುವಂತಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ