ಪ್ರಧಾನಿ ಮೋದಿ ಇಷ್ಟ ಆಗುವುದು ಈ ಕಾರಣಕ್ಕೆ ನೋಡಿ, ಮತ್ತೊಬ್ಬರ ಸಹಾಯಕ್ಕೆ ಯಾವಾಗಲೂ ಮೋದಿ ಮುಂದು
ಎರಡು ದಿನಗಳ ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಲ್ಲಿನ ಮಹಾರಾಜ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರು ನಿರೂಪಕರೊಬ್ಬರಿಗೆ ಮೈಕ್ ಅಡ್ಜೆಸ್ಟ್ ಮಾಡಲು ಸಹಾಯ ಮಾಡಿದ್ದು, ಇವರ ಈ ಸರಳ ವ್ಯಕ್ತಿತ್ವಕ್ಕೆ ಅಲ್ಲಿ ನೆರೆದಿದ್ದ ಜನ ಫುಲ್ ಫಿದಾ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಎರಡು ದಿನಗಳ ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ವಾರ್ಸಾದ ನವನಗರದಲ್ಲಿನ ಮಹಾರಾಜ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ ವೇಳೆ ಸಾಕಷ್ಟು ಜನ ಅಲ್ಲಿ ಭಾರತೀಯ ಪ್ರಧಾನಿಯನ್ನು ನೋಡಲು ನೆರೆದಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಸರಳತೆ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿದೆ. ಹೌದು, ಅಲ್ಲಿ ನಿರೂಪಕರೊಬ್ಬರು ಕಾರ್ಯಕ್ರಮಕ್ಕೂ ಮುಂಚೆ ಮೈಕ್ ಸರಿ ಮಾಡುತ್ತಿರುವಾಗ, ಮೋದಿಯವರು ಅವರ ಸಹಾಯಕ್ಕೆ ಹೇಗಿ ಮೈಕ್ ಅಡ್ಜೆಸ್ಟ್ ಮಾಡಿಕೊಟ್ಟಿದ್ದಾರೆ. ಇವರ ಈ ಸರಳ ನಡೆಗೆ ಅಲ್ಲಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿಯವರ ಸರಳ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಪೋಲೆಂಡ್ ನಲ್ಲೂ ಮೋದಿ ಸರಳತೆ ಮೆರೆದಿದ್ದು ಈ ಕುರಿತ ವಿಡಿಯೋವೊಂದು ವೈರಲ್ ಆಗುತ್ತಿದೆ.
Poland Citizen’s reaction says it all 🧡 pic.twitter.com/FjVUgV7gqv
— Ankur Singh (@iAnkurSingh) August 21, 2024
ಅಂಕುರ್ ಸಿಂಗ್ (Ankur Singh) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪೋಲೆಂಡ್ ನಾಗರಿಕರ ಪ್ರತಿಕ್ರಿಯೆಯು ಎಲ್ಲವನ್ನೂ ಹೇಳುತ್ತದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನಿರೂಪಕರೊಬ್ಬರು ತಯಾರಿ ನಡೆಸುತ್ತಿದ್ದ ವೇಳೆ ಪ್ರಧಾನಿ ಮೋದಿಯವರು ಮೈಕ್ ಸರಿ ಮಾಡಿ ಕೊಡುವಂತಹ ದೃಶ್ಯವನ್ನು ಕಾಣಬಹುದು. ಇಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಸರಳತೆಯನ್ನು ತೋರಿದ ಇವರ ಈ ನಡೆಗೆ ಅಲ್ಲಿ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
ಇದನ್ನೂ ಓದಿ: ಹಣ ಬೇಕಾದರೆ ಅವಳೇ ಸಂಪಾದಿಸಲಿ, 6 ಲಕ್ಷ ರೂ. ಜೀವನಾಂಶಬೇಕೆಂದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ಆಗಸ್ಟ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅವರು ಎಷ್ಟು ವಿನಮ್ರತೆ ತೋರಿದಾರಲ್ಲವೇ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ ಭಾರತೀಯರು ಹಾಗೆಯೇ ತುಂಬಾ ಸರಳತೆಯಿಂದ ಇರುತ್ತಾರೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Thu, 22 August 24