ಫ್ರೆಂಡ್‌ಶಿಪ್‌ ಅಂದ್ರೆ ಇದೇ ಅಲ್ವಾ; ಸ್ನೇಹಿತನನ್ನು ಸ್ಕೂಲ್‌ ಪಿಕ್ನಿಕ್‌ಗೆ ಕರೆದುಕೊಂಡು ಹೋಗಲು ಹಣ ಕೂಡಿಸಿದ ಶಾಲಾ ವಿದ್ಯಾರ್ಥಿಗಳು

ಸ್ನೇಹ ಸಂಬಂಧವು ರಕ್ತ ಸಂಬಂಧಕ್ಕಿಂತಲೂ ಮಿಗಿಲಾದುದು ಎಂದು ಹೇಳ್ತಾರೆ. ಈ ಮಾತಿಗೆ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ನಾವೆಲ್ಲರೂ ಸ್ಕೂಲ್‌ ಪಿಕ್ನಿಕ್‌ಗೆ ಹೋಗ್ತಿದ್ದೇವೆ, ನಮ್ಮ ಫ್ರೆಂಡ್‌ ಬರ್ಲಿಲ್ಲ ಅಂದ್ರೆ ಏನ್‌ ಚೆಂದ ಎನ್ನುತ್ತಾ ಸಹಪಾಠಿಗಳೆಲ್ಲರೂ ಸೇರಿ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ ಇದು ನಮ್ಮ ಸ್ನೇಹಿತನ ಪಿಕ್ನಿಕ್‌ ಫೀಸ್‌ ಎಂದು ಟೀಚರ್‌ ಕೈಯಲ್ಲಿ ಕೊಟ್ಟಿದ್ದಾರೆ. ಈ ನಿಶ್ಕಲ್ಮಶ ಸ್ನೇಹದ ಸುಂದರ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಫ್ರೆಂಡ್‌ಶಿಪ್‌ ಅಂದ್ರೆ ಇದೇ ಅಲ್ವಾ; ಸ್ನೇಹಿತನನ್ನು ಸ್ಕೂಲ್‌ ಪಿಕ್ನಿಕ್‌ಗೆ ಕರೆದುಕೊಂಡು ಹೋಗಲು ಹಣ ಕೂಡಿಸಿದ ಶಾಲಾ ವಿದ್ಯಾರ್ಥಿಗಳು
ವೈರಲ್​ ವಿಡಿಯೋ
Edited By:

Updated on: Feb 11, 2025 | 5:07 PM

ಸ್ಕೂಲ್‌ ಟ್ರಿಪ್‌, ಪಿಕ್ನಿಕ್‌ಗೆ ಹೋಗುವುದೆಂದರೆ ಮಕ್ಕಳಿಗೆ ಏನೋ ಒಂಥರಾ ಖುಷಿ. ಹೆಚ್ಚಿನ ಮಕ್ಕಳು ಶಾಲಾ ಪ್ರವಾಸಗಳಿಗೆ ಹೋದ್ರೆ, ಹಣಕಾಸಿನ ಕೊರತೆಯ ಕಾರಣ ಕೆಲ ಪೋಷಕರು ತಮ್ಮ ಮಕ್ಕಳನ್ನು ಟ್ರಿಪ್‌ಗೆ ಕಳಿಸಲು ಹಿಂದೇಟು ಹಾಕ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಹಣವಿಲ್ಲವೆಂಬ ಕಾರಣಕ್ಕೆ ಸ್ನೇಹಿತ ಸ್ಕೂಲ್‌ ಪಿಕ್ನಿಕ್‌ಗೆ ಬರಲ್ಲ ಎಂದು ಅರಿತ‌ ಶಾಲಾ ಬಾಲಕರು, ನಾವು ಪಿಕ್ನಿಕ್‌ಗೆ ಹೋಗ್ತಿದ್ದೇವೆ ಅಂದ್ರೆ, ನಮ್‌ ಫ್ರೆಂಡ್‌ ಕೂಡಾ ಬರ್ಲೇ ಬೇಕು ಎನ್ನುತ್ತಾ ತಮ್ಮ ಪಾಕೆಟ್‌ ಮನಿಯನ್ನು ಸಂಗ್ರಹಿಸಿ ಇದು ನಮ್ಮ ಸ್ನೇಹಿತನ ಪಿಕ್ನಿಕ್‌ ಫೀಸ್‌ ಎಂದು ಟೀಚರ್‌ ಕೈಯಲ್ಲಿ ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈ ನಿಶ್ಕಲ್ಮಶ ಸ್ನೇಹಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ನೇಪಾಳದ ಶಾಲೆಯೊಂದರಲ್ಲಿ ಬಡ ಸ್ನೇಹಿತ ಪ್ರಿನ್ಸ್‌ ಎಂಬ ಬಾಲಕನನ್ನು ಶಾಲಾ ಪಿಕ್ನಿಕ್‌ಗೆ ಕರ್ಕೊಂಡು ಹೋಗಲು ಸಹಪಾಠಿಗಳೆಲ್ಲರೂ ಸೇರಿ ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ ಟೀಚರ್‌ ಕೈಯಲ್ಲಿ ಕೊಟ್ಟಿದ್ದಾರೆ. ಸ್ನೇಹಿತರ ಈ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪ್ರಿನ್ಸ್‌ ಕಣ್ಣೀರು ಹಾಕಿದ್ದಾನೆ.

ಈ ಕುರಿತ ವಿಡಿಯೋವನ್ನು mesangye ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಒಬ್ಬರಿಗೊಬ್ಬರು ಸಹಾಯ ಮಾಡುವುದು ಮನುಷ್ಯರಾಗಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ಈ ಪುಟ್ಟ ದೇವತೆಗಳು ಶುದ್ಧ ಮತ್ತು ಮುಗ್ಧ ಮನಸ್ಸಿನಿಂದ ಆ ಕೆಲಸವನ್ನು ಮಾಡುತ್ತಿದ್ದಾರೆ” ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ: 

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತರಗತಿಯಲ್ಲಿ ಕುಳಿತಂತಹ ಸಹಪಾಠಿಗಳು ತಮ್ಮ ಸ್ನೇಹಿತ ಪ್ರಿನ್ಸ್‌ನ ಸ್ಕೂಲ್‌ ಪಿಕ್ನಿಕ್‌ಗಾಗಿ ಹಣ ಸಂಗ್ರಹಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಸಂಗ್ರಹಿಸಿದ ಹಣವನ್ನೆಲ್ಲಾ ವಿದ್ಯಾರ್ಥಿಗಳು ಶಿಕ್ಷಕಿಯ ಕೈಯಲ್ಲಿ ಕೊಟ್ಟಿದ್ದು, ಸ್ನೇಹಿತರ ಈ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪ್ರಿನ್ಸ್‌ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: ಚಿಕನ್‌ ಬಿರಿಯಾನಿ ಬದಲಿಗೆ ಬೀಫ್‌ ಬಿರಿಯಾನಿ ನೀಡಲಾಗುವುದು; ನೋಟಿಸ್‌ ಪ್ರಕಟಿಸಿದ ವಿಶ್ವವಿದ್ಯಾಲಯ

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಶಾಲೆಯಲ್ಲ ಪುಟ್ಟ ಸ್ವರ್ಗದಂತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಕ್ಕಳಿಗೆ ಇಂತಹ ದಯೆಯ ಗುಣವನ್ನು ತುಂಬಿದ ಹೆತ್ತವರು ಹಾಗೂ ಶಿಕ್ಷಕರಿಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ನನ್ನ ಕಣ್ಣಂಚಲಿ ನೀರು ಬಂತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ