Viral: ಮುಂದುವರೆಸಲು ಕಷ್ಟವಾಗ್ತಿದೆ; ಗಬಗಬನೆ ತಿನ್ನೋ ಕೆಲಸಕ್ಕೆ ನಿವೃತ್ತಿ ಘೋಷಿಸಿದ ಫೇಮಸ್ ಫುಡ್ ಇನ್‌ಫ್ಲುಯೆನ್ಸರ್
ತಿನ್ನೋದನ್ನೇ ವೃತ್ತಿಯನ್ನಾಗಿಸಿಕೊಂಡ ಹಲವಾರು ಇನ್‌ಫ್ಲುಯೆನ್ಸರ್‌ಗಳಿದ್ದಾರೆ. ಹೌದು ಇವರುಗಳು ಕೇವಲ ಕುಳಿತು ಬಗೆಬಗೆಯ ಆಹಾರವನ್ನು ಗಬಗಬನೆ ತಿನ್ನೋ ವಿಡಿಯೋವನ್ನು ಹರಿಬಿಡುವ ಮೂಲಕ ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಾರೆ. ಹೀಗೆ ತಿನ್ನೋದ್ರಲ್ಲೇ ಫೇಮಸ್ ಆದವರಲ್ಲಿ ಜಪಾನಿನ ಯುಕಾ ಕಿನೋಶಿತಾ ಕೂಡಾ ಒಬ್ರು. ಇದೀಗ ಈ ಮಹಿಳೆ ತಿನ್ನೋ ಕೆಲಸಕ್ಕೆ ನಿವೃತ್ತಿಯನ್ನು ಘೋಷಣೆ ಮಾಡಿದ್ದು, ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.

ಹಂಡೆಗಟ್ಟಲೆ ಬಗೆಬಗೆಯ ಆಹಾರಗಳನ್ನು ಒಂದೇ ಬಾರಿಗೆ ತಿನ್ನುವ ಮುಕ್ಬಾಂಗ್ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದರವರು ಹಲವರಿದ್ದಾರೆ. ಅದೆಷ್ಟೋ ಆಹಾರ ಪ್ರಿಯರು ತಿನ್ನೋ ಕೆಲಸವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು, ಯುಟ್ಯೂಬ್‌ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಹೀಗೆ ಗಬಗಬನೆ ಆಹಾರ ತಿಂದು ಫೇಮಸ್ ಆದವರಲ್ಲಿ ಜಪಾನಿನ ಯುಕಾ ಕಿನೋಶಿತಾ ಕೂಡಾ ಒಬ್ರು. ತಿನ್ನುವಂತಹ ವಿಡಿಯೋ ಮಾಡುವ ಮೂಲಕ ಯುಟ್ಯೂಬ್‌ನಲ್ಲಿ 52 ಲಕ್ಷಕ್ಕೂ ಹೆಚ್ಚಿನ ಸಬ್‌ಸ್ಕ್ರೈಬರ್ಸ್‌ಗಳನ್ನು ಹೊಂದಿರುವ ಇವರು ಇದೀಗ ತಮ್ಮ ಈ ವೃತ್ತಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಯಾರು ಈ ಕಿನೋಶಿತಾ?
ಕಿನೋಶಿತಾ ಮೊದಲ ಬಾರಿಗೆ 2009 ರಲ್ಲಿ ಜಪಾನಿನ ರಿಯಾಲಿಟಿ ಶೋ ದಿ ಬ್ಯಾಟಲ್ ಆಫ್ ಬಿಗ್ ಈಟರ್ಸ್‌ನಲ್ಲಿ ಖ್ಯಾತಿಯನ್ನು ಗಳಿಸಿದರು. ಅವರು ಸ್ಪರ್ಧೆಯಲ್ಲಿ ಗೆಲ್ಲದಿದ್ದರೂ, ಅವರು ಬೇಗನೆ ಜನಪ್ರಿಯತೆಯನ್ನು ಗಳಿಸಿದರು ಮತ್ತು 2014 ರಲ್ಲಿ ಯುಟ್ಯೂಬ್‌ನಲ್ಲಿ ಚಾನೆಲ್ ಅನ್ನು ಪ್ರಾರಂಭಿಸಿದರು. ಅಲ್ಲಿ ಅವರು 600 ಫ್ರೈಡ್ ಚಿಕನ್, 100 ಬರ್ಗರ್ ಹೀಗೆ ಅವರು ಹೆಚ್ಚಿನ ಪ್ರಮಾಣದ ಆಹಾರ ಸೇವಿಸುವ ಮುಕ್ಬಾಂಗ್ ವಿಡಿಯೋಗಳನ್ನು ಹರಿಬಿಡುವ ಮೂಲಕ ಇನ್ನಷ್ಟು ಖ್ಯಾತಿಯನ್ನು ಗಳಿಸಿದರು. ಇದೀಗ ಮುಕ್ಬಾಂಗ್ ವಿಡಿಯೋಗಳನ್ನು ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನು ಗಳಿಸಿದ ಯುಕಾ ಕಿನೋಶಿತಾ ವಯಸ್ಸಾಯಿತು ಹಾಗೂ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ತಮ್ಮ ತಿನ್ನೋ ಕೆಲಸಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
“ಫೆಬ್ರವರಿ 4 ಕ್ಕೆ ನನಗೆ 40 ವರ್ಷ ತುಂಬಿದೆ ಮತ್ತು ನಾನು ಅತಿಯಾಗಿ ತಿನ್ನುವ ಕೆಲಸವನ್ನು ಮುಂದುವರೆಸಲು ನಿಜವಾಗಿಯೂ ನನಗೆ ಕಷ್ಟವಾಗ್ತಿದೆ. ಕಳೆದ ಕೆಲವು ವರ್ಷಗಳಿಂದ ನನ್ನ ಆರೋಗ್ಯ ಹದಗೆಟ್ಟಿದ್ದು, ಅತಿಯಾಗಿ ತಿಂದಾಗ ನನಗೆ ತುಂಬಾ ಸುಸ್ತು ಆವರಿಸುತ್ತದೆ, ಮೊದಲಿನಷ್ಟು ತಿನ್ನಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ” ಎಂದು ಕಿನೋಶಿತಾ ಹೇಳಿದ್ದಾರೆ.
ಇದನ್ನೂ ಓದಿ; ಕಾಲೇಜಿನಲ್ಲಿ ಏರ್ಪಡಿಸಿದ್ದ ಸರಸ್ವತಿ ಪೂಜೆಯಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ನೃತ್ಯ ಪ್ರದರ್ಶನ; ವಿಡಿಯೋ ವೈರಲ್
ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್‌ನಿಂದ ಬಳಲುತ್ತಿರುವ ಕಿನೋಶಿತಾ ಏಳು ತಿಂಗಳ ವಿರಾಮದ ನಂತರ ಸಾಮಾಜಿಕ ಮಾಧ್ಯಮಕ್ಕೆ ಬಂದು ಅಧಿಕೃತವಾಗಿ ನಿವೃತ್ತಿಯನ್ನು ಘೋಷಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




