
Viral Video : ತಮ್ಮ ಮದುವೆ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂದು ಬಯಸದವರು ಯಾರಿದ್ದಾರೆ? ಅದಕ್ಕಾಗಿ ಎಷ್ಟೇ ಖರ್ಚಾದರೂ ಸರಿ, ಅಂದುಕೊಂಡಿದ್ದು ಈಡೇರಿದರೆ ಮುಗಿಯಿತು ಎನ್ನುವ ಕಾಲಮಾನ ಈಗಿನವರದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುಮಗಳು ತನ್ನ ತಂದೆಯೊಂದಿಗೆ ಕಲ್ಯಾಣಮಂಟಪಕ್ಕೆ ಹೀಗೆ ಕ್ರೇನ್ ಸಹಾಯದಿಂದ ಬಂದಿಳಿಯುತ್ತಾಳೆ. ಸ್ವರ್ಗದಿಂದ ಧರೆಗಳಿದಂತೆ! ಆದರೆ ನೆಟ್ಟಿಗರು ಈ ವಿಡಿಯೋ ನೋಡಿ ವಿಚಲಿತರಾಗಿದ್ದಾರೆ. ಇಂಥ ಸಾಹಸಗಳನ್ನು ಯಾರೂ ಎಂದೂ ಪ್ರಯತ್ನಿಸಲು ಹೋಗಬೇಡಿ. ಏನಾದರೂ ಅಪಘಾತ ಸಂಭವಿಸಿದರೆ ಏನು ಗತಿ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಅಪ್ಪನೊಂದಿಗೆ ಹೀಗೆ ಬರುತ್ತಿರುವ ವಧುವನ್ನು ಅಲ್ಲಿರುವ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ, ಅನೇಕರು ಫೋಟೋ, ವಿಡಿಯೋದಲ್ಲಿ ಮುಳುಗಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 1.8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 2,600ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ದಯವಿಟ್ಟು ಇಂಥದನ್ನೆಲ್ಲ ಅನುಕರಿಸಬೇಡಿ ಎಂದು ಕೇಳಿಕೊಂಡಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : ಗುರುಗ್ರಾಮ್ನ ‘ಸ್ವೀಟಿ ಮತ್ತು ಶೇರು’ ಭಾರತೀಯ ವಿವಾಹ ಪದ್ಧತಿಯಲ್ಲಿ ದಾಂಪತ್ಯಜೀವನಕ್ಕೆ
ಬದುಕೆಂದರೆ ಸಿನೆಮಾ ಅಲ್ಲ, ಅಲ್ಲಿ ನಡೆಯುವುದನ್ನೆಲ್ಲ ಇಲ್ಲಿ ಅನುಕರಿಸಬೇಡಿ ಎಂದಿದ್ದಾರೆ ಒಬ್ಬರು. ಇದು ಮಿಷನ್ ಇಂಪಾಸಿಬಲ್ ಸಿನೆಮಾದ ಆರಂಭಿಕ ದೃಶ್ಯದಂತೆ ಅನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಡುವೆಯೇ ಅದು ಮುರಿದು ಬಿದ್ದಿದ್ದರೆ ಏನು ಗತಿ ಎಂದಿದ್ದಾರೆ ಮಗದೊಬ್ಬರು. ಇಂಥ ಶೋಕಿ ಮಾಡುವವರಿಗೆ ನಿಜಕ್ಕೂ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ ಒಬ್ಬರು. ಕರೆಂಟ್ ಹೋದರೆ ಇವರ ಅವಸ್ಥೆ ಏನಾಗಬೇಡ? ಎಂದಿದ್ದಾರೆ ಮತ್ತೊಬ್ಬರು. ವೆಡ್ಡಿಂಗ್ ಪ್ಲ್ಯಾನರ್ ಯಾರೋ ಅವರನ್ನು ಇಲ್ಲಿ ಟ್ಯಾಗ್ ಮಾಡಿ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:20 am, Sat, 10 December 22