Video: ನವಜಾತ ಶಿಶುವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಪೊದೆಯಲ್ಲಿ ಎಸೆದು ಹೋದ ಹೆತ್ತಮ್ಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 29, 2024 | 12:25 PM

ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ತಕ್ಷಣ ಮಾನವೀಯತೆಯನ್ನು ಸಹ ಮರೆತು ಹೆತ್ತವರೇ ಆ ಮುಗುವನ್ನು ಕಸದ ತೊಟ್ಟಿಗೆ ಎಸೆದು ಬಂದಂತಹ ಘಟನೆಗಳು ನಡೆದಿದೆ. ಇದೀಗ ಅಂತಹದೇ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಪೊದೆಗೆ ಎಸೆದು ಹೋಗಿದ್ದಾಳೆ. ಗ್ರಾಮಸ್ಥರು ಮಗುವನ್ನು ರಕ್ಷಿಸಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Video: ನವಜಾತ ಶಿಶುವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಪೊದೆಯಲ್ಲಿ ಎಸೆದು ಹೋದ ಹೆತ್ತಮ್ಮ
ವೈರಲ್​​ ವಿಡಿಯೋ
Follow us on

ಸಾಕಲು ಆಗುವುದಿಲ್ಲ ಎಂದು, ಈ ಹೆಣ್ಣು ಮಗು ಯಾಕಾಗಿ ಹುಟ್ಟಿತೋ ಎಂದು ಹೆತ್ತ ತಂದೆ ತಾಯಿಯೇ ತಮ್ಮ ಕಂದಮ್ಮನನ್ನು ಕಸದ ತೊಟ್ಟಿಗೆ ಎಸೆದು ಹೋದಂತಹ, ಬೀದಿಯಲ್ಲಿ ಬಿಟ್ಟು ಬಂದಂತಹ ಅದೆಷ್ಟೋ ಅಮಾನವೀಯ ಘಟನೆಗಳು ನಡೆದಿದೆ. ಇನ್ನೂ ಕೆಲವು ಪಾಪಿಗಳು ಹುಟ್ಟಿದ ತಕ್ಷಣ ಮಗುವನ್ನು ಕೊಂದು ಕಸದ ತೊಟ್ಟಿಗೆ ಎಸದದ್ದು ಕೂಡಾ ಇದೆ. ಇದೀಗ ಅಂತಹದೇ ಅಮಾನವೀಯ ಘಟನೆಯೊಂದು ನಡೆದಿದ್ದು, ಹೆತ್ತವರೆ ತಮ್ಮ ನವಜಾತ ಶಿಶುವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಪೊದೆಗೆ ಎಸೆದು ಹೋಗಿದ್ದಾರೆ. ಮಗುವಿನ ಅಳುವ ಸದ್ದನ್ನು ಕೇಳಿ ಬಂದ ಗ್ರಾಮಸ್ಥರು ಆ ಮಗುವನ್ನು ರಕ್ಷಿಸಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಗುಜರಾತಿನ ಲಾವರಿಸ್‌ ಎಂಬಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಕುರಿತ ಪೋಸ್ಟ್‌ ಒಂದನ್ನು rajalbarot_live ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಘೋರ ಕಲಿಯುಗ, ಲಾವರಿಸ್‌ನಲ್ಲಿ ಕಸದ ತೊಟ್ಟಿಯಲ್ಲಿ ಪತ್ತೆಯಾದ ನವಜಾತ ಶಿಶು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ವೈರಲ್‌ ವಿಡಿಯೋದಲ್ಲಿ ಪೊದೆಯ ಬಳಿ ನವಜಾತ ಶಿಶು ಪತ್ತೆಯಾದ ಹೃದಯ ವಿದ್ರಾವಕ ದೃಶ್ಯವನ್ನು ಕಾಣಬಹುದು. ರಾತ್ರಿಯ ವೇಳೆ ಮಗು ಅಳುವ ಸದ್ದನ್ನು ಕೇಳಿ ಪೊದೆಯ ಬಳಿ ಬಂದ ಗ್ರಾಮಸ್ಥರಿಗೆ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕವರ್‌ ಒಂದು ಕಾಣಿಸುತ್ತದೆ. ಅದನ್ನು ಬಿಡಿಸಿ ನೋಡಿದಾಗ, ಅದರಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಹಸಿವಿನಿಂದ ಅಳುತ್ತಿದ್ದ ಆ ಮಗುವನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅರೇ.. ಹಾವಿಗೂ ಹಾರ್ಟ್‌ ಅಟ್ಯಾಕ್‌ ಆಗುತ್ತಾ? ಇಲ್ಲಿದೆ ನೋಡಿ ವಿಡಿಯೋ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮನುಷ್ಯ ಯಾಕಿಷ್ಟು ಕ್ರೂರಿಯಾಗಿದ್ದಾನೆ, ಆ ಮಗುವಿಗೆ ಒಂದೊಳ್ಳೆ ಆಶ್ರಯ ಸಿಗಲಿ ಎಂದು ನಾನು ಆಶಿಸುತ್ತೇನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಪಾಪಿ ತಂದೆ ತಾಯಿಯೂ ಇದ್ದಾರಾ?ʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಅನೇಕರು ಪುಟ್ಟ ಮಗುವಿಗೆ ಈ ಶಿಕ್ಷೆ ನೀಡಿದ ಪಾಪಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ