Viral Video: ಇದು ನೆಕ್ಸ್ಟ್ ಲೆವೆಲ್ ಚೀಟಿಂಗ್; ಎಕ್ಸಮ್ ಹಾಲ್​​​ನಲ್ಲಿ ಚೀಟಿಂಗ್ ಪ್ರತಿಭೆಗಳು 

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 18, 2024 | 6:52 PM

ಬಹುತೇಕ ಎಲ್ಲಾ ಲಾಸ್ಟ್ ಬೇಂಚ್ ವಿದ್ಯಾರ್ಥಿಗಳೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎಕ್ಸಾಮ್ ಹಾಲ್ ನಲ್ಲಿ ಚೀಟಿಂಗ್ ಮಾಡಿರುತ್ತಾರೆ ಅಲ್ವಾ.  ಹೀಗೆ ಚೀಟಿಯಿಟ್ಟು ಪರೀಕ್ಷೆಯಲ್ಲಿ ಕಾಪಿ ಹೊಡೆಯಲು  ಹೋಗಿ ಶಿಕ್ಷಕರ ಕೈಯಲ್ಲಿ ತಗಳಕೊಂಡ ಉದಾಹರಣೆಗಳೂ ಇವೆ. ಅದೇ ರೀತಿ ಇಲ್ಲೊಂದು ಜಪಾನೀಸ್ ಸಿನೆಮಾವೊಂದರ ವಿಡಿಯೋ   ತುಣುಕು  ವೈರಲ್ ಆಗಿದ್ದು, ಅಬ್ಬಬ್ಬಾ ಹಿಂಗೆಲ್ಲಾ ಪರೀಕ್ಷೆಯಲ್ಲಿ ಕಾಪಿ  ಮಾಡ್ಬೋದಾ?  ಈ ಐಡಿಯಾಗಳು ನಮ್ಮ ಶಾಲಾ ದಿನಗಳಲ್ಲೂ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ.  

Viral Video: ಇದು ನೆಕ್ಸ್ಟ್ ಲೆವೆಲ್ ಚೀಟಿಂಗ್; ಎಕ್ಸಮ್ ಹಾಲ್​​​ನಲ್ಲಿ ಚೀಟಿಂಗ್ ಪ್ರತಿಭೆಗಳು 
Follow us on

ಕೆಲವೊಬ್ಬ ವಿದ್ಯಾರ್ಥಿಗಳಿಗೆ  ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸ್ ಆಗಬೇಕು ಎನ್ನುವ ಮನೋಭಾವವೇ ಇರೋದಿಲ್ಲ. ಕೆಲವೊಬ್ಬರು  ಎಕ್ಸಾಮ್ ಇದೆ, ಚೆನ್ನಾಗಿ ಓದ್ಬೋಕು ಅನ್ನೋ ವಿಚಾರವನ್ನೇ ತಲೆಗೆ ಹಾಕಿಕೊಳ್ಳದೆ, ಶಿಕ್ಷಕರಿಗೆ  ಗೊತ್ತಾಗದಂತೆ ಕಾಪಿ ಹೊಡೆದ್ರೆ ಆಯ್ತಪ್ಪಾ…  ಅಂತ ಯಾವುದೇ ಟೆನ್ಷನ್ ಇಲ್ಲದೆ ಫ್ರೆಂಡ್ಸ್ ಜೊತೆ ಆಟವಾಡಲು ಹೋಗ್ತಾರೆ.  ಹೀಗೆ  ಕೆಲವೊಬ್ಬ ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಬ್ಯಾಕ್ ಬೆಂಚ್ ಸ್ಟೂಡೆಂಟ್ಗಳು ಪರೀಕ್ಷಾ ಕೊಠಡಿಯಲ್ಲಿ ಕಾಪಿ ಹೊಡೆಯುವಂತಹ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು,  ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ನೆಕ್ಸ್ಟ್ ಲೆವೆಲ್ ಚೀಟಿಂಗ್ ಮಾಡಿದ್ದಾರೆ.  ಈ ವಿಡಿಯೋ ದೃಶ್ಯಾವಳಿಗಳನ್ನು ನೋಡಿ , ಅಬ್ಬಬ್ಬಾ ಹಿಂಗೆಲ್ಲಾ ಕಾಪಿ ಮಾಡ್ಬೋದಾ?  ಈ ವಿಷ್ಯನೇ ನಮ್ಗೆ ಗೊತ್ತಿರ್ಲಿಲ್ವೇ ಅಂತ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಈ ವೈರಲ್ ವಿಡಿಯೋ ತುಣುಕು  1996 ರಲ್ಲಿ ತೆರೆಕಂಡ ಎಂಬ ಜಪಾನೀಸ್ ಸಿನೆಮಾದದ್ದಾಗಿದ್ದೆ. ಈ ವಿಡಿಯೋ ತುಣುಕಿನಲಲಿ ವಿದ್ಯಾರ್ಥಿಗಳು ಎಕ್ಸಾಮ್ ಹಾಲ್ ನಲ್ಲಿ ಮೇಷ್ಟ್ರ ಕಣ್ತಪ್ಪಿಸಿ ಚಿತ್ರ ವಿಚಿತ್ರವಾಗಿ ಕಾಪಿ ಹೊಡೆಯುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.  ಒಬ್ಬ ವಿದಾರ್ಥಿ ತನ್ನ  ಗುಂಗುರು ಕೂದಲಿನಲ್ಲಿ ಚೀಟಿ ಇಟ್ಟು ಪರೀಕ್ಷೆಯಲ್ಲಿ ನಕಲು ಮಾಡಿದರೆ,  ಇನ್ನೊಬ್ಬ ವಿದ್ಯಾರ್ಥಿನಿ ತನ್ನ ಕೋಟ್ ಒಳಗೆ ಚೀಟಿಯಿಟ್ಟು ಕಾಪಿ ಹೊಡೆದಿದ್ದಾಳೆ. ಅಪ್ಪಾ ದೇವ್ರೆ ಹಿಂಗೂ ಚೀಟಿಂಗ್ ಮಾಡ್ಬಹುದಾ  ಎಂದು  ಹಲವರು ಈ ವಿಡಿಯೋ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

@TheFigen_ ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಎಕ್ಸ್ಪರ್ಟ್ಸ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ  ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಕಣ್ತಪ್ಪಿಸಿ, ಚಿತ್ರ ವಿಚಿತ್ರವಾಗಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಖತರ್ನಾಕ್ ಕಳ್ಳನಿಗೆ ಪ್ರಯಾಣಿಕರು ನೀಡಿದ ಶಿಕ್ಷೆ ಏನು ಗೊತ್ತಾ?

ಜನವರಿ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತು ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಇದು ನೆಕ್ಸ್ಟ್ ಲೆವೆಲ್ ಚೀಟಿಂಗ್ʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜ ಜೀವನದಲ್ಲಿ ಹೀಗೆ ಮಾಡಲು ಸಾಧ್ಯನಾʼ ಅಂತ ಕೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼನನ್ನ ವಿದ್ಯಾರ್ಥಿ ಜೀವನದಲ್ಲಿ ಈ ಐಡಿಯಾಗಳು ಏಕೆ ಬರಲಿಲ್ಲ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ