Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

|

Updated on: Aug 12, 2023 | 4:46 PM

Solo Woman Bike Rider : ಚೆನ್ನೈನ ರೇಷ್ಮಾ ಕಾಸೀಮ್​ ನೂರ್​ ಸೋಲೋ ಬೈಕ್​ ರೈಡರ್​, ಭಾರತದಾದ್ಯಂತ 7 ತಿಂಗಳುಗಳ ಕಾಲ ಏಕಾಂಗಿಯಾಗಿ ಬೈಕ್​ ಪ್ರಯಾಣ ಮಾಡಿರುವ ಇವರು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಸುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್
ಚೆನ್ನೈನ ಸೋಲೋ ಬೈಕ್​ ರೈಡರ್ ರೇಷ್ಮಾ ಕಾಸೀಮ್ ನೂರ್
Follow us on

Bike Rider : ‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಮತ್ತವರು ಬದುಕಿನಲ್ಲಿ ಒಮ್ಮೆಯಾದರೂ ಬೈಕ್ ಪ್ರಯಾಣಕ್ಕೆ ತೆರೆದುಕೊಳ್ಳಬೇಕು. ಆಗ ಅವರ ಜೀವನದೃಷ್ಟಿಯೇ ಬದಲಾಗುತ್ತದೆ’ ಎನ್ನುತ್ತಾರೆ ಚೆನ್ನೈ ಮೂಲದ ಬೈಕ್​ ರೈಡರ್ ರೇಷ್ಮಾ ಕಾಸೀಮ್ ನೂರ್​ (Reshma Kasim Noor). ಕ್ಲಾಸಿಕ್​ 350 ಬೈಕ್​ನಲ್ಲಿ ಸತತ 7 ತಿಂಗಳುಗಳ ಕಾಲ ಭಾರತದಾದ್ಯಂತ ಪ್ರಯಾಣಿಸಿದ ಸೋಲೋ ಬೈಕ್​ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ತಮ್ಮನ್ನು ಅಲೆಮಾರಿ ಹಿಜಾಬ್​ ರೈಡರ್​ ಎಂದು ಪರಿಚಯಿಸಿಕೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪುಣೆ, ದಮನ್-ದಿಯೂ, ಗುಜರಾತ್, ಬಿಹಾರ್, ದೆಹಲಿ, ಉತ್ತರ ಪ್ರದೇಶ ಮತ್ತು ನೇಪಾಳದಾದ್ಯಂತ ಬೈಕ್​ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಪ್ರಯಾಣದ ಸಮಯದಲ್ಲಿ ಟೆಂಟ್​, ಗುರುದ್ವಾರ, ಕೆಲವೊಮ್ಮೆ ಪೆಟ್ರೋಲ್​ ಬಂಕ್ ಹೀಗೆ ಮುಂತಾದ ಸ್ಥಳಗಳಲ್ಲಿ ತಂಗುತ್ತೇನೆ. ಭೇಟಿಯಾಗುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯತೆಯ ಬಗ್ಗೆ ಅರಿವು ಮೂಡಿಸುತ್ತೇನೆ. ಅವರಿಗೆಲ್ಲ ನಿಮ್ಮ ಬದುಕಿನಲ್ಲಿ ಒಮ್ಮೆಯಾದರೂ ಪ್ರಯಾಣಿಸಿ. ನಿಮ್ಮ ವ್ಯಕ್ತಿತ್ವವೇ ಬದಲಾಗುತ್ತದೆ ಎಂದು ಸಲಹೆ ನೀಡುತ್ತೇನೆ. ‘ಎನ್ನುತ್ತಾರೆ ರೇಷ್ಮಾ.

ಬೈಕ್​ ಪ್ರಯಾಣ ಮಾಡುವ ಮಹಿಳೆಯರಿಗೆ, ‘ಆರ್ಥಿಕವಾಗಿ ಸ್ವಾವಲಂಬಿಯಾದಲ್ಲಿ ಬದುಕಿನ  ಬಗ್ಗೆ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಇನ್ನು ಪ್ರಯಾಣದ ವಿಷಯವಾಗಿ, ನಿಮ್ಮ ಅಂತಃಪ್ರಜ್ಞೆ ಏನು ಹೇಳುತ್ತದೆಯೋ ಅದನ್ನು ಕೇಳಿ. ಈ ಜಾಗ ಸುರಕ್ಷಿತವಲ್ಲ ಎನ್ನಿಸಿದರೆ ಅಲ್ಲಿರುವ ಮನುಷ್ಯರೊಂದಿಗೆ ಕೂಡ ಮಾತನಾಡಬೇಡಿ ಮತ್ತು ಆ ದಾರಿಯಲ್ಲಿ ಸಾಗಬೇಡಿ. ನಾನಂತೂ ಅವಶ್ಯಕತೆಯ ಹೊರತಾಗಿ ಮಧ್ಯರಾತ್ರಿ ಮತ್ತು ಸಂಜೆಯ 5ರ ನಂತರ ಪ್ರಯಾಣಿಸುವುದಿಲ್ಲ.’ ಎನ್ನುತ್ತಾರೆ ರೇಷ್ಮಾ.

ನೇಪಾಳದ ದಾರಿಯಲ್ಲಿ ರೇಷ್ಮಾ… ವಿಡಿಯೋ ಈ ಕೆಳಗಿದೆ

ಈ ವಿಡಿಯೋಗಳನ್ನು ನೋಡಿದ ನೆಟ್ಟಿಗರು, ಭಾರತವು ಮಹಿಳೆಯರಿಗೆ ಸುರಕ್ಷಿತ ಎಂದು ಈಕೆ ಹೇಗೆ ಹೇಳುತ್ತಾರೆ?  ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳದಂಥ ಪ್ರಕರಣಗಳ ಅಂಕಿಸಂಖ್ಯೆ ಮತ್ತು ಮಾಹಿತಿಯನ್ನು ನೀಡಿ ಅನೇಕ ಪ್ರಶ್ನೆಗಳನ್ನು ಕೇಳೀದ್ದಾರೆ. ಉಳಿದಂತೆ ಕೆಲವರು, ಮುಸ್ಲಿಂ ಧರ್ಮದಲ್ಲಿದ್ದುಕೊಂಡು ಇಷ್ಟು ಧೈರ್ಯದಿಂದ ಮುನ್ನುಗ್ಗುತ್ತಿರುವುದು ನಿಜಕ್ಕೂ ಹೆಮ್ಮೆ. ಎಲ್ಲಾ ಹೆಣ್ಣುಮಕ್ಕಳಿಗೂ ನೀವು ಮಾದರಿ ಎಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:36 pm, Sat, 12 August 23