Ganesha Chaturthi 2021: 5,000 ಬೆಂಕಿ ಕಡ್ಡಿಗಳಿಂದ ಗಣೇಶನ ಮೂರ್ತಿ ತಯಾರಿಸಿದ ಒಡಿಶಾ ಕಲಾವಿದ

| Updated By: shruti hegde

Updated on: Sep 10, 2021 | 9:32 AM

ಕೊವಿಡ್19 ಸಾಂಕ್ರಾಮಿಕ ಹರಡುವಿಕೆಯಿಂದ ಗಣೇಶ ಹಬ್ಬ ಅಷ್ಟು ವಿಜೃಂಭಣೆಯಿಂದ ನಡೆಯುತ್ತಿಲ್ಲ. ಈ ನಡುವೆ ಮನೆಯಲ್ಲಿದ್ದ ನಾನು ಹೊಸದಾಗಿ ಯೋಚಿಸಿದೆ. ಸಾಂಕ್ರಾಮಿಕದ ನಡುವೆ ನನ್ನ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ಮೂರ್ತಿಯನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.

Ganesha Chaturthi 2021: 5,000 ಬೆಂಕಿ ಕಡ್ಡಿಗಳಿಂದ ಗಣೇಶನ ಮೂರ್ತಿ ತಯಾರಿಸಿದ ಒಡಿಶಾ ಕಲಾವಿದ
5,000 ಬೆಂಕಿ ಕಡ್ಡಿಗಳಿಂದ ಗಣಪನ ಮೂರ್ತಿ ತಯಾರಿಸಿದ ಒಡಿಶಾ ಕಲಾವಿದ
Follow us on

ಇಂದು ಎಲ್ಲಡೆ ಗಣೇಶ ಚತುರ್ಥಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಗಣೇಶ ಚತುರ್ಥಿ ವಿಶೇಷ ದಿನಕ್ಕಾಗಿ ಒಡಿಶಾ ಪುರಿಯ ಕಲಾವಿದ ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ವಿಗ್ರಹವನ್ನು ತಯಾರಿಸಿದ್ದಾರೆ. ಸುಮಾರು 5,621 ಬೆಂಕಿ ಕಡ್ಡಿಗಳನ್ನು ಉಪಯೋಗಿಸಿ ಗಣೇಶನ ಮೂರ್ತಿಯನ್ನು ತಯಾರಿಸಲಾಗಿದೆ.ಈ ಕುರಿತಂತೆ ಎಎನ್ಐ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಸಾಸ್ವತ್ ಸಾಹೂ ಎಂಬ ಕಲಾವಿದ ಕಲಾಕೃತಿಯನ್ನು ತಯಾರಿಸಿದ್ದಾರೆ. ಕಲಾಕೃತಿಯು ಸುಮಾರು 23 ಇಂಚು ಉದ್ದ ಹಾಗೂ 22 ಇಂಚು ಅಗಲವಾಗಿದೆ. ಕಳೆದ ಎಂಟು ದಿನಗಳಿಮದ ಕಲಾಕೃತಿ ತಯಾರಿಸಲು ಪ್ರಾರಂಭಿಸಿದ್ದೇನೆ ಎಂದು ಸಾಸ್ವತ್​ ಸಾಹೂ ಹೇಳಿದ್ದಾರೆ. ಕೊವಿಡ್19 ಸಾಂಕ್ರಾಮಿಕ ಹರಡುವಿಕೆಯಿಂದ ಗಣೇಶ ಹಬ್ಬ ಅಷ್ಟು ವಿಜೃಂಭಣೆಯಿಂದ ನಡೆಯುತ್ತಿಲ್ಲ. ಈ ನಡುವೆ ಮನೆಯಲ್ಲಿದ್ದ ನಾನು ಹೊಸದಾಗಿ ಯೋಚಿಸಿದೆ. ಸಾಂಕ್ರಾಮಿಕದ ನಡುವೆ ನನ್ನ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ಮೂರ್ತಿಯನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.

ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಜನರು ಗಣೇಶನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ಈ ದಿನದಂದು ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಭಕ್ತರು ಹಬ್ಬವನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ:

ಗಣೇಶ ಚತುರ್ಥಿ ವಿಶೇಷ: ಚಿತ್ರಕಲಾ ಪರಿಷತ್​ನಲ್ಲಿ ಲೋಹದ ಗಣೇಶ ವಿಗ್ರಹಗಳ ಪ್ರದರ್ಶನ, ಮಾರಾಟ

ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ

(Odisha artist Creates Ganesha idol for using 5000 matchsticks)