
ಪುಟಾಣಿ ಮಕ್ಕಳ (little kids) ಮುದ್ದು ಮುದ್ದಾದ ಮುಗ್ಧ ಮಾತು ನೋಡುವುದೇ ಖುಷಿ ಕೊಡುತ್ತದೆ. ಈ ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾವಾಡುವ ಪುಟಾಣಿ ಕಂದಮ್ಮ (kids) ಮನೆಯಲ್ಲಿದ್ದರೆ ಅದಕ್ಕಿಂತ ಇನ್ನೇನು ಬೇಕು. ಅದರಲ್ಲಿಯೂ ಈಗಿನ ಕಾಲದ ಮಕ್ಕಳು ಯಾವುದರಲ್ಲಿ ಕಮ್ಮಿ ಹೇಳಿ, ಎಲ್ಲವನ್ನು ಸಲೀಸಾಗಿ ಕಲಿತು ಬಿಡುವ ಮಕ್ಕಳ ಬುದ್ಧಿವಂತಿಕೆ (Intelligent) ಗೆ ಒಂದು ಕ್ಷಣ ತಲೆಬಾಗಲೇಬೇಕು. ಇದಕ್ಕೆ ಈ ವಿಡಿಯೋ ಸಾಕ್ಷಿ ಎನ್ನುವಂತಿದ್ದು, ಇದರಲ್ಲಿ ಒಂದರಿಂದ ಒಂದೂವರೆ ವರ್ಷದೊಳಗಿನ ಮಗುವೊಂದು ಇಂಗ್ಲಿಷ್ ವರ್ಣಮಾಲೆ (English alphabet) ಯ ಅಕ್ಷರ (letters) ಗಳನ್ನು ಗುರುತಿಸಿ ತಪ್ಪಿಲ್ಲದೇ ಉಚ್ಚರಿಸುತ್ತಿದೆ. ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದು ಕೊಂಡಿದ್ದು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
Bestchinesevideo ಹೆಸರಿನ ಖಾತೆಯಲ್ಲಿ ಪುಟಾಣಿ ಕಂದಮ್ಮನ ವಿಡಿಯೋ ಹಂಚಿಕೊಳ್ಳಲಾಗಿದೆ. ಒಂದೂವರೆ ವರ್ಷದೊಳಗಿನ ಪುಟಾಣಿ ಮಗುವೊಂದು ಕುಳಿತಿದ್ದು ಅದರ ಮುಂದೆ ಪುಸ್ತಕವನ್ನು ಇಡಲಾಗಿದೆ. ಮಗುವಿನ ಮುಂದಿರುವ ಪುಸ್ತಕದಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಒಂದೊಂದಾಗಿ ಬರೆಯಲಾಗುತ್ತಿದೆ. ಮಗು ಅದನ್ನು ಸೂಕ್ಷ್ಮವಾಗಿ ಗಮನಿಸಿ ತಪ್ಪಿಲ್ಲದೇ ಉಚ್ಚರಿಸುತ್ತಿದೆ. ಈ ವಿಡಿಯೋದಲ್ಲಿ ಎ, ಸಿ, ಒ, ಎಂ, ಪಿ, ಬಿ, ಡಿ, ಇ, ಎಫ್ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು ಎಲ್ಲವನ್ನು ತಪ್ಪಿಲ್ಲದೇ ಸ್ಪಷ್ಟವಾಗಿ ಉಚ್ಚರಿಸುತ್ತಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ: ಅಡುಗೆಮನೆ ಗೋಡೆ ಏರಿ ಮನೆಯೊಳಗೆ ಬರಲು ಪ್ರಯತ್ನಿಸುತ್ತಿರುವ ಸಿಂಹ, ಎದೆ ಝಲ್ಲೆನಿಸುತ್ತೆ ಈ ದೃಶ್ಯ
ಈ ಪುಟಾಣಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ನಿಜವಾಗಿಯೂ ಬುದ್ಧಿವಂತ ಮಗು’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ನಮ್ಮ ಮನೆಯ ಪಕ್ಕದ ಮನೆಯಲ್ಲಿ ಒಂದು ಮಗುವಿದೆ. ಅದಕ್ಕೆ ಮೂರು ವರ್ಷವಾಗಿದ್ದರೂ ಒಂದು ಪದವನ್ನು ಉಚ್ಚರಿಸುವುದಿಲ್ಲ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ‘ಈ ಮಗು ತಾಯಿಯ ಗರ್ಭದಲ್ಲಿರುವಾಗಲೇ ಎಬಿಸಿಡಿ ಕಲಿತಂತೆ ಕಾಣುತ್ತಿದೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Fri, 4 April 25