
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಒಂದು ರೀತಿಯ ಸವಾಲಿನ ಆಟಗಳು. ಹೀಗಾಗಿ ಈ ಸವಾಲಿನ ಆಟಗಳನ್ನು ಆಡಿ ಮುಗಿಸುವಷ್ಟರಲ್ಲಿ ಸುಸ್ತೋ ಸುಸ್ತು ಆಗಿರುತ್ತದೆ. ಹೌದು, ಇಂತಹ ಮೋಜಿನ ಆಟಗಳು ಸ್ವಲ್ಪ ಟ್ರಿಕ್ಕಿ ಅನಿಸಿದರೂ ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಇದು ಬುದ್ಧಿವಂತಿಕೆಗೆ ಸವಾಲೆಸುವ ಕಾರಣ ಹೆಚ್ಚಿನವರು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಇದೀಗ ಮೆದುಳಿಗೆ ಕೆಲಸ ನೀಡುವ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಕಲರ್ ಫುಲ್ ಗಿಳಿಗಳ ನಡುವೆ ಬಣ್ಣದ ಚಿಟ್ಟೆಯೊಂದಿದೆ. ಈ ಚಿಟ್ಟೆಯನ್ನು (butterfly) ನಿರ್ದಿಷ್ಟ ಸಮಯದೊಳಗೆ ಗುರುತಿಸಲು ಸಾಧ್ಯವೇ?.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಚಿತ್ರಗಳಲ್ಲಿ ಇದು ಒಂದು ಸೇರಿದ್ದು, ಇಲ್ಲಿ ಮರದ ಕೊಂಬೆಯ ಮೇಲೆ ಬಣ್ಣ ಬಣ್ಣದ ಗಿಳಿಗಳು ಕುಳಿತಿವೆ. ಈ ಪಕ್ಷಿಗಳು ನಡುವೆ ಚಿಟ್ಟೆಯೊಂದು ಅಡಗಿ ಕುಳಿತಿದ್ದು, 15 ಸೆಕೆಂಡುಗಳಲ್ಲಿ ಚಿಟ್ಟೆಯನ್ನು ಪತ್ತೆ ಹಚ್ಚಿ ಜಾಣರು ಎನಿಸಿಕೊಳ್ಳಿ. ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ
ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಇದು ಒಗಟು ಅನುಭವಿ ಆಟಗಾರರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ನಿಮ್ಮ ಕಣ್ಣಿಗೆ ಬಣ್ಣದ ಚಿಟ್ಟೆ ಕಾಣಿಸಲು ಸಾಧ್ಯ. ನೀವು ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಕಣ್ಣು ಅಗಲಿಸಿ ನೋಡಿ. ಎಷ್ಟೇ ಪ್ರಯತ್ನ ಪಟ್ಟರೂ ಚಿಟ್ಟೆಯನ್ನು ಹುಡುಕಲು ಸಾಧ್ಯವಾಗಿಲ್ಲವೇ?, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ