
ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಈ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ರೀತಿಯ ಒಗಟನ್ನು ಬಿಡಿಸುವುದು ಮಜಾ ನೀಡುತ್ತದೆಯಾದರೂ ಕೆಲವೊಮ್ಮೆ ಕಷ್ಟದಾಯಕವಾಗಿರುತ್ತದೆ. ಎಷ್ಟೋ ಸಲ ಈ ಚಿತ್ರಗಳು ನಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇನ್ನು ಕೆಲವರು ಎಷ್ಟೇ ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಇದೀಗ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಬೆಕ್ಕುಗಳನ್ನು ಶೀಘ್ರದಲ್ಲೇ ಗುರುತಿಸಬೇಕು. ಈ ಒಗಟನ್ನು ಬಿಡಿಸಲು ನೀವು ಸಿದ್ಧರಾಗಿದ್ದೀರಾ ಎಂದಾದರೆ ನಿಮ್ಮ ಸಮಯ ಈಗಿನಿಂದಲೇ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
@rastroboy ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರದಲ್ಲಿ ಪ್ರಕಾಶಮಾನವಾದ ಹಳದಿ ಬಣ್ಣದ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ಹಳೆಯ ಮೆಟ್ಟಿಲುಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಬಹುದು. ಈ ಚಿತ್ರವನ್ನು ಕಂಡಾಗ ಶಾಂತ ಹಾಗೂ ಸಾಮಾನ್ಯದಂತೆ ಕಂಡರೂ ಈ ಚಿತ್ರದಲ್ಲಿ ಬೆಕ್ಕುಗಳು ಅಲ್ಲಲ್ಲಿ ಕುಳಿತುಕೊಂಡಿವೆ. ಈ ಚಿತ್ರದಲ್ಲಿರುವ ಬೆಕ್ಕುಗಳನ್ನು ಎಣಿಸುವುದೇ ಈಗಿರುವ ಸವಾಲಾಗಿದೆ. ಆದರೆ ಈ ಚಿತ್ರವನ್ನು ಝೋಮ್ ಮಾಡದೇ ಬೆಕ್ಕುಗಳೆಷ್ಟು ಎಂದು ಹೇಳಿದರೆ ನೀವು ಜಾಣರು ಎಂದರ್ಥ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೀವು ನೋಡಿದಾಗ ನಿಮ್ಮನ್ನು ಖಂಡಿತ ಭ್ರಮೆಯಲ್ಲಿ ಸಿಲುಕಿಸುತ್ತದೆ. ಇದು ಬೆಕ್ಕುಗಳನ್ನು ಹುಡುಕುವ ಆಟವಲ್ಲ, ಇದು ನಿಮ್ಮ ಗಮನ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುವ ಚಿತ್ರವಾಗಿದೆ. ಈ ಚಿತ್ರವನ್ನು ನೋಡಿದಾಗ ನೆರಳು, ಬಟ್ಟೆಯ ಮಾದರಿ ಹಾಗೂ ಗೋಡೆಯ ವಿನ್ಯಾಸ ಕೂಡ ನೀವು ಬೆಕ್ಕೆಂದು ತಪ್ಪಾಗಿ ಗ್ರಹಿಸುವಂತೆ ಮಾಡುತ್ತದೆ. ಹೀಗಾಗಿ ಈ ಫೋಟೋ ನಿಮ್ಮ ಕಣ್ಣುಗಳನ್ನು ಎಷ್ಟು ಮೋಸಗೊಳಿಸುತ್ತದೆ ಎಂದು ತೋರಿಸುತ್ತಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೀವು ಉತ್ತರವನ್ನು ಕಂಡುಕೊಳ್ಳಿ.
ಇದನ್ನೂ ಓದಿ: Optical Illusion: ನಿಮ್ಮ ಕಣ್ಣಿಗೊಂದು ಸವಾಲ್, ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಬಲ್ಲಿರಾ?
ಈ ಚಿತ್ರವನ್ನು ನೋಡಿದ ಬಳಕೆದಾರರೊಬ್ಬರು, ನಾನು 21 ಬೆಕ್ಕುಗಳನ್ನು ನೋಡಿದೆ ಎಂದಿದ್ದಾರೆ. ಇನ್ನೊಬ್ಬರು, ನಾನು 30 ಬೆಕ್ಕುಗಳನ್ನು ನೋಡಿದೆ, ಅದರಲ್ಲಿ ಒಂದು ನೆರಳು ಇರಬಹುದು. ಹೀಗಾಗಿ 29 ಪರಿಗಣಿಸಿ ಎಂದಿದ್ದಾರೆ. ಮತ್ತೊಬ್ಬರು ಹಳದಿ ಜಾಕೆಟ್ ಧರಿಸಿರುವ ವ್ಯಕ್ತಿ ಕೂಡ ಕೂಲ್ ಕ್ಯಾಟ್ ಎಂದು ತಮಾಷೆಯಾಗಿಯೇ ಬರೆದುಕೊಂಡಿದ್ದಾರೆ. ಬಳಕೆದಾರರು ಈ ಮೇಲಿನ ಉತ್ತರವನ್ನು ಹೇಳಿದ್ದಾರೆ, ನೀವು ಬುದ್ಧಿವಂತರಾಗಿದ್ದರೆ ಸರಿಯಾದ ಉತ್ತರವನ್ನು ಹೇಳಿ ನೋಡೋಣ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ