20 ಸೆಕೆಂಡಿನಲ್ಲಿ ಈ ಕಟ್ಟಡದಲ್ಲಿ ಅಡಗಿಕೊಂಡಿರುವ 2 ಪಕ್ಷಿಗಳನ್ನು ಕಂಡುಹಿಡಿಯುವಿರಾ?

| Updated By: ಶ್ರೀದೇವಿ ಕಳಸದ

Updated on: Sep 30, 2022 | 3:03 PM

Optical Illusion : ಅಮೆರಿಕದ ಈ ಕೆಂಪು ಕಟ್ಟಡದಲ್ಲಿ ಎರಡು ಪಕ್ಷಿಗಳು ಅಡಗಿವೆ. ಬಹುಶಃ ನಿಮಗೆ ಹೆಚ್ಚು ಸಮಯ ಬೇಕಾಗಬಹುದೇನೋ ಆ ಪಕ್ಷಿಗಳನ್ನು ಗುರುತಿಸಲು.

20 ಸೆಕೆಂಡಿನಲ್ಲಿ ಈ ಕಟ್ಟಡದಲ್ಲಿ ಅಡಗಿಕೊಂಡಿರುವ 2 ಪಕ್ಷಿಗಳನ್ನು ಕಂಡುಹಿಡಿಯುವಿರಾ?
ಎಲ್ಲಿ ಅಡಗಿವೆ ಆ ಪಕ್ಷಿಗಳು?
Follow us on

Viral Optical Illusion : ಇಂಥ ಬ್ರೇನ್​ ಟೀಸರ್​ಗಳನ್ನು ತಲೆ ಕೆಡಿಸಿಕೊಂಡಾದರೂ ಸರಿ, ಉತ್ತರ ಹುಡುಕಿಯೇ ಸೈ ಎಂಬಂತೆ ಅತ್ಯಾಸಕ್ತಿಯಿಂದ ಭಾಗವಹಿಸುತ್ತಿದ್ಧಾರೆ ನೆಟ್ಟಿಗರು. ಪ್ರಶ್ನೆ ಯಾವತ್ತೂ ಜಟಿಲವೇ. ಸಾವಧಾನವಾಗಿ ಯೋಚಿಸಿ, ಚಿತ್ತೈಸಿದರೆ ಅಂತಿಮಹಂತದಲ್ಲಿ ಸಿಗುವ ಸಿಹಿಫಲ ಕೊಡುವ ಖುಷಿ ಮಾತ್ರ ಅಗಾಧ. ಆ ಸಣ್ಣ ಖುಷಿಗಾಗಿ ಕಷ್ಟಪಡಲೇಬೇಕಲ್ಲವೆ? ಈಗ ಇಲ್ಲೊಂದು ಬ್ರೇನ್​ ಟೀಸರ್ ಇದೆ. ಅಮೆರಿಕದ ನ್ಯೂಯಾರ್ಕ್​ನಲ್ಲಿರುವ ಈ ದೊಡ್ಡ ಕಟ್ಟಡದಲ್ಲಿ ಎರಡು ಪಕ್ಷಿಗಳು ಅಡಗಿ ಕುಳಿತಿವೆ. ಅವುಗಳನ್ನು ಗುರುತಿಸಲು ನೆಟ್ಟಿಗರು ಬಹಳ ಶ್ರಮವಹಿಸುತ್ತಿದ್ದಾರೆ. ನಿಮಗೇನಾದರೂ ಪಕ್ಷಿಗಳನ್ನು 20 ಸೆಕೆಂಡುಗಳಲ್ಲಿ ಗುರುತಿಸಲು ಸಾಧ್ಯವೇ? ಪ್ರಯತ್ನಿಸಿ.

ಕ್ಲಿಷ್ಟಕರವಾದ ಈ ಬ್ರೇನ್​ ಟೀಸರ್​ ಅನ್ನು ಶೇ.1 ರಷ್ಟು ಜನ ಮಾತ್ರ ಗುರುತಿಸಬಹುದು ಎಂದು ಅಂದಾಜಿಸಲಾಗಿದೆ. ಈ ಚಿತ್ರದಲ್ಲಿ ಮರ, ಟ್ರಾಫಿಕ್ ಸಿಗ್ನಲ್​, ಕೆಂಪು ಇಟ್ಟಿಗೆಯ ಕಟ್ಟಡ ಇದೆ. ಹಾಗಿದ್ದರೆ ಆ ಎರಡು ಪುಟ್ಟ ಹಕ್ಕಿಗಳು ಎಲ್ಲಿ ಅಡಗಿ ಕುಳಿತಿರಲು ಸಾಧ್ಯ? ಮತ್ತೆ ಕಾಲಾವಕಾಶ ತೆಗೆದುಕೊಂಡು ಹುಡುಕಲು ಪ್ರಯತ್ನಿಸಿ.

ಎಷ್ಟೇ ಕಣ್ಣಿಟ್ಟು ನೋಡಿದರೂ ಹಕ್ಕಗಳು ಮಾತ್ರ ಸಿಗುತ್ತಿಲ್ಲ ಅಲ್ಲವೆ? ಸ್ವಲ್ಪ ಹತ್ತಿರ ಬಂದು ನೋಡಿ. ಆದರೂ ಸಿಗುತ್ತಿಲ್ಲವಲ್ಲ ಪಕ್ಷಿಗಳು?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸರಿ ಹಾಗಿದ್ದರೆ ಒಂದು ಸಣ್ಣ ಸುಳಿವು : ಕಟ್ಟಡದ ಮೇಲೆ ಕಟ್ಟಡದ ಹೆಸರನ್ನು ಬರೆದ ಕಟ್ಟೆಯ ಬಲಮಧ್ಯ ಭಾಗ ಗಮನಿಸಿ. ಕಂಡವಾ?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:02 pm, Fri, 30 September 22