
ಒಗಟು ಎಂದರೆ ಕೆಲವರ ಕಣ್ಣು ಹಾಗೂ ಕಿವಿ ಅರಳುತ್ತದೆ. ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳನ್ನು ಬಿಡಿಸುತ್ತ ಟೈಮ್ ಪಾಸ್ ಮಾಡುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದ್ದರೆ ಈ ಇಲ್ಯೂಷನ್ ಚಿತ್ರ ಬಿಡಿಸಿ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಕೋಳಿ ಮರಿಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಈ ಹಿಂದೆ ನೀವು ಇಂತಹ ಒಗಟು ಬಿಡಿಸುವಲ್ಲಿ ವಿಫಲರಾಗಿರಬಹುದು. ಇದೀಗ ನಿಮಗೆ ಮತ್ತೊಂದು ಅವಕಾಶವಿದೆ. ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಕೋಳಿ ಮರಿಯನ್ನು 35 ಸೆಕೆಂಡುಗಳೊಳಗೆ ಕಂಡು ಹಿಡಿಯಬೇಕು.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಫಾರ್ಮ್ ಹೌಸ್. ಈ ಫಾರ್ಮ್‌ಹೌಸ್‌ನಲ್ಲಿ ಅನೇಕ ಪ್ರಾಣಿ ಪಕ್ಷಿಗಳಿವೆ. ಆದರೆ ಫೋಟೋದಲ್ಲಿರುವ ಕೋಳಿಯೂ ಕಾಣೆಯಾದ ತನ್ನ ನಾಲ್ಕನೇ ಮರಿಯನ್ನು ಹುಡುಕುತ್ತಿದೆ. ನೀವು ಕೋಳಿಮರಿ ಎಲ್ಲಿದೆ ಎಂದು ಹೇಳಬೇಕು. 35 ಸೆಕೆಂಡುಗಳೊಳಗೆ ಈ ಕೋಳಿಮರಿಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಅತೀ ಬುದ್ಧಿವಂತರು ಎಂದರ್ಥ.
ಇದನ್ನೂ ಓದಿ: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿಂಕೆಯನ್ನು ಕಂಡು ಹಿಡಿಯಿರಿ
ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಗಮನವನ್ನು ಸ್ವಲ್ಪವೂ ಬೇರೆಡೆ ಹರಿಸಿದರೂ ಒಗಟು ಬಿಡಿಸುವುದು ಕಷ್ಟವಾಗಬಹುದು. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಕೋಳಿ ಮರಿ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕೋಳಿ ಮರಿ ಎಲ್ಲಿದೆ ಎಂದು ಗುರುತಿಸಿದ್ದೇವೆ ನೋಡಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ