Viral: ಬೆಂಗಳೂರಿಗೆ ಬಂದ ಬಳಿಕ ಸ್ನೇಹಿತರನ್ನು ಮಾಡಿಕೊಳ್ಳಲು ಈ ಟ್ರಿಕ್ಸ್ ಬಳಸಿದೆ ಎಂದ ಯುವತಿ
ಓದಿಗೋ, ಕೆಲಸದ ಕಾರಣಕ್ಕೋ ಬೆಂಗಳೂರು, ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ಹೋಗಬೇಕಾಗುತ್ತದೆ. ಹೀಗೆ ಊರು ಬಿಟ್ಟು ಬಂದ ಅದೆಷ್ಟೋ ಜನರಿಗೆ ಯಾರು ಪರಿಚಯ ಇರಲ್ಲ. ಹೀಗಾಗಿ ಮನೆ ಪದೇ ಪದೇ ನೆನಪಾಗುತ್ತದೆ. ಆದರೆ ಬೆಂಗಳೂರಿನಲ್ಲಿರುವ ಯುವತಿ ತನ್ನ ಆರಂಭದ ದಿನಗಳು ಹೇಗಿತ್ತು ಎಂದು ವಿವರಿಸಿದ್ದಾರೆ. 2020 ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ತನಗೆ ಯಾರ ಪರಿಚಯವೂ ಇರಲಿಲ್ಲ, ಆದರೆ ಈಗ ಈ ನಗರವು ನನಗೆ ಮನೆಯಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದೆ.

ಬೆಂಗಳೂರು, ಜನವರಿ 17: ಓದು ಮುಗಿಸಿ ಉದ್ಯೋಗಕ್ಕೆಂದು ದೂರದ ಊರಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಹೊಸ ಊರ ಜನರು ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಅಪರಿಚಿತರ ಜತೆಗೆ ಸ್ನೇಹ (friendship) ಬೆಳೆಸಿಕೊಳ್ಳಲು ಹಿಂದೇಟು ಹಾಕುವುದಿದೆ. ಪ್ರಾರಂಭದ ದಿನಗಳಲ್ಲಿ ಒಂಟಿ ಭಾವ ಕಾಡುತ್ತದೆ. ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಸಂಸ್ಥಾಪಕಿಯೊಬ್ಬರಿಗೆ ಅದೇ ರೀತಿಯ ಅನುಭವವಾಗಿತ್ತಂತೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ತಮ್ಮ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸುರಭಿ ಜೈನ್ (Surbhi Jain) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬೆಂಗಳೂರಿಗೆ ಬಂದ ಪ್ರಾರಂಭದ ದಿನಗಳು ಹೇಗಿದ್ದವು, ಹೇಗೆ ಸ್ನೇಹಿತರನ್ನು ಮಾಡಿಕೊಂಡೆ ಎನ್ನುವುದನ್ನು ವಿವರಿಸಿರುವುದನ್ನು ಕಾಣಬಹುದು. ಈ ಪೋಸ್ಟ್ ನಲ್ಲಿ ನೀವು ಯಾವುದೇ ನಗರಕ್ಕೆ ಹೊಸಬರಾಗಿದ್ದರೆ, ಇದು ನಿಮಗಾಗಿ. 2020 ರಲ್ಲಿ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ನನಗೆ ಯಾರ ಪರಿಚಯವೂ ಇರಲಿಲ್ಲ. ಕೆಲವೇ ಕೆಲವು ಪರಿಚಿತ ಮುಖಗಳಷ್ಟೇ ಇದ್ದವು, ಆದರೆ ಅವರಲ್ಲಿ ಹೆಚ್ಚಿನವರು ನಾನು ಇರುವ ಸ್ಥಳಕ್ಕಿಂತ ದೂರದಲ್ಲಿಯೇ ವಾಸಿಸುತ್ತಿದ್ದರು. ಹೊಸದನ್ನು ಪ್ರಾರಂಭಿಸುವ ದೊಡ್ಡ ಕನಸುಗಳೊಂದಿಗೆ ನಾನು ನಗರಕ್ಕೆ ಬಂದಿದ್ದೆ. ನಾನು ಒಂದು ಕಂಪನಿಯನ್ನು ಸೇರಿಕೊಂಡೆ. ನನ್ನ ಸಹೋದ್ಯೋಗಿಗಳು ಒಳ್ಳೆಯವರಾಗಿದ್ದರು, ಆದರೆ ಅವರು ಸಹೋದ್ಯೋಗಿಗಳಷ್ಟೇ ಆಗಿದ್ದರು, ನಿಮಗೆ ತಿಳಿದಿದೆಯೇ?. ಕಚೇರಿಯಲ್ಲಿ ಸಣ್ಣ ಸಣ್ಣ ಮಾತುಗಳು ಅಂತರವನ್ನು ಕಡಿಮೆ ಮಾಡಿತು. ಜ್ಯೂಸ್ ಕುಡಿಯಲು ಅಥವಾ ಕಾಫಿಗಾಗಿ ಭೇಟಿಯಾಗುವುದಕ್ಕಿಂತ ಜನರೊಂದಿಗೆ ಈ ರೀತಿ ಸಂಪರ್ಕ ಸಾಧಿಸುವುದು ತುಂಬಾ ಉತ್ತಮವಾಯಿತು ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
If you are new to any city, this is for you👇
When I moved to Bangalore in 2020, I barely knew anyone. There were a few familiar faces, but most of them lived far away.
I had come to the city with big dreams of starting something new, and I joined a company to begin with. My…
— Surbhi Jain (@surbhiskjain) January 14, 2026
ಇದು ವಿಭಿನ್ನವೆನಿಸಿತು, ನಾನು ಪ್ರತಿದಿನ ಎದುರು ನೋಡುತ್ತಿದ್ದ ವಿಷಯವಾಯಿತು. ಇದರಿಂದ ಹಗುರವಾದ ಮನಸ್ಸಿನೊಂದಿಗೆ ಹಿಂತಿರುಗಬಹುದು. ಕಾಫಿ ಅಥವಾ ಜ್ಯೂಸ್ ಕುಡಿಯಲು ಹೋದಾಗ ನೀವು ಮತ್ತೆ ಮತ್ತೆ ಅದೇ ಮುಖಗಳನ್ನು ನೋಡಲು ಪ್ರಾರಂಭಿಸುತ್ತೀರಿ. ಆಗ ಸ್ನೇಹವು ಪ್ರಾರಂಭವಾಗುತ್ತದೆ. ಅಪರಿಚಿತ ಭಾವವು ನಿಧಾನವಾಗಿ ಸ್ನೇಹಕ್ಕೆ ತಿರುಗುತ್ತದೆ ದೊಡ್ಡ ನಗರವು ಮನೆಯಂತೆ ಭಾಸವಾಗಲು ಪ್ರಾರಂಭಿಸುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್
ಜನವರಿ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಇಪ್ಪತ್ತ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ನಿಜ, ಸರ್ಜಾಪುರ ಪ್ರದೇಶದಲ್ಲಿ ಸಕ್ರಿಯವಾಗಿರುವ ಬಹುತೇಕ ಎಲ್ಲಾ ಕ್ರಿಕೆಟ್ ಆಟಗಾರರನ್ನು ನಾನು ಬಲ್ಲೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಗಂಭೀರವಾದ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಂಗಾತಿಯನ್ನು ಹುಡುಕುತ್ತಿದ್ದರೆ, ಶನಿವಾರ ಬೆಳಿಗ್ಗೆ ಓಟ, ನಡಿಗೆ ಅಥವಾ ವ್ಯಾಯಾಮಕ್ಕೆ ಹೋಗಿ. ನಿಮಗೆ ನಿಮ್ಮದೇ ಆದ ವ್ಯಕ್ತಿ ಸಿಗಬಹುದು ಎಂದಿದ್ದಾರೆ. ಮತ್ತೊಬ್ಬರು ಒಳ್ಳೆಯ ಸಲಹೆ, ನಾನು ಕೂಡ ಈ ರೀತಿ ಸ್ನೇಹಿತರನ್ನು ಮಾಡಿಕೊಳ್ಳುವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Sat, 17 January 26
