Optical Illusion: ಜೀಬ್ರಾಗಳ ನಡುವೆ ಅಡಗಿರುವ ಸಿಂಹವನ್ನು ನೀವು ಗುರುತಿಸಬಲ್ಲಿರಾ
ಮೋಜಿನ ಆಟಗಳು ಎಲ್ಲರಿಗೂ ಇಷ್ಟನೇ. ಆದರೆ ಈ ಒಗಟುಗಳನ್ನು ಬಿಡಿಸುವುದು ಎಲ್ಲರಿಗೂ ಸುಲಭವಲ್ಲ. ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಹತ್ತರಲ್ಲಿ ಒಂಬತ್ತು ಜನರು ಮಾತ್ರ ಇದಕ್ಕೆ ಉತ್ತರ ಹೇಳಲು ಸಾಧ್ಯ. ಈ ಚಿತ್ರದಲ್ಲಿ ಅಡಗಿರುವ ಸಿಂಹವನ್ನು ನಿಮ್ಮಿಂದ ಹುಡುಕಲು ಸಾಧ್ಯವೇ. ಈ ಒಗಟಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನ ಹರಿಸಿದ್ರೆ ಉತ್ತರ ಕಂಡು ಕೊಳ್ಳುವುದು ಸುಲಭ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಈ ಒಗಟಿನ ಚಿತ್ರಗಳು ನೋಡಲು ಸುಲಭದಾಯಕವಾಗಿ ಕಂಡರೂ ಅಷ್ಟೇ ಕಷ್ಟಕರವಾಗಿರುತ್ತದೆ. ಇದೀಗ ನಿಮ್ಮ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುವ ಸಮಯ. ಜೀಬ್ರಾಗಳ ನಡುವೆ ಅಡಗಿ ಕುಳಿತಿರುವ ಸಿಂಹವನ್ನು 8 ಸೆಕೆಂಡುಗಳಲ್ಲಿ ಗುರುತಿಸುವ ಸವಾಲು ನೀಡಲಾಗಿದೆ.
ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುವುದು ಸಹಜ. ಈ ಚಿತ್ರ ಕೂಡ ಹಾಗೆಯೇ ಇದ್ದು, ಈ ಕಾಡಿನಲ್ಲಿ ಜೀಬ್ರಾಗಳ ಗುಂಪೊಂದಿದೆ. ಆದರೆ ಈ ಚಿತ್ರದಲ್ಲೇ ಸಿಂಹವು ಜಾಣತನದಿಂದ ಅಡಗಿ ಕುಳಿತಿದೆ. ನೀವು ಕೇವಲ 8 ಸೆಕೆಂಡುಗಳಲ್ಲಿ ಆ ಸಿಂಹವನ್ನು ಪತ್ತೆ ಹಚ್ಚಿ ಬುದ್ಧಿವಂತರು ಎನಿಸಿಕೊಳ್ಳಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕೋಳಿ ಮರಿಯನ್ನು ಹುಡುಕಬಲ್ಲಿರಾ
ಸಿಂಹವನ್ನು ಗುರುತಿಸಲು ಸಾಧ್ಯವಾಯಿತೇ?
ಈ ಒಗಟಿನ ಆಟಗಳು ಟೈಮ್ ಪಾಸ್ ಮಾಡುವ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತದೆ. ನೀವು ಈ ಒಗಟು ಬಿಡಿಸುವ ಸವಾಲು ಸ್ವೀಕರಿಸಿ ಸೋತಿದ್ದೀರಬಹುದು. ಆದರೆ ಹೆಚ್ಚು ಚಿಂತಿಸಬೇಡಿ, ನಾವು ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಸಿಂಹ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
