
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ನೋಡಲು ತುಂಬಾನೇ ವಿಚಿತ್ರವಾಗಿರುವುದರ ಜೊತೆಗೆ ಭ್ರಮೆಯನ್ನುಂಟುಮಾಡುವ ಮೂಲಕ ನಮ್ಮ ದೃಷ್ಟಿ, ಮೆದುಳಿಗೆ ಸವಾಲು ಹಾಕುತ್ತವೆ. ಇಂತಹ ಸಾಕಷ್ಟು ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದು ಟೈಮ್ ಪಾಸ್‌ಗಾಗಿ ಇರುವ ಮೋಜಿನ ಆಟ ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುವ ಒಗಟಿನ ಆಟವಾಗಿದೆ. ಇದೀಗ ಇಲ್ಲೊಂದು ಇಂತಹದ್ದೇ ಆಪ್ಟಿಕಲ್ ಚಿತ್ರ ವೈರಲ್ ಆಗಿದ್ದು, ಅದರಲ್ಲಿ ಅಡಗಿರುವ ಬೆಕ್ಕನ್ನು(find the hidden cat) ಹುಡುಕಲು ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸುವ ಮೂಲಕ ನೀವು ನಿಮ್ಮ ದೃಷ್ಟಿ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು Taylor1224M ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಆ ಚಿತ್ರದಲ್ಲಿ ಮರ ಹಾಗೂ ಪೊದೆಯ ಹಿಂದೆ ಅಡಗಿರುವ ಬೆಕ್ಕನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಬರೀ ಹಸಿರು ಗಿಡ ಮರ, ಪೊದೆಗಳು ಕಂಡರೂ, ಈ ಪೊದೆಯ ಮಧ್ಯೆ ಒಂದು ಬೆಕ್ಕು ಅಡಗಿ ಕುಳಿತಿದೆ. ಅಡಗಿ ಕುಳಿತಿರುವ ಆ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.
Find the cat
byu/Taylor1224M inFindTheSniper ಇದನ್ನೂ ಓದಿ
ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಬುದ್ಧಿವಂತಿಕೆವನ್ನು ಪರೀಕ್ಷಿಸಲು ಈ ಆಪ್ಟಿಕಲ್ ಇಲ್ಯೂಷನ್ ಉತ್ತಮ ಮಾರ್ಗವಾಗಿದ್ದು, ಈ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿ. ವೀಕ್ಷಣಾ ಕೌಶಲ್ಯ ಹಾಗೂ ಏಕಾಗ್ರತೆಯನ್ನು ಹೊಂದಿರುವವರಿಗೆ ಮಾತ್ರ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಎಷ್ಟೇ ಹುಡುಕಿದರೂ ಬೆಕ್ಕು ಮಾತ್ರ ಕಾಣಿಸಲೇ ಇಲ್ಲ, ಅಷ್ಟಕ್ಕೂ ಬೆಕ್ಕು ಎಲ್ಲಿದೆ ಎಂಬ ಗೊಂದಲ ಇದ್ಯಾ. ಹಾಗಿದ್ರೆ ಆ ಮರಗಳ ಮಧ್ಯ ಭಾಗಕ್ಕೆ ದೃಷ್ಟಿ ಹಾಯಿಸಿ ನೋಡಿ, ಅಲ್ಲಿ ಕಪ್ಪು ಬೆಕ್ಕೊಂದು ಅಡಗಿ ಕುಳಿತಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನೂ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಿ ಬೆಕ್ಕುಗಳಿಲ್ಲ, ಬರೀ ಕಣ್ಣು ಮಾತ್ರ ಕಾಣುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ ಪ್ರಕಾರ ಅದು ಬೆಕ್ಕಲ್ಲ ಕರಿ ಚಿರತೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೆ ಮಾತ್ರ ಬರೀ ಕಣ್ಣು ಮಾತ್ರ ಕಂಡದ್ದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ