
ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಲು ಸಹಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಈ ಒಗಟಿನ ಆಟಗಳನ್ನು ಬಿಡಿಸುವ ಮಜಾನೇ ಬೇರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಇಂತಹ ಒಗಟನ್ನು ಬಿಡಿಸಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರವು ನೋಡುವುದಕ್ಕೆ ಸರಳವಾಗಿದೆ. ಆದರೆ ಇದರಲ್ಲಿ ಅಡಗಿರುವ ಇಂಗ್ಲಿಷ್ ಅಕ್ಷರಗಳನ್ನು ಹುಡುಕಿ, ಅದನ್ನು ಜೋಡಿಸಿದಾಗ ಇಂಗ್ಲಿಷ್ ಪದಗಳುಸಿಗುತ್ತದೆ. ಆ ಪದಗಳು ಯಾವುದೆಂದು ನೀವು ಇಪ್ಪತ್ತು ಸೆಕೆಂಡುಗಳೊಳಗೆ ಹೇಳಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ದವಿದ್ದರೆ ಈಗಾಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದು ಮಾತ್ರವಲ್ಲದೆ ನಮ್ಮ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇಂತಹ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್ ನಿಮಗಿದ್ರೆ ಇದು ನಿಮಗೆ ನಿಜಕ್ಕೂ ಖುಷಿ ಕೊಡುತ್ತದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಗಂಡ ಹೆಂಡತಿ ಹಾಗೂ ಮಗ ಸೋಫಾದ ಮೇಲೆ ಕುಳಿತು ಪುಸ್ತಕ ಓದುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಇಂಗ್ಲಿಷ್ ಅಕ್ಷರಗಳು ಅಡಗಿವೆ. ಈ ಅಕ್ಷರಗಳನ್ನು ಒಟ್ಟು ಸೇರಿಸಿದರೆ ಒಂದು ಪದವಾಗುತ್ತದೆ. ಈ ಒಗಟನ್ನು ನೀವು ಇಪ್ಪತ್ತು ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು.
ಇದನ್ನೂ ಓದಿ : Optical Illusion : ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?
ಉತ್ತರ ಇಲ್ಲಿದೆ
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಅಕ್ಷರಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಚಿಂತಿಸಬೇಡಿ. ನಾವು ನಿಮಗೆ ಆ ಇಂಗ್ಲಿಷ್ ಅಕ್ಷರಗಳು ಹಾಗೂ ಆ ಇಂಗ್ಲೀಷ್ ಪದ ಯಾವುದೆಂದು ಹೇಳುತ್ತೇವೆ. ಈ ಚಿತ್ರದಲ್ಲಿ ಮಹಿಳೆಯ ಕೈಯಲ್ಲಿರುವ ಪುಸ್ತಕವನ್ನು ಗಮನಿಸಿ, ಈ ಪುಸ್ತಕದ ಮುಖಪುಟದಲ್ಲಿ O, R ಅಕ್ಷರಗಳಿವೆ. ಈ ಮಹಿಳೆ ಧರಿಸಿರುವ ಉಡುಪಿನಲ್ಲಿ T ಹಾಗೂ ಆಕೆಯ ಕೂದಲಿನಲ್ಲಿ S ಅಕ್ಷರಗಳಿವೆ . ಆಕೆಯ ಕಾಲು ಹಾಗೂ ಪುಸ್ತಕದ ನಡುವೆ Y ಅಕ್ಷರವನ್ನು ನೀವು ನೋಡಬಹುದು. ಈ ಎಲ್ಲಾ ಅಕ್ಷರಗಳನ್ನು ಸೇರಿದಾಗ STORY ಎನ್ನುವ ಪದ ಸಿಗುತ್ತದೆ.
ವ್ಯಕ್ತಿಯೊಬ್ಬನು ಕುಳಿತ ಸೋಫಾವನ್ನು ನೋಡಿ, ಆ ಸೋಫಾದ ಮೇಲೆ NOVEL ಎಂಬ ಪದವಿದೆ. ಇನ್ನು ಆ ವ್ಯಕ್ತಿಯ ಕನ್ನಡಕವನ್ನು ಗಮನಿಸಿ, ಕನ್ನಡದ ಎರಡು ಬದಿಯಲ್ಲಿ ಎರಡು O ಅಕ್ಷರಗಳಿವೆ. ಈ ವ್ಯಕ್ತಿಯ ಕಿವಿಯೂ ಇಂಗ್ಲಿಷ್ ವರ್ಣಮಾಲೆಯ B ಅಕ್ಷರದಂತಿದೆ. ಸೋಫಾ ಹಾಗೂ ಟೇಬಲ್ ಲ್ಯಾಂಪ್ ನಡುವೆ K ಅಕ್ಷರವಿದೆ. ಮರವನ್ನು ಗಮನಿಸಿ, ಆ ಮರದಲ್ಲಿ WORDS ಎಂಬ ಪದ ಕಾಣಿಸುತ್ತದೆ. ಸೋಫಾದ ಮೇಲೆ ಮಲಗಿ ಪುಸ್ತಕ ಓದುತ್ತಿರುವ ಹುಡುಗನ ಡ್ರೆಸ್ ಮೇಲೆ PAGE ಪದವು ಇದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Tue, 8 July 25