Optical Illusion: ಮೊಲದ ನಡುವೆ ಅಡಗಿರುವ ಕುದುರೆ ಎಲ್ಲಿದೆ ಎಂದು ಹುಡುಕಿ ನೋಡೋಣ

ಎಲ್ಲರೂ ಇಷ್ಟ ಪಡುವ ಆಟಗಳಲ್ಲಿ ಈ ಒಗಟಿನ ಆಟಗಳು ಕೂಡ ಒಂದು. ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಈ ಒಗಟುಗಳು ಟೈಮ್ ಪಾಸ್‌ಗಾಗಿ ಇರುವುದು ಮಾತ್ರವಲ್ಲ, ಮೆದುಳಿಗೆ ವ್ಯಾಯಾಮ ನೀಡುವುದರಲ್ಲಿ ಎರಡು ಮಾತಿಲ್ಲ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ.

Optical Illusion: ಮೊಲದ ನಡುವೆ ಅಡಗಿರುವ ಕುದುರೆ ಎಲ್ಲಿದೆ ಎಂದು ಹುಡುಕಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Aug 05, 2025 | 12:27 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಕಣ್ಣಿಗೆ ಭ್ರಮೆಯನ್ನುಂಟು ಮಾಡುವುದಲ್ಲದೇ ಮೆದುಳಿಗೆ ವ್ಯಾಯಾಮ ನೀಡುವ ಚಿತ್ರಗಳು ಇವು ಆಗಿದೆ. ಈ ಚಿತ್ರಗಳನ್ನು ಮೊದಲು ನೋಡಿದಾಗ ನಮಗೆ ಬೇರೆ ಇನ್ನೇನೋ ಕಾಣಿಸುತ್ತದೆ. ಅದರಲ್ಲಿ ಅಡಗಿರುವ ಒಗಟಿನ ಉತ್ತರ ಏನೆಂದು ತಿಳಿಯುವುದಿಲ್ಲ. ಈ ಚಿತ್ರಗಳು ನಿಮ್ಮ ಬುದ್ಧಿವಂತಿಕೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆದರೆ ಇದೀಗ ಇಲ್ಲೊಂದು ಇಂತಹದ್ದೇ ಚಿತ್ರವೊಂದು ವೈರಲ್ ಆಗಿದೆ. ಇದು ಮೊಲದ ಚಿತ್ರವಾಗಿದ್ದು, ಇದರಲ್ಲಿ ಅಡಗಿರುವ ಕುದುರೆಯನ್ನು ಗುರುತಿಸಬೇಕು. ಈ ಒಗಟು ಬಿಡಿಸಲು ಕಾಲಮಿತಿ ನೀಡಿಲ್ಲವಾದರೂ ಎಷ್ಟು ಬೇಗ ನೀವು ಉತ್ತರ ಹೇಳುವಿರಿ ನೀವು ಬುದ್ಧಿವಂತರು ಎನ್ನುವುದು ಸಾಭೀತು ಆಗುತ್ತದೆ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೋಡಿದಾಗ ನಿಮಗೆ ಮೊದಲ ನೋಟದಲ್ಲಿ ಕಾಣಿಸುವುದೇ ಮೊಲ. ಸಣ್ಣ ಕಣ್ಣುಗಳು, ದಪ್ಪದಾದ ಬಾಲ ಹೊಂದಿರುವ ಬಿಳಿ ಬಣ್ಣದ ಮೊಲವು ನಿಮ್ಮ ಕಣ್ಣಿಗೆ ಬೀಳುತ್ತದೆ. ಆದರೆ ಈ ಮೊಲವನ್ನು ಸರಿಯಾಗಿ ಗಮನಿಸಿದರೆ ಕುದುರೆಯೊಂದು ಕಾಣಿಸುತ್ತದೆಯಂತೆ. ಮೊಲ ಹಾಗೂ ಕುದುರೆ ನಡುವೆ ಯಾವುದೇ ಭೌತಿಕ ಹೋಲಿಕೆ ಇಲ್ಲ. ಈ ಚಿತ್ರದಲ್ಲಿರುವ ಮೊಲವು ಕುದುರೆಯಾಗಿ ಬದಲಾಗಲು ಸಾಧ್ಯವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಅನಿಸಬಹುದು. ಆದರೆ ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಿ

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಮೂರನೇ ವ್ಯಕ್ತಿಯ ಮುಖವನ್ನು ಹುಡುಕಬಲ್ಲಿರಾ?
ಈ ದಟ್ಟ ಅರಣ್ಯದಲ್ಲಿ ಅಡಗಿರುವ ಚಿರತೆಯನ್ನು ಹುಡುಕಬಲ್ಲಿರಾ?
ಈ ಮರದ ಕೊಂಬೆ ಮೇಲೆ ಎಷ್ಟು ಪಕ್ಷಿಗಳಿವೆ ಎಂದು ಹೇಳಿ ನೋಡಾ?
ಈ ಚಿತ್ರದಲ್ಲಿ ಅಡಗಿರುವ ಬೆಕ್ಕುಗಳೆಷ್ಟು? ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ?

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಮೂರನೇ ವ್ಯಕ್ತಿಯ ಮುಖವನ್ನು ಹುಡುಕಬಲ್ಲಿರಾ?

ಉತ್ತರ ಇಲ್ಲಿದೆ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದರೂ ಕೂಡ ನಿಮಗೆ ಕುದುರೆಯೂ ಕಾಣಿಸುತ್ತಿಲ್ಲವೇ. ಮುದ್ದಾದ ಮೊಲ ಮಾತ್ರ ಕಾಣಿಸುತ್ತಿದೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಒಗಟಿನ ಆಟಗಳನ್ನು ಬಿಡಿಸಲು ಆಗದೇ ಸೋಲುವುದು ಸಹಜ. ಆದರೆ ಕುದುರೆ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಇದೀಗ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮೊಬೈಲ್ ಫೋನನ್ನು ಉಲ್ಟಾ ತಿರುಗಿಕೊಂಡು ಈ ಮೊಲವನ್ನು ನೋಡಿ, ಆಗ ನಿಮಗೆ ಕುದುರೆ ಕಾಣಿಸುತ್ತದೆ. ಈ ಕೆಲವು ಟ್ರಿಕ್ಕಿ ಒಗಟನ್ನು ಬಿಡಿಸುವಾಗ ತಲೆ ಉಪಯೋಗಿಸುವುದು ಬಹಳ ಮುಖ್ಯ ಎನ್ನುವುದನ್ನು ಮರೆಯದಿರಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ