
ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುತ್ತಿದ್ದರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಹೆಚ್ಚಿನವರು ಇಂತಹ ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸುವತ್ತ ಆಸಕ್ತಿ ತೋರಿಸುತ್ತಾರೆ. ಆದರೆ ಈ ಚಿತ್ರವನ್ನು ನೋಡಿದ ಕೂಡಲೇ ಉತ್ತರ ಕಂಡುಕೊಳ್ಳಲು ಕಷ್ಟವಾಗಬಹುದು. ಎಷ್ಟೋ ಸಲ ಭ್ರಮೆಯಲ್ಲಿ ಸಿಲುಕಿಸಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗುವುದೇ ಇಲ್ಲ. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಒಂಬತ್ತು ಪ್ರಾಣಿಗಳನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಿದ್ಧವಿದ್ರೆ ಈಗಿನಿಂದಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
@InterstingSTEM ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವಂತಿದೆ. ಈ ಚಿತ್ರದೊಂದಿಗೆ ಹೀಗೆ ಬರೆದುಕೊಂಡಿದ್ದು, ಇದೊಂದು ಕ್ಲಾಸಿಕ್ ಮೆದುಳಿನ ಟೀಸರ್, ನೀವು ಎಷ್ಟು ಪ್ರಾಣಿಗಳನ್ನು ನೋಡುತ್ತೀರಿ ಎಂದು ಬರೆಯಿರಿ ಎಂದಿದ್ದಾರೆ. ಈ ಚಿತ್ರ ನೋಡಿ ಇದರಲ್ಲಿ ಎಷ್ಟು ಪ್ರಾಣಿಗಳಿವೆ ಎಂದು ಹೇಳಬೇಕು. ಈ ಚಿತ್ರದಲ್ಲಿ ರೇಖೆಗಳು ಒಂದಕ್ಕೊಂದು ಬೆರೆತು ಹೋಗಿದ್ದು ಹೀಗಾಗಿ ಒಗಟು ಹೆಚ್ಚು ಜಟಿಲವಾಗಿದೆ. ಹೀಗಾಗಿ ಪೂರ್ಣ ಗಮನವನ್ನು ಈ ಚಿತ್ರದತ್ತ ಕೇಂದ್ರೀಕರಿಸಿ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ. ಒಂದು ನೆನಪಿರಲಿ ಈ ಒಗಟು ಬಿಡಿಸಲು ಯಾವುದೇ ಸಮಯಾವಕಾಶವಿಲ್ಲ.
A classic brain teaser.
How many animals do you see? pic.twitter.com/Dp8Qk5SM9v
— Interesting STEM (@InterestingSTEM) August 1, 2025
ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?
ಈ ಚಿತ್ರದಲ್ಲಿ ಒಂದಕ್ಕೊಂದು ರೇಖೆಗಳು ಜೋಡಿಸಿಕೊಂಡಿದ್ದು ಇದರಲ್ಲಿ ಪ್ರಾಣಿಗಳು ಅಡಗಿವೆ. ಇಂತಹ ಕೆಲವು ಒಗಟನ್ನು ಬಿಡಿಸುವಾಗ ಹೆಚ್ಚು ಗಮನ ಹರಿಸುವುದು ಮುಖ್ಯ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಾಲ್ಕರಿಂದ ಐದು ಪ್ರಾಣಿಗಳನ್ನು ಸುಲಭವಾಗಿ ಗುರುತಿಸುತ್ತೀರಿ. ಆದರೆ ಇದರಲ್ಲಿ ಅಡಗಿರುವ ಪ್ರಾಣಿಗಳು ಒಂಬತ್ತು. ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಗಮನಹರಿಸಿ ಒಟ್ಟು ಒಂಬತ್ತು ಪ್ರಾಣಿಗಳನ್ನು ಗುರುತಿಸಿ, ಅವುಗಳು ಯಾವುದೆಂದು ಹೇಳಬೇಕು. ಇದು ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟು ಚೆನ್ನಾಗಿದೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಆಗಸ್ಟ್ 1 ರಂದು ಶೇರ್ ಮಾಡಲಾದ ಈ ಪೋಸ್ಟ್ ಇದುವರೆಗೆ ಎಂಭತ್ತು ಸಾವಿರಕ್ಕೂ ಅಧಿಕ ಜನರು ಪ್ರತಿಕ್ರಿಯೆ ನೀಡಿ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಬಳಕೆದಾರರು, ಏಳು ಪ್ರಾಣಿಗಳು ನನ್ನ ಕಣ್ಣಿಗೆ ಕಾಣಿಸಿತು ಎಂದಿದ್ದಾರೆ. ಇನ್ನೊಬ್ಬರು ಇಲ್ಲಿ ಇರುವುದು ನಾಲ್ಕು ಪ್ರಾಣಿಗಳಷ್ಟೇ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ನನ್ನ ಕಣ್ಣಿಗೆ ಬಿದ್ದದ್ದು ಐದು ಪ್ರಾಣಿಗಳು, ಈ ಒಗಟು ಬಿಡಿಸುವುದು ಕಠಿಣವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಾರನ್ನು ಕಂಡುಹಿಡಿಯಬಲ್ಲಿರೇ?
ಉತ್ತರ ಇಲ್ಲಿದೆ
ಎಷ್ಟೇ ಪ್ರಯತ್ನಪಟ್ಟರೂ ನಾಲ್ಕರಿಂದ ಐದು ಪ್ರಾಣಿಗಳನ್ನು ಬಿಟ್ಟರೆ ಉಳಿದ ಪ್ರಾಣಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಅಡಗಿರುವ ಒಂಬತ್ತು ಪ್ರಾಣಿಗಳು ಯಾವುದೆಂದು ನಾವು ನಿಮಗೆ ಹೇಳುತ್ತೇವೆ. ಕರಡಿ, ಹಸು, ತೋಳ, ಮೊಲ, ಕಾಗೆ, ಚಿಟ್ಟೆ, ಬಸವನ ಹುಳು ಸೇರಿದಂತೆ ಒಂದು ಪಕ್ಷಿ ಈ ಚಿತ್ರದಲ್ಲಿ ಅಡಗಿದೆ. ಒಮ್ಮೆ ಏಕಾಗ್ರತೆಯಿಂದ ಈ ಚಿತ್ರದತ್ತ ಕಣ್ಣು ಹಾಯಿಸಿ, ನಾವು ಹೇಳಿದ ಈ ಮೇಲಿನ ಪ್ರಾಣಿಗಳು ನಿಮ್ಮ ಕಣ್ಣಿಗೆ ಬೀಳಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ