Optical Illusion : ಈ ಕಾಡಿನಲ್ಲಿ ನರಿ ಅಡಗಿದೆ, 20 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

| Updated By: ಶ್ರೀದೇವಿ ಕಳಸದ

Updated on: Oct 08, 2022 | 10:35 AM

Brain Teaser : ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಈ ಕಾಡಿನ ಚಿತ್ರ ಬಹಳಷ್ಟು ಜನರಿಗೆ ಸವಾಲಾಗಿ ಪರಿಣಮಿಸಿದೆ. ಶೇ.1 ರಷ್ಟು ಜನರು ಮಾತ್ರ ಉತ್ತರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ?

Optical Illusion : ಈ ಕಾಡಿನಲ್ಲಿ ನರಿ ಅಡಗಿದೆ, 20 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
Optical Illusion Can You Find The Sleeping Fox Hidden In This Forest?
Follow us on

Optical Illusions : ಇತ್ತೀಚೆಗೆ ಸಾಕಷ್ಟು ಬ್ರೇನ್​ಟೀಸರ್​ಗಳನ್ನು ಇದೇ ವೇದಿಕೆಯಲ್ಲಿ ನೋಡಿದ್ದೀರಿ. ಸಾಕಷ್ಟು ಬ್ರೇನ್​ಟೀಸರ್​ಗಳ ಉತ್ತರಗಳನ್ನು ಕಂಡುಹಿಡಿದು ಖುಷಿಪಟ್ಟಿದ್ದೀರಿ. ಆದರೆ ಈಗ ಕೊಟ್ಟಿರುವ ಬ್ರೇನ್ ಟೀಸರ್​ ಮಾತ್ರ ಬಹಳ ಕಷ್ಟಕರ ಎನ್ನುತ್ತಿದ್ದಾರೆ ನೆಟ್ಟಿಗರು. 20 ಸೆಕೆಂಡಿನಲ್ಲಿ ಗುರುತಿಸಲು ಸಾಧ್ಯವಿಲ್ಲ ಎಂದೂ ಹೇಳುತ್ತಿದ್ದಾರೆ. ಅಲ್ಲದೆ ಈ ತನಕ ಶೇ.1ರಷ್ಟು ಜನ ಮಾತ್ರ 20 ಸೆಕೆಂಡುಗಳಲ್ಲಿ ಗುರುತಿಸಲು ಶಕ್ಯವಾಗಿದೆ ಎಂದಿದ್ದಾರೆ. ನಿಮಗೆ ಇದು ಸಾಧ್ಯವಾಗುವುದೆ? ಪ್ರಯತ್ನಿಸಿ.

ಎತ್ತರವಾದ ಮರಗಳಿಂದ ತುಂಬಿದ ಈ ಕಾಡಿನಲ್ಲಿ ಕಾಲುದಾರಿಯೂ ಇದೆ. ಇಲ್ಲೇ ಎಲ್ಲೋ ಅಡಗಿರುವ ನರಿ ನಿದ್ರಿಸುತ್ತಿದೆ. ನಿಮಗೆ ಕೊಟ್ಟಿರುವ ಸಮಯ ಬರೀ 20 ಸೆಕೆಂಡುಗಳು ಮಾತ್ರ. ಹತ್ತಿರದಿಂದ ನೋಡಿದರೆ ನರಿ ಕಾಣುವುದೆ? ಎಷ್ಟೋ ಜನ ಹೀಗೆ ಹತ್ತಿರದಿಂದ ನೋಡಿದರೂ ನರಿಯ ಸುಳಿವು ಸಿಗದೆ ಬೇಸರಪಟ್ಟಿದ್ದಾರೆ.

ಸಿಗಲಿಲ್ಲವಾ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಚಿತ್ರದ ಬಲಮೂಲೆಯ ಆಕಾಶ ಗಮನಿಸಿ. ತೆಳ್ಳಗಿನ ರೆಂಬೆಕೊಂಬೆಗಳ ನಡುವೆ ಮಲಗಿರುವ ನರಿ ಕಾಣುತ್ತದೆ. ಮೊದಲಿಗೆ ಗೋಚರಿಸಲಾಗದು. ಮತ್ತ ಮತ್ತೆ ನೋಡಿ ವೃತ್ತಾಕಾರದಲ್ಲಿ ಮಲಗಿರುವ ನರಿ ಕಾಣುತ್ತದೆ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:33 am, Sat, 8 October 22