Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ?

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಈ ಒಗಟಿನ ಆಟಗಳು ಮೆದುಳಿಗೆ ಕೆಲಸ ನೀಡುವುದರ ಜೊತೆಗೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಇದೀಗ ಇಲ್ಲೊಂದು ಬಹಳ ಕಠಿಣ ಸವಾಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯುವ ಸವಾಲು ನೀಡಲಾಗಿದೆ. ನೀವು ರೆಡಿ ಇದ್ದೀರಾ?.

Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Sep 02, 2025 | 1:00 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿ ಇರುವ ಖುಷಿಯೇ ಬೇರೆ. ಒಮ್ಮೆ ಈ ಒಗಟಿನ ಆಟವನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಕೆಲವರು ತುಂಬಾನೇ ವೇಗವಾಗಿ ಹಾಗೂ ಸುಲಭವಾಗಿ ಒಗಟು ಬಿಡಿಸುತ್ತಾರೆ. ಇನ್ನು ಕೆಲವರು ಎಷ್ಟೇ ಸಮಯ ತೆಗೆದುಕೊಂಡರೂ ಉತ್ತರ ಕಂಡು ಕೊಳ್ಳಲು ಸಾಧ್ಯವಾಗವುದಿಲ್ಲ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ಪ್ರಯತ್ನಿಸಿ. ಈ ಚಿತ್ರದಲ್ಲಿ ಹೂವಿನ ಗಿಡಗಳ ರಾಶಿಯಿದೆ. ಇದರಲ್ಲಿ ಹಾವೊಂದು ಅಡಗಿದೆ. ಈ ಹಾವನ್ನು ನಿರ್ದಿಷ್ಟ ಸಮಯದೊಳಗೆ ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟನ್ನು ಬಿಡಿಸಲು ಸಾಧ್ಯವಾಗುತ್ತಾ ಎಂದು ನೋಡಿ.

ಭ್ರಮೆ ಉಂಟು ಮಾಡುವ ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಫೈಂಡ್ ದಿ ಸ್ನೈಪರ್ ಎಂಬ ಸಬ್‌ರೆಡಿಟ್‌ನಲ್ಲಿ ಓವರ್‌ಆಲ್-ಪೇ-4769 ಎಂಬ ಬಳಕೆದಾರರು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಗಮನಿಸಿದರೆ ಹೊರಾಂಗಣ ದೃಶ್ಯವನ್ನು ಕಾಣಬಹುದು. ಬೆಂಚ್‌ ನಂತೆ ಇರುವುದರ ಮೇಲೆ ಹೂವಿನ ಗಿಡವನ್ನು ಇಡಲಾಗಿದೆ. ಈ ದೃಶ್ಯದಲ್ಲಿ ಜಾಣತನದಿಂದ ಹಾವನ್ನು ಮರೆಮಾಡಲಾಗಿದೆ. ಈ ಹಾವನ್ನು ನೀವು ಕಂಡು ಹಿಡಿಯಬೇಕು. ಆದರೆ ಈ ಒಗಟನ್ನು ಬಿಡಿಸಲು ನಿಮಗಿರುವ ಸಮಯ ಹತ್ತು ಸೆಕೆಂಡುಗಳು ಮಾತ್ರ. ಒಂದು ವೇಳೆ ನೀವು ಈ ಸವಾಲನ್ನು ಪೂರ್ಣಗೊಳಿಸಿದರೆ ನಿಮ್ಮ ವೀಕ್ಷಣಾ ಕೌಶಲ್ಯವು ಚೆನ್ನಾಗಿದೆ ಎನ್ನುವುದು ನೂರಕ್ಕೆ ನೂರರಷ್ಟು ಖಚಿತವಾಗುತ್ತದೆ.

ಇದನ್ನೂ ಓದಿ
ಹಾರುವ ಪಕ್ಷಿಗಳ ನಡುವೆ ಹಾರಲಾಗದ ಹಕ್ಕಿ ಎಲ್ಲಿದೆ ಎಂದು ಹುಡುಕಿ
ಈ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಆಮೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಬಹುದೇ?
ಈ ಚಿತ್ರದಲ್ಲಿ ಅಡಗಿರುವ ಅಳಿಲನ್ನು 20 ಸೆಕೆಂಡುಗಳಲ್ಲಿ ಪತ್ತೆಹಚ್ಚಿ

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಸವಾಲನ್ನು ಸ್ವೀಕರಿಸಿದ್ದೀರಾ?

ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ. ಈ ರೀತಿ ಮಾಡುವುದರಿಂದ ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡುಹಿಡಿಯಲು ನಿಮಗೆ ಸುಲಭವಾಗುತ್ತದೆ. ಈ ಸರೀಸೃಪದ ಬಣ್ಣವು ಈ ಹೂವಿನ ಗಿಡಗಳ ಬಣ್ಣದೊಂದಿಗೆ ಬೆರೆತು ಹೋಗಿರುವ ಕಾರಣ ಉತ್ತರ ಹುಡುಕಲು ಕಷ್ಟವಾಗಬಹುದು. ಆದರೆ ಒಮ್ಮೆ ಪ್ರಯತ್ನಿಸಿ ನೋಡಿ, ಈ ಒಗಟಿನ ಆಟದಲ್ಲಿ ನೀವು ಗೆಲ್ಲಬಹುದು.

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಹಾರುವ ಪಕ್ಷಿಗಳ ನಡುವೆ ಹಾರಲಾಗದ ಹಕ್ಕಿ ಎಲ್ಲಿದೆ ಎಂದು ಹುಡುಕಿ

ಹಾವು ನಿಮ್ಮ ಕಣ್ಣಿಗೆ ಕಾಣಿಸಿತೇ?

ನೀವು ಎಷ್ಟೇ ಪ್ರಯತ್ನಿಸಿದರೂ, ಈ ಚಿತ್ರದತ್ತ ಕಣ್ಣುಹಾಯಿಸಿದರೂ ಹಾವು ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ, ಚಿಂತಿಸಬೇಡಿ. ಹಾವು ಎಲ್ಲಿದೆ ಎನ್ನುವ ಸುಳಿವನ್ನು ನಾವು ನಿಮಗೆ ನೀಡುತ್ತೇವೆ. ಚಿತ್ರದ ಮಧ್ಯಭಾಗದತ್ತ ಹೆಚ್ಚು ಗಮನ ಹರಿಸಿ. ಹೂವಿನ ಗಿಡದ ಕಾಂಡದ ಮೇಲೆ ಹಚ್ಚಹಸಿರಿನ ಬಣ್ಣದ ಹಾವಿನ ತಲೆಯಿದೆ. ನಿಮ್ಮ ಕಣ್ಣಿಗೆ ಈ ಹಾವು ಕಾಣಿಸಿತು, ಕೊನೆಗೆ ಉತ್ತರ ಕಂಡು ಕೊಳ್ಳಲು ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:59 pm, Tue, 2 September 25