Optical Illusion : ಇಂಥ ಸಾಕಷ್ಟು ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಮೆದುಳನ್ನು ಚುರುಕುಗೊಳಿಸುವ ಇಂಥ ಚಟುವಟಿಕೆಗಳನ್ನು ಆಡಿದ್ಧೀರಿ. ಈಗ ಈ ಚಿತ್ರದಲ್ಲಿ ಸಾಮಾನುಗಳ ರಾಶಿ ಬಿದ್ದಿದೆ. ಹತ್ತು ಸೆಕೆಂಡಿನಲ್ಲಿ ಈ ಹುಡುಗನ ಬೂಟನ್ನು ನೀವು ಹುಡುಕಬಹುದೆ? ಇಂಥ ಆಪ್ಟಿಕಲ್ ಇಲ್ಲ್ಯೂಷನ್ಗಳನ್ನು ಆಗಾಗ ನೋಡಿ ಉತ್ತರ ಕಂಡುಕೊಳ್ಳುವುದರಿಂದ ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ಹಾಗೆಯೇ ನಿಮ್ಮ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಯಂತ್ರದಂತೆ ಕೆಲಸ ಮಾಡುವ ಮೆದುಳಿಗೆ ಬ್ರೇಕ್ ಕೊಟ್ಟು, ಅದನ್ನು ಈ ಮೂಲಕ ಚುರುಕುಗೊಳಿಸಿದಂತೆಯೂ ಆಗುತ್ತದೆ.
ಈ ಬೂಟನ್ನು ಗುರುತಿಸುವಲ್ಲಿ ಕೇವಲ ಶೇ 1. ನೆಟ್ಟಿಗರು ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಒಂದು ನಿಮಿಷ ತೆಗೆದುಕೊಂಡರೂ ಗುರುತಿಸುವಲ್ಲಿ ಸೋತಿದ್ದಾರೆ. ಕೆಲವರಂತೂ ಇದು ಬಹಳ ಕ್ಲಿಷ್ಟಕರ ಎಂದಿದ್ದಾರೆ. ನಿಮಗೆ ಗುರುತಿಸಲು ಸಾಧ್ಯವಾತ್ತದೆಯಾ ನೋಡಿ ಒಮ್ಮೆ.
ಚಿಕ್ಕ ಸುಳಿವು ಬೇಕಾ? ಬೆಡ್ ಲ್ಯಾಂಪಿನ ಬಳಿ ಗಮನಿಸಿ. ಈಗಲೂ ಗೊತ್ತಾಗುತ್ತಿಲ್ಲವಾ? ಅದರ ಪಕ್ಕದಲ್ಲಿ ಆಟಿಕೆಸಾಮಾನುಗಳಿಂದ ತುಂಬಿದ ಬಾಕ್ಸ್ ಇದೆ. ಅದರ ಮೂಲೆಗೆ ಅಂಟಿಕೊಂಡಿರುವ ಜಾಗ ಗಮನಿಸಿ.
ಈಗ ಸಿಕ್ಕಿತಲ್ಲವಾ ಬೂಟು? ಸುಳಿವು ಕೊಡದೇ ಇಂಥ ಚಿತ್ರಗಳಲ್ಲಿ ನಿರ್ಧಿಷ್ಟವಾದುದನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದನ್ನು ನೆಟ್ಟಿಗರೂ ಕೂಡ ಹೇಳುತ್ತಿದ್ದಾರೆ. ಆದರೂ ಪ್ರಯತ್ನ ಬಿಡಬಾರದಲ್ಲವೆ?
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:58 pm, Sat, 22 October 22