‘ತುಳಸಿ! ನನ್ನ ಕಾರಿನಲ್ಲಿ ಈ ಬಾಟಲಿ ನೋಡಿ ನಾಚಿ ನೀರಾದೆ’; ಸ್ಮೃತಿ ಇರಾನಿ
Smriti Irani : ಆ ‘ತುಳಸಿ’ಯು ಈ ‘ತುಳಸಿ’ ನೀರನ್ನು ಕುಡಿದಾಗ! ಸ್ಮೃತಿ ಇರಾನಿ ಇನ್ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಹಾಕಿದ್ದಾರೆ. ನಟ ರೋನಿತ್ ರಾಯ್ Lol! How Cool! ಎಂದಿದ್ದಾರೆ.
Viral : ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಆಗಾಗ ಇಂಥ ಪೋಸ್ಟ್ಗಳನ್ನು ಹಂಚಿಕೊಂಡು ನೆಟ್ಟಿಗರನ್ನು ನಗಿಸುತ್ತಿರುತ್ತಾರೆ. ಕೆಲವರು ಇವರ ಪೋಸ್ಟ್ಗಳನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ನಕ್ಕು ಸುಮ್ಮನಾಗಿಬಿಡುತ್ತಾರೆ. ಈ ಸಲ ತುಳಸಿ ಬ್ರ್ಯಾಂಡ್ನ ಮಿನರಲ್ ವಾಟರ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ‘ಕ್ಯೂಂಕೀ ಸಾಸ್ ಭೀ ಕಭೀ ಬಹೂ ಥೀ’ಯ ತುಳಸಿಯ ಕೈಯಲ್ಲಿ ಈ ತುಳಸಿ ಬಂದಾಗ ನಗೆಯುಕ್ಕದೆ ಇದ್ದೀತೇ? ಈ ಧಾರಾವಾಹಿಯಲ್ಲಿ ನಟಿಸಿದ್ದ ಅವರ ಸಹನಟ ರೋನಿತ್ ರಾಯ್ ಕೂಡ ಇವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿView this post on Instagram
ಈ ಪೋಸ್ಟ್ ಅನ್ನು 42,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ಧಾರಾವಾಹಿಯ ನಟನಟಿಯರೆಲ್ಲರೂ ಅಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ತುಳಸಿಯ ಗಂಡನ ಪಾತ್ರಧಾರಿ ರೋನಿತ್, ‘Lol! How Cool’ ಎಂದಿದ್ದಾರೆ. ಅದಕ್ಕೆ ಸ್ಮೃತಿ, ಹಣೆ ಚಚ್ಚಿಕೊಳ್ಳುವ ಎಮೊಟಿಕಾನ್ ಹಾಕಿದ್ದಾರೆ. ‘ನೀವು ಬಹಳ ಕೂಲ್ ಆಗಿರುವಿರಿ’ ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಗ್ರೇಟ್!’ ಎಂದು ಮತ್ತೂ ಒಬ್ಬರು ಹೇಳಿದ್ದಾರೆ.
ಅಂತೂ ತುಳಸಿಯು ತುಳಸಿನೀರನ್ನು ಕುಡಿದಳು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:17 am, Sat, 22 October 22